Connect with us

Dvgsuddi Kannada | online news portal | Kannada news online

ಉಚ್ಚoಗಿದುರ್ಗದಲ್ಲಿ ಮೇ.25 ರಂದು ಉಚಿತ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ

ಪ್ರಮುಖ ಸುದ್ದಿ

ಉಚ್ಚoಗಿದುರ್ಗದಲ್ಲಿ ಮೇ.25 ರಂದು ಉಚಿತ ಸರಳ ಸಾಮೂಹಿಕ ವಿವಾಹ ಕಾರ್ಯಕ್ರಮ

ಹರಪನಹಳ್ಳಿ: ಸರ್ಕಾರದ ಆದೇಶದಂತೆ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ಉಚ್ಚಂಗಿದುರ್ಗದ ಶಕ್ತಿ ದೇವತೆ ಉಚ್ಚoಗೆಮ್ಮನ ಸನ್ನಿಧಿಯಲ್ಲಿ ಈ ವರ್ಷ ಮೇ.25 ರಂದು ಉಚಿತವಾಗಿ ಸರಳ ಸಾಮೂಹಿಕ ವಿವಾಹಗಳು ನಡೆಯುತ್ತವೆ ಇದರ ಸದುಪಯೋಗವನ್ನು ಭಕ್ತರೂ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಚ್.ಮಲ್ಲಪ್ಪ ತಿಳಿಸಿದ್ದಾರೆ.

ವಧು-ವರರು ವಿವಾಹಕ್ಕಾಗಿ ದೇವಸ್ಥಾನದ ಕಚೇರಿಯನ್ನ ಸಂಪರ್ಕಿಸಿ ಮೇ.10 ರ ಒಳಗೆ ಹೆಸರು ನೋಂದಾಯಿಸಬೇಕು. ಸರಳವಾಗಿ ವಿವಾಹವಾಗುವ ವರನಿಗೆ ಶರ್ಟ್ ಮತ್ತು ಪಂಚೆಗಾಗಿ ಹೂವಿನಹಾರಕ್ಕೆ 5 ಸಾವಿರ ಹಾಗೂ ವಧುವಿಗೆ ಹೂವಿನ ಹಾರ, ಧಾರೆಸೀರೆ ಇತ್ಯಾದಿಗಳಿಗೆ 10 ಸಾವಿರ,ವಧುವಿಗೆ 40 ಸಾವಿರ ಮೌಲ್ಯದ ಚಿನ್ನದ ತಾಳಿ ಮತ್ತು 2 ಗುಂಡುಗಳನ್ನ ದೇವಾಲಯದಿಂದ ಭರಿಸಲಾಗುವುದು.

ಸರಳ ಸಾಮೂಹಿಕ ವಿವಾಹದಲ್ಲಿ ಭಾಗವಹಿಸುವ ಜೋಡಿಗಳ ಸಂಬಂಧಿಕರಿಗೆ ದೇವಸ್ಥಾನದಿಂದ ಊಟ ವ್ಯವಸ್ಥೆ ಮಾಡಲಾಗಿದೆ ಈ ವಿವಾಹದಲ್ಲಿ ಭಾಗವಹಿಸುವ ಜೋಡಿಗಳು ಹಾಗೂ ಸಂಬಂಧಿಗಳು ಕರೊನ ನಿಯಮಗಳನ್ನು ಪಾಲಿಸಬೇಕು ಮದುವೆ ನಡೆಯುವ ಸ್ಥಳದಲ್ಲಿ 100 ಜನರಿಗೆ ಮಾತ್ರ ಅವಕಾಶವಿರುತ್ತದೆ ಎಂದು ಶ್ರೀ ಉಚ್ಚoಗೆಮ್ಮನ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಯಾದ ಎಚ್ ಮಲ್ಲಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top