ದಾವಣಗೆರೆ: ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಭದ್ರಾವತಿ ತಾಲ್ಲೂಕಿನ ಹಂತ – 2ರಲ್ಲಿ ಎಂಟು ಕಾಮಗಾರಿಗಳ ಸುಮಾರು 60 ಲಕ್ಷ ವೆಚ್ಚ ಕಾಮಗಾರಿಗೆ ಕಾಡಾ ಅಧ್ಯಕ್ಷ ಪವಿತ್ರಾ ರಾಮಯ್ಯ ಚಾಲನೆ ನೀಡಿದರು.
ಭದ್ರಾವತಿಯ ಬಸಲಿಕಟ್ಟೆ, ವೀರಾಪುರ, ದೊಡ್ಡಗೊಪ್ಪೇನಹಳ್ಳಿ, ಕಾಗೇಕೊಡಮಗ್ಗಿ, ತಳ್ಳಿಕಟ್ಟೆ, ಹೊಸಳ್ಳಿ, ಸಿಗೇಬಾಗಿ ಗ್ರಾಮಗಳಲ್ಲಿ ಜಮೀನುಗಳಿಗೆ ಹೋಗುವ ಅಚ್ಚುಕಟ್ಟು ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ಶ್ರೀದೇವಿ , ಕಿರಿಯ ಅಭಿಯಂತರ ಪುನೀತ್ ಹಾಗೂ ಕಿರಣ್ , ಮಂಡಲ ರೈತ ಮೋರ್ಚಾ ಅಧ್ಯಕ್ಷ ನಾಗರಾಜ್ ಅಂಬೋರೆ , ಗ್ರಾಮದ ಪ್ರಮುಖರಾದ ಗಜೇಂದ್ರ ಜೈನ್, ಕಾಲಭೈರವೇಶ್ವರ ಟ್ರಸ್ಟ್ ಅಧ್ಯಕ್ಷ ಜಗದೀಶ್ ಅವರು, ರಮೇಶ್, ಗ್ರಾಮ ಪಂಚಾಯಿತಿ ಸದಸ್ಯರಾದ ರಂಗನಾಥ್ ಹಾಗೂ ಹಲವಾರು ಪ್ರಮುಖರು ಉಪಸ್ಥಿತರಿದ್ದರು.