ದಾವಣಗೆರೆ: ಆಸ್ತಿ ವಿಚಾರವಾಗಿ ಸಂಬಂಧಿಗಳ ನಡುವೆ ಕಲಹ ನಡೆದಿದ್ದು, ಓರ್ವ ವ್ಯಕ್ತಿಯನ್ನು ತೋಟದ ದಾರಿಯಲ್ಲಿ ಮಚ್ಚಿನಿಂದ ತಲೆಗೆ ಹೊಡೆದು ಕೊಲೆ ಮಾಡಿದ ಘಟನೆ ನಡೆದಿದೆ. ಚನ್ನಗಿರಿ ತಾಲೂಕಿನ ದೊಂದರಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಕೊಲೆ ನಂತರ ಆರೋಪಿ ಪರಾರಿಯಾಗಿದ್ದಾನೆ.
ತಾಲೂಕಿನ ಕೆಂಪಯ್ಯನತೊಕ್ಕಲು ಗ್ರಾಮದ ಹನುಮಂತ (40) ಕೊಲೆಯಾದ ವ್ಯಕ್ತಿ.ಅಜ್ಜಿಹಳ್ಳಿ ಗ್ರಾಮದ ರಂಗನಾಥ ಕೊಲೆ ಮಾಡಿ ಪರಾರಿಯಾಗಿರುವ ಆರೋಪಿ. ಕೊಲೆಯಾದ ಹನುಮಂತ ಮತ್ತು ಕೊಲೆ ಮಾಡಿದ ರಂಗನಾಥ ಇಬ್ಬರು ಭಾವ-ಬಾವೈದುನರಾಗಿದ್ದು, ಕೊಲೆಯಾದ ಹನುಮಂತ ರಂಗನಾಥನ ಸಹೋದರಿ
ಆಶಾಳನ್ನು ವಿವಾಹವಾಗಿದ್ದ. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದರು.
ಹನುಮಂತ ಮದುವೆಯಾದ ಕೆಲ ವರ್ಷಗಳ ನಂತರ ಆಶಾಳನ್ನು ಬಿಟ್ಟು ಶೋಭಾ ಎಂಬಾಕೆಯನ್ನು ಎರಡನೇ ಮದುವೆಯಾಗಿದ್ದನು. ಆದರೆ, ಇನ್ಬರು ಮಕ್ಕಳು ಮೃತ ಹನುಮಂತನ ಬಳಿಯೇ ಇದ್ದವು. ನಿನ್ನ ಸಹೋದರಿಯ ಮಕ್ಕಳನ್ನು ನಾನು ಸಾಕುತ್ತಿದ್ದೇನೆ. ನಿನ್ನ
ಜಮೀನಿನಲ್ಲಿ ಭಾಗ ಕೊಡು ಎಂದು ರಂಗನಾಥನಿಗೆ ಕೇಳಿದ್ದ ಎಂಬ ವಿಚಾರಕ್ಕೆ ಈ ಹಿಂದಿನಿಲೂ ಜಗಳ ನಡೆಯುತ್ತಿತ್ತು.
ಹನುಮಂತ ಮತ್ತು ರಂಗನಾಥ ಜಮೀನು ಒಂದೆ ಕಡೆ ಇದ್ದವು. ಬೆಳ್ಳಿಗ್ಗೆ ಹನುಮಂತ ತನ್ನ ದ್ವಿಚಕ್ರ ವಾಹನದಲ್ಲಿ ಹೋಗುವಾಗ ರಂಗನಾಥನ ತಂದೆ ರಾಜಪ್ಪನನ್ನು ಬೈಕ್ ನಲ್ಲಿ ಹತ್ತಿಸಿಕೊಂಡು ಹೋಗಿದ್ದಾನೆ. ದಾರಿಯಲ್ಲಿ ಹೋಗುತ್ತಿದ್ದಾಗ ನನ್ನ ತಂದೆಯನ್ನು ನಿನ್ನ ಬೈಕ್‌ನಲ್ಲಿ ಏಕೆ ಹತ್ತಿಸಿಕೊಂಡು ಬಂದೆ ಎಂದು ರಂಗನಾಥನು ಕೇಳಿದ್ದಾನೆ. ಇದೇ ವಿಚಾರವಾಗಿ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ಈ ವೇಳೆ ರಂಗನಾಥನು ಹನುಮಂತನ ತಲೆಗೆ ಬಲವಾಗಿ ಮಚ್ಚಿನಿಂದ ಹೊಡೆದು ಕೊಲೆ ಮಾಡಿ ಅಲ್ಲಿಂದ
ಆರೋಪಿ ಪರಾರಿಯಾಗಿದ್ದಾನೆ.



