Connect with us

Dvgsuddi Kannada | online news portal | Kannada news online

ದಾವಣಗೆರೆ: ಜಿಲ್ಲಾ ಉದ್ಯಮ ಕೇಂದ್ರದಿಂದ ವಿವಿಧ ತಾಂತ್ರಿಕ ತರಬೇತಿ;‌ ಟ್ರೈನಿಂಗ್ ನಂತರ 5 ಸಾವಿರ ಮೌಲ್ಯದ ಉಚಿತ ಕಿಟ್ ವಿತರಣೆ

ದಾವಣಗೆರೆ

ದಾವಣಗೆರೆ: ಜಿಲ್ಲಾ ಉದ್ಯಮ ಕೇಂದ್ರದಿಂದ ವಿವಿಧ ತಾಂತ್ರಿಕ ತರಬೇತಿ;‌ ಟ್ರೈನಿಂಗ್ ನಂತರ 5 ಸಾವಿರ ಮೌಲ್ಯದ ಉಚಿತ ಕಿಟ್ ವಿತರಣೆ

ದಾವಣಗೆರೆ: 2022-23 ನೇ ಸಾಲಿನಲ್ಲಿ ಗ್ರಾಮಾಂತರ ಕೈಗರಿಕಾ ವಿಭಾಗ, ಜಿಲ್ಲಾ ಉದ್ಯಮ ಕೇಂದ್ರದ ವತಿಯಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದ ವಿದ್ಯಾವಂತ ನಿರುದ್ಯೋಗಿಗಳಿಗೆ ಮೊಬೈಲ್ ರಿಪೇರಿ, ಮೋಟಾರ್ ರೀವೈಂಡಿಂಗ್, ಗೃಹ ಎಲೆಕ್ಟ್ರಿಕಲ್ ವೈರಿಂಗ್ ತಾಂತ್ರಿಕ ವಿಷಯಗಳ ಕುರಿತು ದಾವಣಗೆರೆ ತಾಲ್ಲೂಕಿನ ತೋಳಹುಣಸೆಯ ಕೆನರಾ ಬ್ಯಾಂಕ್‍ನ ಆರ್-ಸೆಟಿ ತರಬೇತಿ ಸಂಸ್ಥೆಯಲ್ಲಿ ಸಂಪೂರ್ಣ ಉಚಿತ ಹಾಗೂ ವಸತಿಯುತ ತರಬೇತಿಯನ್ನು ನೀಡಿ ತರಬೇತಿಯ ನಂತರ ಪ್ರತಿ ಅಭ್ಯರ್ಥಿಗಳಿಗೆ ಐದು ಸಾವಿರ ಮೊತ್ತದ ಉಚಿತ ಉಪಕರಣಗಳ ಕಿಟ್‍ನ್ನು ಸಹ ನೀಡಲಾಗುತ್ತದೆ.

ತರಬೇತಿಯು 30 ದಿನಗಳ ವಸತಿಯುತ ತರಬೇತಿಯಾಗಿದ್ದು, ಜಿಲ್ಲೆಯ ಗ್ರಾಮೀಣ ಅಭ್ಯರ್ಥಿಗಳಿಗೆ ಮಾತ್ರ ಅನ್ವಯವಾಗುತ್ತದೆ. ಆಸಕ್ತ ಅಭ್ಯರ್ಥಿಗಳು ದಾವಣಗೆರೆ ತಾಲ್ಲೂಕಿನ ತೋಳಹುಣಸೆಯ ಕೆನರಾ ಬ್ಯಾಂಕ್‍ನ ಆರ್-ಸೆಟಿ ತರಬೇತಿ ಸಂಸ್ಥೆ ಅಥವಾ ಗ್ರಾಮೀಣ ಕೈಗಾರಿಕಾ ವಿಭಾಗದ ಉಪ ನಿರ್ದೇಶಕರು(ಖಾಗ್ರಾ) ಇವರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9778929717, 9845691957, 7019980484, 9964111314 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top