ದಾವಣಗೆರೆ: ಬಂದೂಕು ಸ್ಚಚ್ಛಗೊಳಿಸುವಾಗ ಆಕಸ್ಮಿಕವಾಗಿ ಮಿಸ್ ಫೈರಿಂಗ್ ಆಗಿ ಹಣೆಗೆ ಗುಂಡು ಸಿಡಿದ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ. ಮಂಜುನಾಥ ರೇವಣ್ಕರ್ (62) ಎಂಬುವರ ಹಣೆಗೆ ಗುಂಡು ಬಿದ್ದಿದೆ.
ಪರವಾನಿಗೆ ಪಡೆದಿದ್ದ ಬಂದೂಕು ಸ್ವಚ್ಛಗೊಳಿಸುವಾಗ ಬಂದೂಕಿನ ಒಳಗಿದ್ದ ಗುಂಡು ಆಕಸ್ಮಿಕವಾಗಿ ಹಣೆಗೆ ತಗುಲಿದ್ದು ಆಶ್ಚರ್ಯಕರವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪರವಾನಗಿ ಪಡೆದವರು ಬಂದೂಕು ಸ್ವಚ್ಛಗೊಳಿಸುವ ಎಚ್ಚರಿಕೆ ವಹಿಸಬೇಕು ಎಂದು ಎಸ್ ಪಿ ರಿಷ್ಯಂತ್ ತಿಳಿಸಿದ್ದಾರೆ.



