ಹರಿಹರ: ವಾಯುಭಾರ ಕುಸಿತ ಪರಿಣಾಮ ಅಕಾಲಿಕ ಮಳೆಗೆ ಹರಿಹರ ತಾಲ್ಲೂಕಿನಲ್ಲಿ ಕೊಯ್ಲಿಗೆ ಬಂದಿದ್ದ 250 ಎಕರೆ ಭತ್ತದ ಬೆಳೆಗೆ ಹಾನಿಯಾಗಿದ್ದು, ಒಂದು ಕಚ್ಚಾ ಮನೆ ಕುಸಿದಿದೆ.
ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗ್ಗೆ ವರೆಗೆ ಮಳೆಯಾಗಿತ್ತು. ಈ ಅಕಾಲಿಕ ಮಳೆಯಿಂದ ಕೊಯ್ಲಿಗೆ ಬಂದಿದ್ದ ಭತ್ತ ಬೆಳೆಗೆ ತೀವ್ರ ಹಾನಿಯಾಗುತ್ತಿದೆ. ತಾಲೂಕಿನ ರಾಜನಹಳ್ಳಿಯಲ್ಲಿ 30, ಭಾನುವಳ್ಳಿ ವೃತ್ತದಲ್ಲಿ 200 ಹಾಗೂ ಬನ್ನಿಕೋಡು ಗ್ರಾಮದ ಸುತ್ತಲು 20 ಎಕರೆ ಭತ್ತದ ಬೆಳೆ ಹಾನಿಯಾಗಿದೆ. ಸಾರಥಿ ಗ್ರಾಮದಲ್ಲಿ 1 ಕಚ್ಚಾ ಮನೆಗೆ ಹಾನಿಯಾಗಿದ್ದು, ರು.2 ಲಕ್ಷ ಹಾನಿಯಾಗಿದೆ ಎಂದು ಅಂದಾಜಿಸಿದೆ.
ಹರಿಹರ 40.2, ಕೊಂಡಜ್ಜಿ 11.6, ಮಲೆಬೆನ್ನೂರು
2, ಹೊಳೆಸಿರಿಗೆರೆ 2.4, ಒಟ್ಟು 55.12, ಸರಾಸರಿ 13.78 ಮಿ.ಮೀ. ಮಳೆದಾಖಲಾಗಿದೆ. ಗುತ್ತೂರಿನಲ್ಲಿ10 ಮನೆಗಳಿಗೆ ಚರಂಡಿ ನೀರು ನುಗ್ಗಿದೆ. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ 7000 ಹೆ. ಮೆಕ್ಕೆಜೋಳ ಕಟಾವು ಮಾಡಲಾಗಿದೆ. 23500 ಹೆ. ಪ್ರದೇಶದಲ್ಲಿ ನಾಟಿ ಮಾಡಿದ್ದ ಭತ್ತದಲ್ಲಿ ಶೇ.60 ರಷ್ಟು ಬೆಳೆ ಕಟಾವು ಆಗಿದ್ದು, ಉಳಿದ ಬೆಳೆ ಕಟಾವಿಗೆ ಮಳೆ
ಅಡ್ಡಿಯಾಗಿದೆ.
ಹರಿಹರ ನಗರ, ಗುತ್ತೂರು, ದೀಟೂರು, ಗಂಗನಹರಸಿ, ಹರ್ಲಾಪುರ, ಸಾರಥಿ, ಕುರಬರಹಳ್ಳಿ, ಕರರ್ಲಹಳ್ಳಿ, ಪಾಮೇನಹಳ್ಳಿ, ಚಿಕ್ಕಬಿದರಿ, ಕೋಡಿಯಾಲ ಹೊಸಪೇಟೆ ಸೇರಿದಂತೆ, ಇತರೆ ಗ್ರಾಮದಲ್ಲಿ ಇಟ್ಟಿಗೆ
ಭಟ್ಟಿಗಳು ಹಾನಿಯಾಗಿವೆ.



