ದಾವಣಗೆರೆ: ಹೆಚ್.ಎ.ಎಲ್ ನಲ್ಲಿ ಐ.ಟಿ.ಐ. ತೇರ್ಗಡೆ ಹೊಂದಿದ ಅಭ್ಯರ್ಥಿಗಳಿಂದ ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆಯನ್ನು ದಾವಣಗೆರೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಪಡೆದುಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ಅಕ್ಟೋಬರ್ 5 ರೊಳಗಾಗಿ ಕಚೇರಿಗೆ ಸಲ್ಲಿಸಬೇಕು. ಅಭ್ಯರ್ಥಿಗಳು http://apprenticeshipindia.gov.in ಈ ವೆಬ್‍ಸೈಟ್‍ನಲ್ಲಿ ಅಪ್ರೆಂಟೀಸ್‍ಗಾಗಿ ನೋಂದಾಯಿಸಿ, ಕಡ್ಡಾಯವಾಗಿ ನೋಂದಣಿ ಸಂಖ್ಯೆಯನ್ನು ತರತಕ್ಕದು.
ಹೆಚ್ಚಿನ ಮಾಹಿತಿಗೆ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ, ಜಿಲ್ಲಾ ಆಡಳಿತ ಭವನ, ದಾವಣಗೆರೆ ದೂ.ಸಂ:08192-259446,7406323294 ಸಂಪರ್ಕಿಸಲು ಉದ್ಯೋಗಾಧಿಕಾರಿ ರವೀಂದ್ರ ತಿಳಿಸಿದ್ದಾರೆ.