Connect with us

Dvgsuddi Kannada | online news portal | Kannada news online

ದಾವಣಗೆರೆ: ನ್ಯಾಯಬೆಲೆ ಅಂಗಡಿ, ಗ್ರಾಮ ಒನ್ ಕೇಂದ್ರದಲ್ಲಿ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಅಭಿಯಾನ

ದಾವಣಗೆರೆ

ದಾವಣಗೆರೆ: ನ್ಯಾಯಬೆಲೆ ಅಂಗಡಿ, ಗ್ರಾಮ ಒನ್ ಕೇಂದ್ರದಲ್ಲಿ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಅಭಿಯಾನ

ದಾವಣಗೆರೆ; ಗ್ರಾಮಾಂತರ ಮಟ್ಟದಲ್ಲಿರುವ ಎಲ್ಲಾ ನ್ಯಾಯಬೆಲೆ ಅಂಗಡಿಗಳಲ್ಲಿ ಮತ್ತು ಗ್ರಾಮ ಒನ್ ಕೇಂದ್ರಗಳಲ್ಲಿ ಉಚಿತ ಆಯುಷ್ಮಾನ್ ಭಾರತ್ ಕಾರ್ಡ್‍ಗಳನ್ನು ಎಲ್ಲಾ ಪಡಿತರ ಫಲಾನುಭವಿಗಳಿಗೆ ಶಿಬಿರಗಳ ಮೂಲಕ ನೋಂದಣಿಯನ್ನು ಹಮ್ಮಿಕೊಳ್ಳಲಾಗಿದೆ.

ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ನೋಂದಣಿಯಾದ ಬಿ.ಪಿ.ಎಲ್ ಫಲಾನುಭವಿ ಕುಟುಂಬವು ವಾರ್ಷಿಕ 5 ಲಕ್ಷದವರೆಗೆ ಮತ್ತು ಎ.ಪಿ.ಎಲ್ ಫಲಾನುಭವಿ ಕುಟುಂಬವು ವಾರ್ಷಿಕ 1.5 ಲಕ್ಷದವರೆಗೆ ಅಥವಾ ಚಿಕಿತ್ಸೆಯ 30% ರಷ್ಟು ನಗದು ರೈತ ಆರೋಗ್ಯ ರಕ್ಷಣೆಯನ್ನು ಒದಗಿಸುತ್ತದೆ. ಹಾಗೂ ಈ ಕಾರ್ಡುದಾರನ ಚಿಕಿತ್ಸೆಯ ಎಲ್ಲಾ ಮಾಹಿತಿಯು ಈ ಕಾರ್ಡಿನೊಂದಿಗೆ ಅಡಕವಾಗಿದ್ದು ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಗ್ರಾಮ ಒನ್ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಅಪಾರ ಜಿಲ್ಲಾಧಿಕಾರಿ ಪಿ.ಎನ್ ಲೋಕೆಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top