Connect with us

Dvgsuddi Kannada | online news portal | Kannada news online

ದಾವಣಗೆರೆ: ಮಕ್ಕಳಿಗೆ ದಡಾರ, ರುಬೆಲ್ಲಾ ಲಸಿಕೆ ಹಾಕಿಸುವ ಪ್ರಮಾಣ ಶೇ.50 ರಷ್ಟು ಕುಸಿತ; ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಡಿಸಿ ಸೂಚನೆ

ಆರೋಗ್ಯ

ದಾವಣಗೆರೆ: ಮಕ್ಕಳಿಗೆ ದಡಾರ, ರುಬೆಲ್ಲಾ ಲಸಿಕೆ ಹಾಕಿಸುವ ಪ್ರಮಾಣ ಶೇ.50 ರಷ್ಟು ಕುಸಿತ; ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಡಿಸಿ ಸೂಚನೆ

ದಾವಣಗೆರೆ: ದಡಾರ, ರುಬೆಲ್ಲಾ ಲಸಿಕೆ ಹಾಕಿಸುವ ಪ್ರಮಾಣ ಶೇ.50 ರಷ್ಟು ಕಡಿಮೆಯಾಗಿದೆ. ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧುವಾರ ಏರ್ಪಡಿಸಲಾಗಿದ್ದ ಜಿಲ್ಲಾ ಲಸಿಕಾ ಕಾರ್ಯಪಡೆ ಸಭೆಯಲ್ಲಿ ಮಾತನಾಡಿದ ಅವರು, ದೇಶದ ವಿವಿಧ ರಾಜ್ಯಗಳಲ್ಲಿ ದಡಾರ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ, ದಡಾರ ಲಸಿಕಾ ಅಭಿಯಾನದ ಹೆಚ್ಚಿನ ಜಾಗೃತಿ ಮೂಡಿಸಬೇಕು.ದಡಾರ, ರುಬೆಲ್ಲ ಲಸಿಕೆಯ ಎರಡನೆ ಡೋಸ್ ನೀಡಿಕೆ ಪ್ರಮಾಣ ಜಿಲ್ಲೆಯಲ್ಲಿ ಶೇ.50ಕ್ಕಿಂತ ಕಡಿಮೆ ಇದೆ. ಈ ಪ್ರಮಾಣ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಎಲ್ಲ ಆರೋಗ್ಯಾಧಿಕಾರಿಗಳು ವಿಶೇಷ ಗಮನ ಹರಿಸಿ ಎಂದರು.

ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಖಾಸಗಿ ಬಾಲವಾಡಿಗಳ ಜೊತೆ ಕೈಜೋಡಿಸಿ ಲಸಿಕೆ ಪಡೆಯದ ಮಕ್ಕಳನ್ನು ಗುರುತಿಸಬೇಕು. ಲಸಿಕೆ ಹಾಕುವ ಕುರಿತಂತೆ ಗ್ರಾಮಗಳಲ್ಲಿ ಡಂಗುರ ಹಾಗೂ ನಗರ ವ್ಯಾಪ್ತಿಯ ಹಾಗೂ ನಗರಪಾಲಿಕೆ ವ್ಯಾಪ್ತಿಯಲ್ಲಿ ವಾಹನಗಳ ಮೂಲಕ ಆಡಿಯೋ ಪ್ರಚಾರ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

ವಿಶ್ವ ಆರೋಗ್ಯ ಸಂಘಟನೆಯ ಸಲಹಾ ವೈದ್ಯ ಡಾ. ಶ್ರೀಧರ್ ಮಾತನಾಡಿ, ದಡಾರ ರೋಗಕ್ಕೆ ಎರಡು ವರ್ಷಗಳಲ್ಲಿ ಎರಡು ಲಸಿಕೆ ನೀಡಬೇಕು. ಎರಡನೇ ಲಸಿಕೆ ಪಡೆಯದ ಮಕ್ಕಳಿಗೆ ಐದು ವರ್ಷದವರೆಗೂ ಅವಕಾಶ ಇರುತ್ತದೆ ಎಂದು ತಿಳಿಸಿದರು.

