ದಾವಣಗೆರೆ : ನಾಳೆ ಜಿಲ್ಲೆಯ 88 ಗ್ರಾಮ ಪಂಚಾಯ್ತಿಯ 1,311 ಸ್ಥಾನಗಳಿಗೆ ಚುನಾವಣೆ

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ : ಮೊದಲ ಹಂತದಲ್ಲಿ ಜಿಲ್ಲೆಯ  ದಾವಣಗೆರೆ, ಹೊನ್ನಾಳಿ ಮತ್ತು ಜಗಳೂರು ತಾಲ್ಲೂಕಿನ ಒಟ್ಟು 88 ಗ್ರಾಮ ಪಂಚಾಯಿಗಳಿಗೆ ನಾಳೆ (ಡಿ.22) ಚುನಾವಣೆ ನಡೆಯಲಿದೆ.  ದಾವಣಗೆರೆ ತಾಲ್ಲೂಕಿನ ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್ ಹಾಗೂ ಮತ ಎಣಿಕೆ ಕೇಂದ್ರಕ್ಕೆ  ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.

  • ದಾವಣಗೆರೆ ತಾಲ್ಲೂಕ್ – 38 ಗ್ರಾ  ಪಂ ಚುನಾವಣೆ
  • ಹೊನ್ನಾಳಿ ತಾಲ್ಲೂಕ್  – 28 ಗ್ರಾ ಪಂ ಚುನಾವಣೆ
  • ಜಗಳೂರು  ತಾಲ್ಲೂಕ್ –  22  ಗ್ರಾಂ ಪಂ
  • ಒಟ್ಟು 88 ಗ್ರಾ ಪಂ ನ  ಸ್ಥಾನಗಳ ಸಂಖ್ಯೆ –  1311
  • ಚುನಾವಣೆಗು ಮುನ್ನ ಅವಿರೋಧವಾಗಿರುವ ಸ್ಥಾನಗಳು – 211
  • ಒಟ್ಟು ಸ್ಪರ್ಧಿಗಳ ಸಂಖ್ಯೆ 2981
  • ದಾವಣಗೆರೆ ತಾಲ್ಲೂಕ್ – 499 ಸ್ಥಾನಗಳಿಗೆ ಚುನಾವಣೆ
  • ಹೊನ್ನಾಳಿ ತಾಲ್ಲೂಕ್ – 291 ಸ್ಥಾನಗಳಿಗೆ ಚುನಾವಣೆ
  • ಜಗಳೂರು ತಾಲ್ಲೂಕ್ – 297  ಸ್ಥಾನಗಳಿಗೆ ಚುನಾವಣೆ

ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಮತಗಟ್ಟೆಗಳು : ದಾವಣಗೆರೆ ತಾಲ್ಲೂಕಿನಲ್ಲಿ ಒಟ್ಟು 275 ಮತಗಟ್ಟೆಗಳಿದ್ದು, 37 ಸೂಕ್ಷ್ಮ, 18 ಅತಿ ಸೂಕ್ಷ್ಮ ಮತ್ತು 220 ಸಾಮಾನ್ಯ ಮತಗಟ್ಟೆಗಳೆಂದು ಗುರುತಿಸಲಾಗಿದೆ. ಹೊನ್ನಾಳಿ ತಾಲ್ಲೂಕಿನಲ್ಲಿ 153 ಮತಗಟ್ಟೆಗಳಿದ್ದು 17 ಸೂಕ್ಷ್ಮ, 32 ಅತಿ ಸೂಕ್ಷ್ಮ, 104 ಸಾಮಾನ್ಯ ಮತಗಟ್ಟೆಗಳಿವೆ. ಜಗಳೂರು ತಾಲ್ಲೂಕಿನಲ್ಲಿ 219 ಮತಗಟ್ಟೆಗಳಿದ್ದು, 45 ಸೂಕ್ಷ್ಮ, 16 ಅತಿ ಸೂಕ್ಷ್ಮ ಮತುತ 158 ಸಾಮಾನ್ಯ ಮತಗಟ್ಟೆಗಳಿವೆ. ಚನ್ನಗಿರಿ ತಾಲ್ಲೂಕಿನಲ್ಲಿ 368 ಮತಗಟ್ಟೆಗಳಿದ್ದು 45 ಸೂಕ್ಷ್ಮ, 47 ಅತಿ ಸೂಕ್ಷ್ಮ ಮತ್ತು 276 ಸಾಮಾನ್ಯ ಮತಗಟ್ಟೆಗಳಿವೆ. ಹರಿಹರ ತಾಲ್ಲೂಕಿನಲ್ಲಿ 167 ಮತಗಟ್ಟೆಗಳಿದ್ದು 17 ಸೂಕ್ಷ್ಮ, 17 ಅತಿ ಸೂಕ್ಷ್ಮ ಮತ್ತು 133 ಸಾಮಾನ್ಯ ಮತಗಟ್ಟೆಗಳಿವೆ. ನ್ಯಾಮತಿ ತಾಲ್ಲೂಕಿನಲ್ಲಿ 97 ಮತಗಟ್ಟೆಗಳಿದ್ದು 11 ಸೂಕ್ಷ್ಮ, 15 ಅತಿ ಸೂಕ್ಷ್ಮ ಮತ್ತು 71 ಸಾಮಾನ್ಯ ಮತಗಟ್ಟೆಗಳಿವೆ ಜಿಲ್ಲೆಯಲ್ಲಿ ಒಟ್ಟು 1279 ಮತಗಟ್ಟೆಗಳಿದ್ದು 172 ಸೂಕ್ಷ್ಮ, 145 ಅತಿ ಸೂಕ್ಷ್ಮ ಮತ್ತು 962 ಸಾಮಾನ್ಯ ಮತಗಟ್ಟೆಗಳಿವೆ.

131726666 398543331454501 2932348804147794612 o

ಮಸ್ಟರಿಂಗ್ ಮತ್ತು ಡಿಮಸ್ಟರಿಂಗ್, ಭದ್ರತಾ ಕೊಠಡಿ ಮತ್ತು ಮತ ಎಣಿಕೆ ಕೇಂದ್ರ ವಿವರ : ದಾವಣಗೆರೆ ತಾಲ್ಲೂಕಿನಲ್ಲಿ ಮೋತಿ ವೀರಪ್ಪ ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು, ದಾವಣಗೆರೆ. ಜಗಳೂರು ತಾಲ್ಲೂಕಿನಲ್ಲಿ ಸರ್ಕಾರಿ ಜ್ಯೂನಿಯರ್ ಕಾಲೇಜ್, ಜಗಳೂರು. ಹೊನ್ನಾಳಿ ತಾಲ್ಲೂಕಿನಲ್ಲಿ ಶ್ರೀಮತಿ ಗಂಗಮ್ಮ ಶ್ರೀ ವೀರಭದ್ರಶಾಸ್ತ್ರಿ ಕೈಗಾರಿಕಾ ತರಬೇತಿ ಕೇಂದ್ರ ಹಿರೇಕಲ್ಮಠ, ಹೊನ್ನಾಳಿ. ನ್ಯಾಮತಿ ತಾಲ್ಲೂಕಿನಲ್ಲಿ ಕರ್ನಾಟಕ ಪಬ್ಲಿಕ್ ಸ್ಕೂಲ್, ಶಿವಾನಂದಪ್ಪ ಬಡಾವಣೆ ರಸ್ತೆ, ನ್ಯಾಮತಿ. ಹರಿಹರ ತಾಲ್ಲೂಕಿನಲ್ಲಿ ಸೇಂಟ್ ಮೇರಿಸ್ ಕಾನ್ವೆಂಟ್ ಶಾಲೆ, ಹರಪನಹಳ್ಳಿ ರಸ್ತೆ, ಹರಿಹರ ತಾಲ್ಲೂಕು. ಚನ್ನಗಿರಿ ತಾಲ್ಲೂಕಿನ ಸರ್ಕಾರಿ ಪದವಿಪೂರ್ವ ಕಾಲೇಜು, ಚನ್ನಗಿರಿ ಇಲ್ಲಿ ಮತ ಎಣಿಕೆ ಕೇಂದ್ರ ಸ್ಥಾಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *