ದಾವಣಗೆರೆ: ದಾವಣಗೆರೆ ನಗರ ದೇವತೆ ದುರ್ಗಾಂಬಿಕ ದೇವಿ ಜಾತ್ರಾ ಮಹೋತ್ಸವ ಹಿನ್ನೆಲೆ ಜಿಲ್ಲಾ ಪೊಲೀಸ್ ರಸ್ತೆ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಿದೆ. ಇನ್ನು ಕಾರ್ ಪಾರ್ಕಿಂಗ್ ಗೆ ಈ ಕೆಳಕಂಡ ಪ್ರದೇಶದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.
ಸಾರ್ವಜನಿಕರ ಅನುಕೂಲ ಹಾಗೂ ಸುಗಮ ಸಂಚಾರಕ್ಕಾಗಿ ಪಿಬಿ ರಸ್ತೆಯ ಅರುಣ ಚಿತ್ರಮಂದಿರದಿಂದ ಹೊಂಡದ ಸರ್ಕಲ್ ವರೆಗೆ ಹಾಗೂ ಹೊಂಡದ ರಸ್ತೆಯಿಂದ ಜಾಲಿನಗರ 2ನೇ ಮುಖ್ಯ ರಸ್ತೆ, ಶಿವಾಲಿ ರಸ್ತೆಯ ಕೋರ್ಟ್ ಸರ್ಕಲ್ ವೆಗೆ ಒಮ್ಮುಖ ರಸ್ತೆಯನ್ನಾಗಿ ಮಾರ್ಪಡು ಮಾಡಲಾಗಿದೆ. ದುರ್ಗಾಂಬಿಕಾ ದೇವಸ್ಥಾನಕ್ಕೆ ಬರುವವರು ಅರುಣ ಚಿತ್ರಮಂದಿರ ಮೂಲಕ ಬಂದು ದೇವಿ ದರ್ಶನ ಪಡೆದು ಜಾಲಿನಗರದ ಮೂಲಕ ಕೋರ್ಟ್ ಸರ್ಕಲ್ ಮೂಲಕ ಪಿಬಿ ರಸ್ತೆಗೆ ಸೇರಬೇಕಿದೆ ಎಂದು ಜಿಲ್ಲಾ ಪೊಲೀಸ್ ತಿಳಿಸಿದೆ.
- ಪಾರ್ಕಿಂಗ್ ಸ್ಥಳಗಳು
- ಜಾಲಿನಗರ ದುರ್ಗಾಂಬಿಕ ಶಾಲೆ ಒಳಗಡೆ
- ಹೊಂಡದ ಸರ್ಕಲ್ ಮಳಿಗೆ ಹಿಂಭಾಗ
- ಬೂದಾಳ್ ರಸ್ತೆಯ ದುರ್ಗಾಂಬಿಕ ದೇವಸ್ಥಾನ ಮಂಡಳಿ ಸ್ಥಳ
- ರಾಜ್ ಕುಮಾರ್ ಶಾಲೆಯ ಹತ್ತಿರ ಬೂದಾಳ್ ರಸ್ತೆ
- ಹಳೇ ರಾಜ್ ಕುಮಾರ್ ಶಾಲೆ ಕಾಳಿಕ ದೇವಿ ರಸ್ತೆ
- ಮೈಲಾರಲಿಂಗೇಶ್ವರ ದೇವಸ್ಥಾನ, ಹಳೇ ಬೂದಾಳ್ ರಸ್ತೆ