ಆರ್.ಸಿ.ಹೆಚ್. ಅಧಿಕಾರಿ ಡಾ. ಮೀನಾಕ್ಷಿ ಮಾತನಾಡಿ, ದಾವಣಗೆರೆ ನಗರದ ಹಳೆಯ ಭಾಗದಲ್ಲಿ ಲಸಿಕೆ ಪಡೆಯದವರ ಸಂಖ್ಯೆ ಹೆಚ್ಚಾಗಿದೆ. ಈ ಭಾಗದಲ್ಲಿ ಲಸಿಕೆ ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಜಗಳೂರಿನಲ್ಲಿ ದಡಾರ ಹಾಗೂ ರುಬೆಲ್ಲಾ ಸಮೀಕ್ಷೆಗೆ ಹೆಚ್ಚು ಪ್ರಕರಣಗಳ ಪರೀಕ್ಷೆ ನಡೆಸಿದ ಜಗಳೂರು ತಾಲ್ಲೂಕು ಆಸ್ಪತ್ರೆಯ ಮಕ್ಕಳ ತಜ್ಞ ಡಾ. ಜಯಕುಮಾರ್ ಅವರಿಗೆ ಸನ್ಮಾನಿಸಲಾಯಿತು. ಡಿಡಿಪಿಐ ತಿಪ್ಪೇಶಪ್ಪ ಹಾಗೂ ಆರೋಗ್ಯ ಇಲಾಖೆಯ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಆರೋಗ್ಯ

  • ಆರೋಗ್ಯ

    ಬುಧವಾರ ರಾಶಿ-ಮಾರ್ಚ್-2,2022 ಅಮಾವಾಸ್ಯೆ

    By

    ಮಹಾಶಿವರಾತ್ರಿದಿಂದ ನಿಮಗೆ ಶಿವನು ಸಕಲ ಕಾರ್ಯಸಿದ್ದಿ ಮಾಡುವನು… ಬುಧವಾರ ರಾಶಿ-ಮಾರ್ಚ್-2,2022 ಅಮಾವಾಸ್ಯೆ ಸೂರ್ಯೋದಯ: 06:34pm, ಸೂರ್ಯಸ್ತ: 06:23pm ಸ್ವಸ್ತಿ ಶ್ರೀ ಮನೃಪ...

  • ಆರೋಗ್ಯ

    ಜೀರಿಗೆಯಲ್ಲಿದೆ ಔಷಧಿ ಗುಣ..!

    By

    ಜೀರಿಗೆ ಕೇವಲ ಒಂದು ಸಾಂಬಾರ ಪದಾರ್ಥವಾಗಿಲ್ಲ.  ಹಲವು ಚಿಕ್ಕಪುಟ್ಟ ಬೇನೆಗಳಿಗೆ ಮನೆಯ ಮದ್ದಾಗಿ ಸಹ ಉಪಯೋಗಿಸಲಾಗುತ್ತಿದೆ. ಜೀರಿಗೆಯಲ್ಲಿ ಬಿಳಿಜೀರಿಗೆ, ಕರಿಜೀರಿಗೆ, ಕಹಿಜೀರಿಗೆ...

  • ಆರೋಗ್ಯ

    ಕಪ್ಪು ಎಳ್ಳಿನ ಪ್ರಯೋಜನ ಏನು ಗೊತ್ತಾ ..?

    By

    ಕಪ್ಪು ಎಳ್ಳನ್ನು ನಿತ್ಯ ಆಹಾರದಲ್ಲಿ ಬಳಸುವುದರಿಂದ ಉತ್ತಮ ಆರೋಗ್ಯದ ಪಡೆದುಕೊಳ್ಳಬಹುದು. ಕಪ್ಪು ಎಳ್ಳಿನ ಉಂಡೆ ತಯಾರಿಸಿ ತಿನ್ನುವುದರಿಂದ ಕ್ಯಾಲ್ಸಿಯಂ ಸಮಸ್ಯೆ ನಿಮ್ಮ...

  • ಆರೋಗ್ಯ

    ಎಳನೀರು ಸರ್ವ ರೋಗಕ್ಕೂ ಸಿದ್ಧೌಷಧಿ..!

    By

    ಎಳನೀರು ಸರ್ವ ರೋಗಕ್ಕೂ ಸಿದ್ಧೌಷಧ ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಆದರೆ ಇದನ್ನು ಹೇಗೆ ಯಾವ ಸಮಯದಲ್ಲಿ ಸೇವಿಸುವುದರಿಂದ ಯಾವ ಲಾಭ...

  • ಆರೋಗ್ಯ

    ತಾಮ್ರದ ಬಾಟಲಿಯಲ್ಲಿ ನೀರು ಕುಡಿಯುವುದರಿಂದ ಪ್ರಯೋಜನ ಏನು ..?

    By

    ಆಯುರ್ವೇದದಲ್ಲಿ, ಪಂಚಲೋಹ ಪಾತ್ರೆಗಳಲ್ಲಿ ಆಹಾರವನ್ನು ಸೇವಿಸುವುದು ಒಳ್ಳೆಯದು ಎಂದು ಹೇಳಲಾಗುತ್ತದೆ.  ವಿಜ್ಞಾನವು ಅದರ ಪ್ರಯೋಜನಗಳನ್ನು ಸಹ ಪರಿಗಣಿಸುತ್ತದೆ. ಅಂತೆಯೇ ತಾಮ್ರದ  ಪಾತ್ರೆಗಳು...

To Top