ದಾವಣಗೆರೆ: ಜಿಲ್ಲೆಯ ಹೊನ್ನಾಳಿ ಪಟ್ಟಣದ ಕೆಂಚೆದೇವರ ಬೀರಲಿಂಗೇಶ್ವರ ದೇವಾಲಯದ ಪೂಜಾರಿ ಎಚ್. ಕೆ. ಕುಮಾರ್ ( 40 ) ಅವರನ್ನು ಹೊರ ವಲಯದ ಎಚ್. ಕಡದಹಳ್ಳಿ ಸಮೀಪ ಭೀಕರವಾಗಿ ಹತ್ಯೆ ಮಾಡಲಾಗಿದೆ.
ಬೀರಲಿಂಗೇಶ್ವರ ದೇವಸ್ಥಾನದ ಪೂಜಾ ಕಾರ್ಯ ಮೂಲಕ ಕುಮಾರ್ ಪಟ್ಟಣದಲ್ಲಿ ಚಿರಪರಿಚಿತರಾಗಿದ್ದರು. ದುಷ್ಕರ್ಮಿಗಳು ಪಟ್ಟಣದ ಹೊರ ವಲಯದ ಜಮೀನೊಂದರಲ್ಲಿ ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ಕೊಲೆ ಘಟನಾ ಸ್ಥಳಕ್ಕೆ ಪೋಲಿಸ್ ಅಧೀಕ್ಷಕ ಸಿ.ಬಿ.ರಿಷ್ಯಂತ್ ಭೇಟಿ ನೀಡಿ ಪರಿಶೀಲಿಸಿದರು. ಕೊಲೆ ಪ್ರಕರಣದ ತನಿಖಾಧಿಕಾರಿಗಳಿಗೆ ಸೂಕ್ತವಾಗಿ ತನಿಖೆ ನಡೆಸುವಂತೆ ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಆರ್.ಬಿ.ಬಸರಗಿ, ಚನ್ನಗಿರಿ ಡಿವೈಎಸ್ಪಿ ಸಂತೋಷ ಕೆ.ಎಂ., ಹೊನ್ನಾಳಿ ಸಿಪಿಐ ದೇವರಾಜ್ ಉಪಸ್ಥಿತರಿದ್ದರು.