ದಾವಣಗೆರೆ: ಹರಿಹರ ನಗರಸಭೆ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಆಸ್ತಿಗಳನ್ನು ಗಣಕೀಕರಣಗೊಳಿಸಿ, ಇ-ಆಸ್ತಿ ಉತಾರಗಳನ್ನು ನೀಡಲು ನಗರಸಭೆ ವತಿಯಿಂದ ಕ್ರಮವಹಿಸಲಾಗಿದೆ.
ನಗರಸಭೆಯ ಕರವಸೂಲಿಗಾರರು ಹಾಗೂ ಎನ್.ಜಿ.ಓ. ಸಿಬ್ಬಂದಿಗಳು ಸ್ವತ್ತಿನ ಪರಿವೀಕ್ಷಣೆ ನಡೆಸುತ್ತಿದ್ದು, ಪರಿವೀಕ್ಷಣೆದಾರರು ಬಂದಾಗ ಆಸ್ತಿ ಇ-ಉತಾರ, ನಿವೇಶನ/ಕಟ್ಟಡದ ಭಾವಚಿತ್ರ, ಆಸ್ತಿ ಮಾಲೀಕರ ಭಾವಚಿತ್ರ ಮತ್ತು ಗುರುತಿನ ಚೀಟಿ(ವೋಟರ್ ಐಡಿ/ಪ್ಯಾನ್ ಕಾರ್ಡ/ಪಡಿತರ ಚೀಟಿ/ಡ್ರೈವಿಂಗ್ ಲೈಸನ್ಸ), ಆಸ್ತಿ ಮಾಲಿಕತ್ವ ದೃಢೀಕರಿಸುವ ಕ್ರಯ ಪತ್ರಗಳು (ಖರೀದಿ ಪತ್ರ/ಪಾಲು ವಿಭಾಗ/ಹಕ್ಕು ಪತ್ರ/ದಾನ ಪತ್ರ/ಸೇಲ್ ಸರ್ಟಿಫಿಕೇಟ್ ಇತ್ಯಾದಿ), ಆಸ್ತಿ ತೆರಿಗೆ ಪಾವತಿಸಿ ಚಲನ್‍ಗಳು ಮತ್ತು ವಿವರ ಪಟ್ಟಿಕೆಗಳು(2002-03 ರಿಂದ 2022-23 ರ ವರೆಗೆ), ಆಸ್ತಿಗೆ ನೀಡಲಾದ ನೀರಿನ ಮತ್ತು ಓಳ ಚರಂಡಿ ಸಂಪರ್ಕದ ತೆರಿಗೆ ಪಾವತಿಸಿದ ರಶೀದಿಗಳು, ವಿದ್ಯುತ್ ಬಿಲ್ ಕಟ್ಟಡ ಆಗಿದ್ದಲ್ಲಿ ಕಟ್ಟಡ ಪರವಾನಗಿ ಪ್ರತಿ ಹಾಗೂ 24*7 ನೀರಿನ ಸಂಪರ್ಕದ ಬಿಲ್, ಋಣಭಾರ ರಾಹಿತ್ಯ ಪತ್ರ(ಇಸಿ ನಮೂನೆ 15) ದಾಖಲೆಗಳನ್ನು ನೀಡಿ ಸಹಕರಿಸಬೇಕೆಂದು ಹರಿಹರ ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.



