ದಾವಣಗೆರೆ: ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂದು ಬೆಳಗ್ಗೆ ಏರ್ಪಡಿಸಿದ್ದ ಡ್ರೋನ್ ತಂತ್ರಜ್ಞಾನದ ಪ್ರಸ್ತುತಿ, ಚರ್ಚೆ ಮತ್ತು ಪ್ರದರ್ಶನ ಏಪರ್ಡಿಸಲಾಗಿತ್ತು.
ಉದ್ಯಮ ಸಲಹೆಗಾರರು ಮತ್ತು ಡ್ರೋನ್ ತಂತ್ರಜ್ಞ ನಾಗಾನಂದ ತೇಜಸ್ವಿ ಮತ್ತು ಸುಧೀರ್ ಸಣ್ಣ , ಡ್ರೋನ್ ತಂತ್ರಜ್ಞಾನದ ಪ್ರಸ್ತುತಿ ಯನ್ನು ನೆರೆದಿದ್ದ ಅಧ್ಯಾಪಕ ವರ್ಗದವರಿಗೆ ನೈಜ ಉದಾಹರಣೆಗಳ ಮೂಲಕ ತಿಳಿ ಹೇಳಿದರು. ಪ್ರಸ್ತುತಿಯ ನಂತರ ನಡೆದ ಚರ್ಚೆಯಲ್ಲಿ ಎಲ್ಲಾ ಅಧ್ಯಾಪಕ ವರ್ಗದವರು ಪಾಲ್ಗೊಂಡು ತಮ್ಮ ಪ್ರಶ್ನೆಗಳು ಹಾಗೂ ಅನಿಸಿಕೆ ಮತ್ತು ಅಭಿಪ್ರಾಯಗಳ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಡ್ರೋನ್ ಪ್ರದರ್ಶನ ಮತ್ತು ಪ್ರಾಯೋಗಿಕ ಹಾರಾಟವನ್ನು ನಡೆಸಲಾಯಿತು. ಆಸಕ್ತಿಯುಳ್ಳ ಕೆಲವು ವಿದ್ಯಾರ್ಥಿಗಳು ಪಾಲ್ಗೊಂಡು ಸಲಹೆ ಸೂಚನೆಗಳನ್ನು ಪಡೆದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಡಾ ಸುನಿಲ್ ಕುಮಾರ್ ಬಿಎಸ್, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ ಪ್ರವೀಣ್ ಮತ್ತು ವಿವಿಧ ವಿಭಾಗದ ಮುಖ್ಯಸ್ಥರುಗಳು ಉಪಸ್ಥಿತರಿದ್ದರು.
ಕಾಲೇಜಿನಲ್ಲಿ ರೋಬೋಟಿಕ್ಸ್ ಅಂಡ್ ಆಟೋಮೇಷನ್ ಇಂಜಿನಿಯರಿಂಗ್ ವಿಭಾಗವು ಪ್ರಾರಂಭವಾಗಿದ್ದು, ರೋಬೋಟಿಕ್ಸ್ ಸೆಂಟರ್ ಆಫ್ ಎಕ್ಸಲೆನ್ಸ್ ಸ್ಥಾಪಿಸುವ ಗುರಿ ಇದ್ದು ಅದರ ಮೂಲಕ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಜ್ಞಾನವನ್ನು ಕೊಟ್ಟು ಕೈಗಾರಿಕೆಗಳಿಗೆ ತಯಾರು ಮಾಡುವ ಯೋಚನೆ ಇದೆ ಎಂದು ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥರಾದ ಶ್ರೀ ತೇಜಸ್ವಿ ಕಟ್ಟಿಮನಿ ಟಿ ಆರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



