Connect with us

Dvgsuddi Kannada | online news portal | Kannada news online

ಹರಿಹರ; ಬೆಳ್ಳೂಡಿ ಬಳಿ ಬಸ್-ಬೈಕ್ ನಡುವೆ ಅಪಘಾತ

ದಾವಣಗೆರೆ

ಹರಿಹರ; ಬೆಳ್ಳೂಡಿ ಬಳಿ ಬಸ್-ಬೈಕ್ ನಡುವೆ ಅಪಘಾತ

ದಾವಣಗೆರೆ: ಹರಿಹರ-ಶಿವಮೊಗ್ಗ ರಸ್ತೆಯ ಬೆಳ್ಳೂಡಿ ಬಳಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದ್ದು, ಬೈಕ್ ಸವಾರನಿಗೆ ಗಾಯಗಳಾಗಿವೆ.

ಹರಿಹರ(ಗ್ರಾ) ಠಾಣಾ ವ್ಯಾಪ್ತಿಯ ಬೆಳ್ಳೂಡಿ ಗ್ರಾಮದ ಬಳಿ ನಡುವೆ ಈ ಅಪಘಾತ ಸಂಭವಿಸಿದೆ. ಈ ಬಗ್ಗೆ112 ಕರೆ ಬಂದಿದ್ದು, 112 ERV ವಾಹನ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು,ಗಾಯವಾದ ಸವಾರನನ್ನು 112 ವಾಹನದಲ್ಲೇ ಹರಿಹರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹರಿಹರ(ಗ್ರಾ) ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ರಸ್ತೆ ರಾಜ್ಯ ಹೆದ್ದಾರಿ ಆಗಿದ್ದರೂ, ರಸ್ತೆ ಕಿರಿದಾಗಿದ್ದು ವಾಹನ ಓಡಾಟ ಸಂಖ್ಯೆ ಹೆಚ್ಚಾಗಿದೆ. ಅಪಘಾತಗಳು ಹೆಚ್ಚಾಗಿದ್ದು, ಅದರಲ್ಲೂ ಬೈಕ್ ಸವಾರರು ಈ ರಸ್ತೆಯಲ್ಲಿ ಓಡಾಡುವುದು ಡೆಂಜರ್ ಎನ್ನುವಂತಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top