ದಾವಣಗೆರೆ: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿ೦ದ ಶಿಶಿಕ್ಷು(ಅಪ್ರೆ೦ಟಿಸ್) ಮೇಳವನ್ನು ಮಾ.13 ರಂದು ನಗರದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾಗಿದೆ.
ಮೇಳದಲ್ಲಿ ಖಾಸಗಿ ಕಂಪನಿಗಳು ಭಾವವಹಿಸಿ ನೇಮಕಾತಿ ಮಾಡಿಕೊಳ್ಳಲಾಗುವುದು. ಎಸ್ಎಸ್‌ಎಲ್‌ಸಿ, ಐಟಿಐ ಹಾಗೂ ಐಟಿಐ ಅ೦ತಿಮ ವರ್ಷದ ವಿದ್ಯಾರ್ಥಿಗಳು ಭಾಗವಹಿಸಬಹುದು. ಮೇಳದಲ್ಲಿ ಭಾಗವಹಿಸಲು ಇಚ್ಚಿಸುವ ಅಭ್ಯಾರ್ಥಿಗಳು ಮಾ.12 ರೊಳಗೆ ವೆಬ್ ಸೈಟ್ ಮೂಲಕ ನೋಂದಾಯಿಸಿಕೊಳ್ಳಬೇಕು ಮತ್ತು ಎಸ್‌ಎಸ್‌ಎಲ್‌ಸಿ ಮಾಕ್ಸ್ ಕಾರ್ಡ್, ಐಟಿಐ ಮಾಕ್ಸ್ , ಕಾರ್ಡ್, ಪೋಟೋ, ಆಧಾರ್ ಕಾರ್ಡ್, ಬಯೋಡೇಟಾದ 2 ಪ್ರತಿಗಳನ್ನು ತೆಗೆದುಕೊಂಡು ಬರಬೇಕು ಎಂದು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ತಿಳಿಸಿದ್ದಾರೆ.



