ದಾವಣಗೆರೆ; ಜಿಲ್ಲೆಯ ಹರಿಹರ ತಾಲ್ಲೂಕಿನ ಕೊಮಾರನಹಳ್ಳಿ ಕೆರೆ ಬಳಿಯ ರಸ್ತೆ ಪಕ್ಕದಲ್ಲಿ ಬಿದ್ದಿದ್ದ ಚಿನ್ನಾಭರಣವಿದ್ದ ಬ್ಯಾಗ್ ಆಟೋ ಚಾಲಕ ಹಿರೆಹಾಲಿವಾಣದ ವಿಜಯಕುಮಾರ್ ಗೆ ಸಿಕ್ಕಿದೆ. ಬ್ಯಾಗ್ ಮೂಲ ಮಾಲೀಕರಾದ ಕಬ್ಬಿಣ ವ್ಯಾಪಾರಿ ಶಕೀಲ್ ಅಹಮ್ಮದ್ ಗೆ ಒಪ್ಪಿಸುವ ಮೂಲಕ ಮೂಲಕ ಪ್ರಾಮಾಣಿಕತೆ ಮೆರೆದು ಆಟೋ ಚಾಲಕನ ಕಾರ್ಯ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಶಕೀಲ್ ಅಹಮ್ಮದ್ ಅವರು ಹುಬ್ಬಳ್ಳಿಯಿಂದ ಬಸವಾಪಟ್ಟಣಕ್ಕೆ ಹೋಗುವಾಗ ತಮ್ಮ ವಾಹನದಿಂದ ಕಿಟ್ ಬ್ಯಾಗ್ ಬೀಳಿಸಿಕೊಂಡು ಹೋಗಿದ್ದರು. ಬ್ಯಾಗ್ ಗಮನಿಸಿದ್ದ ಆಟೋ ಚಾಲಕ ಬ್ಯಾಗ್‌ನಲ್ಲಿ ಚಿನ್ನಾಭರಣ ಇರುವುದನ್ನು ಕಂಡು ಪೊಲೀಸರಿಗೆ ನೀಡಿದ್ದರು. ಕಳೆದುಕೊಂಡಿದ್ದ ಬ್ಯಾಗ್ ಹುಡುಕಿಕೊಂಡು ಬಂದ ವ್ಯಾಪಾರಿಗೆ ಬ್ಯಾಗ್ ಪೊಲೀಸ್ ಠಾಣೆಯಲ್ಲಿರುವ ವಿಷಯ ಗೊತ್ತಾಗಿದೆ. ಈ ವೇಳೆ ಪಿಎಸ್‌ಐ ಪ್ರಭು ಕೆಳಗಿನಮನೆ, ಯುವರಾಜ್ ಕಾಂಬಳೆ, ಪೊಲೀಸರಾದ ಮಲ್ಲಿಕಾರ್ಜನ, ಸಂತೋಷ್, ಲಕ್ಷ್ಮಣ ಅವರು, ವಿಚಾರಣೆ ನಡೆಸಿ ಮಾಲೀಕರಿಗೆ ಬ್ಯಾಗ್ ವಾಪಸ್ ಕೊಟ್ಟಿದ್ದಾರೆ. ಪ್ರಾಮಾಣಿಕತೆ ಮೆರೆದ ಆಟೋ ಚಾಲಕನಿಗೆ ಸನ್ಮಾನಿಸಿದ್ದಾರೆ.



