ಹೊನ್ನಾಳಿ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮೂಲಕ ಮೆಕ್ಕೆಜೋಳವನ್ನು (maize) ನಾಳೆಯಿಂದ (ಜ.12) ಪ್ರತಿ ಕ್ವಿಂಟಲ್ ಗೆ 2,150 ರೂ. ದರದಲ್ಲಿ ಖರೀದಿ ಕೇಂದ್ರ ತೆರೆಯಲಾಗುವುದು. ಎಪಿಎಂಸಿ ನೋಂದಾಯಿತ ವರ್ತಕರು ಮೆಕ್ಕೆಜೋಳ ಖರೀದಿ ಸಲು ಮುಂದೆ ಬರಬೇಕು ಹಾಗೂ ರೈತರು ತಾವು ಬೆಳೆದ ಬೆಳೆಯನ್ನು ಮಾರುಕಟ್ಟೆಗೆ ತರುವ ಮೂಲಕ ಈ ಅವಕಾಶ ಬಳಸಿಕೊಳ್ಳಬೇಕು ಎಂದು ಶಾಸಕ ಡಿ.ಜಿ. ಶಾಂತನಗೌಡ ತಿಳಿಸಿದರು.
ದಾವಣಗೆರೆ: ಕಾರಿನಲ್ಲಿ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬಿಜೆಪಿ ಮಾಜಿ ಕಾರ್ಪೊರೇಟರ್ ಶವ ಪತ್ತೆ
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,, 2025-26ನೇ ಸಾಲಿನ ಮುಂಗಾರು ಹಂಗಾಮಿನ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆಯಡಿ ಮೆಕ್ಕೆಜೋಳವನ್ನು ನಿಯಂತ್ರಿತ ಮಾರುಕಟ್ಟೆಗಳಲ್ಲಿ ನಡೆಯುವ ಸರಾಸರಿ ವಹಿವಾಟಿನ ಧಾರಣೆ ಆಧಾರದ ಮೇಲೆ ರೈತರಿಗೆ ಬೆಲೆ ವ್ಯತ್ಯಾಸದ ಮೊತ್ತವನ್ನು ಪಾವತಿಸಲು ಸರ್ಕಾರ ಸೂಚನೆ ನೀಡಿದೆ ಎಂದು ವಿವರಿಸಿದರು.
ದಾವಣಗೆರೆ: ಕೊಂಡಜ್ಜಿ ಪೊಲೀಸ್ ಪಬ್ಲಿಕ್ ಶಾಲೆಗೆ ಶಿಕ್ಷಕರ ಭರ್ತಿಗೆ ಅರ್ಜಿ ಆಹ್ವಾನ
12 ಜಿಲ್ಲೆಗಳಲ್ಲಿ ಖರೀದಿ
ಮೆಕ್ಕೆಜೋಳದ ವಿಸ್ತೀರ್ಣ ಮತ್ತು ಉತ್ಪಾದನೆಯನ್ನು ಆಧರಿಸಿ, ಜಿಲ್ಲೆಯೂ ಸೇರಿದಂತೆ ಒಟ್ಟು 12 ಜಿಲ್ಲೆಗಳಲ್ಲಿ ಗರಿಷ್ಠ 4 ಲಕ್ಷ ಮೆಟ್ರಿಕ್ ಟನ್ ಪ್ರಮಾಣದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಉಳಿದ ಜಿಲ್ಲೆಗಳಲ್ಲಿ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿಗಳ ಶಿಫಾರಸ್ಸು ಲಭ್ಯವಾದಲ್ಲಿ ಅಲ್ಲಿಯೂ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಸರ್ಕಾರಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಹೆಚ್ವುವರಿ ಹಣ ರೈತರ ಖಾತೆಗೆ ಜಮಾ
ಮೆಕ್ಕೆಜೋಳಕ್ಕೆ ಸರ್ಕಾರವು ಸರಾಸರಿಯಾಗಿ ಪ್ರತಿ ಕ್ವಿಂಟಾಲ್‌ಗೆ 2,150 ರೂ. ಬೆಂಬಲ ಬೆಲೆ ನಿಗದಿಪಡಿಸಿದ್ದು, ಈಗಾಗಲೇ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್‌ಗೆ ಅಂದಾಜು 1,900 ರೂಪಾಯಿಗಳಂತೆ ವಹಿವಾಟು ನಡೆಯುತ್ತಿದೆ. ಉದಾಹಣಗೆ ಎಪಿಎಂಸಿಯಲ್ಲಿ ರೈತರ ಮೆಕ್ಕೆಜೋಳ 19,00 ರೂ.ಗೇ ಮಾರಾಟವಾದ್ರೆ ಹೆಚ್ಚುವರಿ 250 ರೂ. ಸರ್ಕಾರ ರೈತರ ಖಾತೆಗೆ ಜಮಾ ಮಾಡಲಿದೆ. ಇದರರಂರೆ 2000/,ರೂ. ಖರೀದಿಸಿದ್ರೆ ಸರ್ಕಾರ 150 ರೂ. ಹಣ ಜಮಾ ಆಗಲಿದೆ ಎಂದು ತಿಳಿಸಿದರು.
ಯಾವ ದಾಖಲೆ ಅಗತ್ಯ..?
ಮೆಕ್ಕೆಜೋಳ ರೈತರು ತಮ್ಮ ಆಧಾರ್ ಕಾರ್ಡ್, ಪಹಣಿ ಮತ್ತು ಕೃಷಿ ಇಲಾಖೆ ನೀಡಿರುವ ಎಫ್.ಐ.ಡಿ ಸಂಖ್ಯೆಯನ್ನು ನೀಡಿ ಸಹಕಾರ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳಬೇಕು. ನೋಂದಣಿಯಾದ ನಂತರ, ಮಾರುಕಟ್ಟೆ ದರ ಹಾಗೂ ಬೆಂಬಲ ಬೆಲೆಯ ನಡುವಿನ ವ್ಯತ್ಯಾಸದ ಮೊತ್ತವನ್ನು ರೈತರ ಖಾತೆಗೆ ಪಾವತಿಸಲಾಗುವುದು. ಜನವರಿ 12ರಿಂದ ಆರಂಭಗೊಂಡು ಒಂದು ತಿಂಗಳ ಕಾಲ ನಡೆಯಲಿದೆ ಎಂದು ಶಾಸಕರು ತಿಳಿಸಿದರು.
ದಾವಣಗೆರೆ ದಕ್ಷಿಣಕ್ಕೆ ಎಸ್.ಎಸ್.ಗಣೇಶ್ ಅಭ್ಯರ್ಥಿಯಾಗಲಿ; ಬಿಜೆಪಿ ಹಿರಿಯ ನಾಯಕ ರವೀಂದ್ರನಾಥ್
ಸುದ್ದಿಗೋಷ್ಠಿಯಲ್ಲಿ ಎಪಿಎಂಸಿ ಮಾಜಿ ಅಧ್ಯಕ್ಷ ಎ.ಜಿ. ಪ್ರಕಾಶ್, ಓಬಿಸಿ ರಾಜ್ಯ ಉಪಾಧ್ಯಕ್ಷ ಎಚ್.ಎ. ಉಮಾಪತಿ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಸಣ್ಣಕ್ಕಿ ಬಸನಗೌಡ, ಸಾಸ್ವೇಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್. ನಾಗಪ್ಪ, ಕೆಪಿಸಿಸಿ ಸದಸ್ಯ ಡಾ. ಈಶ್ವರನಾಯ್ಕ, ಎಪಿಎಂಸಿ ಕಾರ್ಯದರ್ಶಿ ಮಂಜುನಾಥ ಹಾಗೂ ಇತರರು ಉಪಸ್ಥಿತರಿದ್ದರು.



