ದಾವಣಗೆರೆ: ಜಿಲ್ಲಾ ಪೊಲೀಸ್ ವತಿಯಿಂದ ರಸ್ತೆ ಅಪಘಾತಗಳಲ್ಲಿ ಜಿಲ್ಲೆಯಲ್ಲಿ 25 ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಮೃತರ ಕುಟುಂಬ ಹಾಗೂ ಗಾಯಾಳುಗಳಿಗೆ ಜಿಲ್ಲಾಧಿಕಾರಿಗಳಿಂದ ಪರಿಹಾರ ಕೊಡಿಸಲಾಗಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ.
ಗಾಯಗೊಂಡ್ರೆ 50 ಸಾವಿರ, ಮೃತಪಟ್ರೆ 2 ಲಕ್ಷ ಪರಿಹಾರ
ಕೇಂದ್ರ ಸರ್ಕಾರವು ಹೊರಡಿಸಿರುವ ಅಧಿಸೂಚನೆಯಲ್ಲಿ ಮೋಟಾರು ವಾಹನ ಕಾಯ್ದೆ-1988ರಡಿ, ಸೆಕ್ಷನ್ 161 ರಲ್ಲಿ ‘‘Compensation to victims of Hit and Run Motor Accidents Schems, 2022’’ ರ ಸೊಲಾಟಿಯಂ ಯೋಜನೆಯಡಿ ರಸ್ತೆ ಅಪಘಾತಗಳ ಹಿಟ್ & ರನ್ ಪ್ರಕರಣಗಳಲ್ಲಿ ಗಾಯಗೊಂಡವರಿಗೆ ರೂ.50,000/- ಗಳನ್ನು ಮತ್ತು ಮೃತಪಟ್ಟ ಅವಲಂಬಿತ ಕುಟುಂಬದ ಸದಸ್ಯರುಗಳಿಗೆ ರೂ.2,00,000/-ಗಳ ಪರಿಹಾರ ಮೊತ್ತವನ್ನು ನೀಡಲಾಗುತ್ತದೆ.
ಅದರಂತೆ 2024ನೇ ಸಾಲಿನಿಂದ ಈವರೆಗೆ ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ಒಟ್ಟು 25 ಹಿಟ್ ಅಂಡ್ ರನ್ ಪ್ರಕರಣಗಳಲ್ಲಿ ಮೃತರ ಕುಟುಂಬ ಹಾಗೂ ಗಾಯಾಳುಗಳಿಗೆ ಜಿಲ್ಲಾಧಿಕಾರಿಗಳಿಂದ ಪರಿಹಾರಕೊಡಿಸಲಾಗಿದೆ.
ಸದರಿ ಯೋಜನೆಯಡಿಯಲ್ಲಿ ಸಾರ್ವಜನಿಕರು ರಸ್ತೆ ಅಪಘಾತಗಳ ಹಿಟ್ & ರನ್ ಪ್ರಕರಣಗಳಲ್ಲಿ ಗಾಯಗೊಂಡಿದ್ದರೆ ಗಾಯಗೊಂಡವರಿಗೆ ಅಥವಾ ಮೃತಪಟ್ಟಿದ್ದರೇ ಅವರ ಅವಲಂಬಿತ ಕುಟುಂಬದ ಸದ್ಯರುಗಳಿಗೆ ನೀಡಲಾಗುವ ಪರಿಹಾರವನ್ನು ಮೇಲ್ಕಂಡಂತೆ ಗಾಯಗೊಂಡವರಿಗೆ ರೂ.50,000/- ಗಳನ್ನು ಮತ್ತು ಮೃತಪಟ್ಟ ಅವಲಂಬಿತ ಕುಟುಂಬದ ಸದಸ್ಯರುಗಳಿಗೆ ರೂ.2,00,000/-ಗಳ ಪರಿಹಾರ ಮೊತ್ತವನ್ನು ನೀಡಲಾಗುತ್ತದೆ. ದಿನಾಂಕ: 01-04-2022 ರಿಂದ ಈ ಯೋಜನೆ ಜಾರಿಗೆ ಬಂದಿರುತ್ತದೆ.
ಯೋಜನೆಯ ಸದುಪಯೋಗ ಪಡಿಸಿಕೊಳ್ಳಲು ಮನವಿ
ಸಾರ್ವಜನಿಕರು ದಿನಾಂಕ: 01-04-2022 ರಿಂದ ನಂತರದ ರಸ್ತೆ ಅಪಘಾತಗಳ ಹಿಟ್ & ರನ್ ಪ್ರಕರಣಗಳಲ್ಲಿ ನೊಂದವರು ಸಂಬಂಧಪಟ್ಟ ಠಾಣಾಧಿಕಾರಿಗಳನ್ನು ಭೇಟಿ ಪ್ರಕರಣದ ಬಗ್ಗೆ ಮಾಹಿತಿ ಪಡೆದು, ರಸ್ತೆ ಅಪಘಾತ ಪ್ರಕರಣದ ಪರಿಹಾರ ಪಡೆಯಲು ಸ್ಥಳೀಯ ತಹಶಿಲ್ದಾರ್ ರವರಲ್ಲಿ ಅಗತ್ಯ ದಾಖಲೆಗಳನ್ನು ನೀಡಿ ಮನವಿ ಸಲ್ಲಿಸಿ ಸದರಿ ಯೋಜನೆಯ ಸದುಪಯೋಗ ಪಡಿಸಿಕೊಳ್ಳಲು ಸಾರ್ವಜನಿಕರಿಗೆ ಎಸ್ಪಿ ತಿಳಿಸಿದ್ದಾರೆ.



