Connect with us

Dvgsuddi Kannada | online news portal | Kannada news online

ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ; ದಾವಣಗೆರೆ ಕಂದಾಯ ಇಲಾಖೆಯಲ್ಲಿ 54 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ದಾವಣಗೆರೆ

ಉದ್ಯೋಗ ಆಕಾಂಕ್ಷಿಗಳಿಗೆ ಸಿಹಿ ಸುದ್ದಿ; ದಾವಣಗೆರೆ ಕಂದಾಯ ಇಲಾಖೆಯಲ್ಲಿ 54 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿನ ಕಂದಾಯ ಇಲಾಖೆ ಕಚೇರಿಗಳಲ್ಲಿ ಖಾಲಿ ಇರುವ ಶೀಘ್ರಲಿಪಿಗಾರ (ಸ್ಟೆನೋ), ಬೆರಳಚ್ಚುಗಾರರು (ಡಾಟಾ ಎಂಟ್ರಿ ಆಪರೇಟರ್), ಡಿ-ಗ್ರೂಪ್, ಸೆಕ್ಯೂರಿಟಿ ಗಾಡ್ರ್ಸ್, ಸ್ವಚ್ಛತಾ ಸಿಬ್ಬಂದಿಗಳು, ಗಾರ್ಡನರ್ಸ್, ಲಿಫ್ಟ್ ಆಪರೇಟರ್ ಸೇರಿದಂತೆ ಒಟ್ಟು 54 ಸಿಬ್ಬಂದಿಗಳನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಲು ಉದ್ದೇಶಿಸಲಾಗಿದ್ದು, ಆಸಕ್ತ ಗುತ್ತಿಗೆದಾರರಿಂದ ಇ-ಪ್ರೊಕ್ಯೂರ್‍ಮೆಂಟ್ ಪೋರ್ಟಲ್ ಮೂಲಕ ಟೆಂಡರ್ ಆಹ್ವಾನಿಸಲಾಗಿದೆ.

ಇಎಂಡಿ ಮೊತ್ತ 1.50 ಲಕ್ಷ ರೂ., ಆಸಕ್ತರು ನಿಯಮಾನುಸಾರ ಶುಲ್ಕ ಪಾವತಿಸಿ ಟೆಂಡರ್ ಅರ್ಜಿಯನ್ನು ಏ. 30 ರಂದು ಸಂಜೆ 5.30 ರ ಒಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಯನ್ನು https://eproc.karnataka.gov.in ನಲ್ಲಿ ಅಥವಾ ಕಚೇರಿ ಆಡಳಿತ ಶಾಖೆಯಲ್ಲಿ ಪಡೆಯಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top