Connect with us

Dvgsuddi Kannada | online news portal | Kannada news online

ಭೀಕರ ರಸ್ತೆ ಅಪಘಾತ: 6 ಮಂದಿ ಸಾವು, 8 ಮಂದಿ ಗಂಭೀರ ಗಾಯ

ಕ್ರೈಂ ಸುದ್ದಿ

ಭೀಕರ ರಸ್ತೆ ಅಪಘಾತ: 6 ಮಂದಿ ಸಾವು, 8 ಮಂದಿ ಗಂಭೀರ ಗಾಯ

ರಾಮನಗರ: ಟ್ರಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ, ಟ್ರಾಲಿ ಪಲ್ಟಿಯಾಗದ ಪರಿಣಾಮ‌ ಕನಕಪುರ ತಾಲೂಕಿನ 6 ಮಂದಿ ಮೃತಪಟ್ಟಿದ್ದಾರೆ.  8 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಕನಕಪುರ-ತಮಿಳುನಾಡು ಗಡಿಭಾಗದಲ್ಲಿ ಇಂದು  ಸಂಭವಿಸಿದೆ.

ಘಟನೆಯಲ್ಲಿ ಮೃತಪಟ್ಟವರು  ಜಿಲ್ಲೆಯ ಕನಕಪುರ ತಾಲೂಕಿನ ಕೆರಳಾಳುಸಂದ್ರ ಗ್ರಾಮದವರಾಗಿದ್ದಾರೆ. ಅಪಘಾತದಲ್ಲಿ ಗಂಭೀರ ಗಾಯಗೊಂಡ 8 ಮಂದಿಯನ್ನು ತಮಿಳುನಾಡಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕೆರಳಾಳುಸಂದ್ರದ ಗ್ರಾಮದ 15 ಮಂದಿ ಟ್ರ್ಯಾಕ್ಟರ್ ಮೂಲಕ ತಮಿಳುನಾಡಿನ ದಬ್ಬಾಗುಳೇಶ್ವರ  ದೇವಾಲಯಕ್ಕೆ ತೆರಳಳುತ್ತಿದ್ದರು. ಈ ವೇಳೆ ಕನಕಪುರ – ತಮಿಳುನಾಡಿನ ಗಡಿ ಭಾಗದಲ್ಲಿ ಟ್ರ್ಯಾಕ್ಟರ್ ನ ಬ್ರೇಕ್ ವೈಫಲ್ಯಗೊಂಡಿದೆ.

ವೇಗವಾಗಿ ಸಂಚರಿಸುತ್ತಿದ್ದ ಟ್ರ್ಯಾಕ್ಟರ್ ರಸ್ತೆ ತಿರುವುನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿದೆ. ಈ ವೇಳೆ ಸ್ಥಳದಲ್ಲೇ ಆರು ಮಂದಿ ಮೃತ ಪಟ್ಟಿದ್ದು, ಎಂಟು ಮಂದಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

Advertisement

ದಾವಣಗೆರೆ

Advertisement
To Top