Connect with us

Dvgsuddi Kannada | online news portal | Kannada news online

ದಾವಣಗೆರೆ: ಜಿಎಂಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಾಳೆ ಉದ್ಯೋಗ ಮೇಳ

ದಾವಣಗೆರೆ

ದಾವಣಗೆರೆ: ಜಿಎಂಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಾಳೆ ಉದ್ಯೋಗ ಮೇಳ

ದಾವಣಗೆರೆ: ಜಿಎಂಐಟಿಯ ಜಿಎಂಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ನಾಳೆ (ಮೇ 31) ಉದ್ಯೋಗ ಮೇಳ ಆಯೋಜಿಸಲಾಗಿದೆ. ಸ್ಪೈಡರ್ ಎಲೆಕ್ಟ್ರಿಕ್, ಬಜಾಜ್ ಅಲಿಯನ್ಸ್, ಬಿಎಫ್‌ಡಬ್ಲ್ಯು, ಸ್ಯಾಮ್‌ಸಂಗ್, ಲೈಟಿಂಗ್ ಟೆಕ್ನಾಲಜಿಸ್, ಸೆವೆಂತ್ ಸೆನ್ಸ್ ಟೆಕ್ನಾಲಜೀಸ್, ಜಿ.ಎಂ. ಸಮೂಹ ಸಂಸ್ಥೆಗಳು, ಫೇಸ್ ಪವರ್ ಸಿಸ್ಟಮ್ಸ್, ಹೋಂಡಾ ಮೋಟರ್ಸ್, ಸಾಸ್ಮೋಸ್ ಟೆಕ್ನಾಲಜೀಸ್, ಸೇರಿ 35 ಕಂಪನಿಗಳು ಮೇಳದಲ್ಲಿ ಭಾಗವಹಿಸಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಕಾಲೇಜಿನ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥ ಟಿ.ಆರ್. ಕಟ್ಟಿಮನಿ ಮಾಹಿತಿ ನೀಡಿದರು.

ಎಸ್ಸೆಸ್ಸೆಲ್ಸಿ, ಪಿಯು, ಐಟಿಐ, ಡಿಪ್ಲೊಮಾ ಹಾಗೂ ಪದವಿ ಪಡೆದವರಿಗೂ ಅವಕಾಶಗಳಿವೆ. ಈಗಾಗಲೇ 2100 ವಿದ್ಯಾರ್ಥಿಗಳು ನೋಂದಾಯಿಸಿದ್ದು, ಇನ್ನೂ ಹೆಚ್ಚಿನ ನೋಂದಣಿ ನಿರೀಕ್ಷಿಸಿದ್ದೇವೆ. ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಉದ್ಯೋಗ ಮೇಳ ನಡೆಯಲಿದೆ .ಮೇ 31ರಂದು ಬೆಳಗ್ಗೆ 9.30ಕ್ಕೆ ಶ್ರೀಶೈಲ ಎಜುಕೇಶನಲ್ ಟ್ರಸ್ಟ್‌ನ ಖಜಾಂಚಿ ಜಿ.ಎಸ್.ಅನಿತ್‌ಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ದಾವಣಗೆರೆ ವಿವಿ ಕುಲಪತಿ ಡಾ.ಬಿ.ಡಿ ಕುಂಬಾರ್ ಭಾಗವಹಿಸುವರು. ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಎಸ್ಪಿ ಡಾ. ಕೆ. ಅರುಣ್, ಜಿಪಂ ಸಿಇಒ ಸುರೇಶ್ ಇಟ್ನಾಳ್ ಅವರನ್ನೂ ಆಹ್ವಾನಿಸಲಾಗಿದೆ. ಆಸಕ್ತ ವಿದ್ಯಾರ್ಥಿಗಳು ಇತ್ತೀಚಿನ ಭಾವಚಿತ್ರದೊಂದಿಗೆ ಎಲ್ಲಾ ಕಲಿಕಾ ಅಂಕಪಟ್ಟಿಗಳು ಮತ್ತು ಸ್ವವಿವರದೊಂದಿಗೆ ಕನಿಷ್ಠ 5ರಿಂದ 10ಪ್ರತಿಗಳೊಂದಿಗೆ ಬರಬೇಕು ಎಂದು ಹೇಳಿದರು.ಕಾಲೇಜಿನ ಪ್ರಾಚಾರ್ಯೆ ಶ್ವೇತಾ ಎಂ.ಮರಿಗೌಡರ್, ತರಬೇತಿ ಮತ್ತು ಉದ್ಯೋಗ ತರಬೇತಿ ವಿಭಾಗದ ಸಂಯೋಜಕ ಅಭಿಷೇಕ್, ಅಭಿಲಾಷ್ ಇದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top