Connect with us

Dvgsuddi Kannada | online news portal | Kannada news online

ದುಗ್ಗಮ್ಮ ಜಾತ್ರೆಯ ನಾಗರಿಕರ ಸೌಹಾರ್ದ ಸಭೆ; ದೇವಸ್ಥಾನದ ಸುತ್ತ ಐದು ನೂರು ಮೀಟರ್ ಪ್ರಾಣಿ ಬಲಿ ನಿಷೇಧ; ಸಿರಂಜ್ ಮೂಲಕ ರಕ್ತ ತೆಗೆದು ಸಮರ್ಪಿಸಿ- ಜಿಲ್ಲಾಧಿಕಾರಿ

ಪ್ರಮುಖ ಸುದ್ದಿ

ದುಗ್ಗಮ್ಮ ಜಾತ್ರೆಯ ನಾಗರಿಕರ ಸೌಹಾರ್ದ ಸಭೆ; ದೇವಸ್ಥಾನದ ಸುತ್ತ ಐದು ನೂರು ಮೀಟರ್ ಪ್ರಾಣಿ ಬಲಿ ನಿಷೇಧ; ಸಿರಂಜ್ ಮೂಲಕ ರಕ್ತ ತೆಗೆದು ಸಮರ್ಪಿಸಿ- ಜಿಲ್ಲಾಧಿಕಾರಿ

ದಾವಣಗೆರೆ;‌ ನಗರ ದೇವತೆ ದುಗ್ಗಮ್ಮ ಜಾತ್ರೆ, ವಿನೋಬ ನಗರದ ಚೌಡೇಶ್ವರಿ ಜಾತ್ರೆ ಹಾಗೂ ಹೋಳಿ ಹಬ್ಬಗಳನ್ನು ಶಾಂತಿ ಸೌಹಾರ್ದತೆಯಿಂದ ಆಚರಿಸುವ ಮೂಲಕ ಹಬ್ಬಗಳ ಹೆಸರಿನಲ್ಲಿ ನಡೆಯುವ ಕೆಲ ಮೂಢನಂಬಿಕೆಗಳನ್ನ ಧಿಕ್ಕರಿಸುವ ಮೂಲಕ ಹೊಸತನಕ್ಕೆ ಹೊಂದಿಕೊಳ್ಳೋಣ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು.

ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಸೌಹಾರ್ದ ಸಭೆಯಲ್ಲಿ ಮಾತನಾಡಿದ ಅವರು ಸರ್ಕಾರ ಹಾಗೂ ಉಚ್ಚ ನ್ಯಾಯಾಲಯದ ಆದೇಶದಂತೆ ಪ್ರಾಣಿಬಲಿ ನಿಷೇಧವಿದ್ದು, ದೇವಸ್ಥಾನದ ಆವರಣ ಹಾಗೂ ಸುತ್ತಲಿನ ಐದು ನೂರು ಮೀಟರ್ ಆವರಣದಲ್ಲಿ ಯಾವುದೇ ಪ್ರಾಣಿಬಲಿ ಮಾಡುವುದು ಬೇಡ, ಸಂಪ್ರದಾಯದಂತೆ ಕೋಣನ ರಕ್ತವನ್ನು ಸಿರಂಜ್ ಮೂಲಕ ತೆಗೆದು ದೇವರಿಗೆ ಅರ್ಪಿಸೋಣವೆಂದರು.

ಇದರೊಂದಿಗೆ ಬೇವಿನುಡಿಗೆಯ ಸೇವೆ ಕೂಡ ನಿಷೇಧವಿದ್ದು ಬೇವಿನ ಎಸಳನ್ನು ದೇವಿಗೆ ಅರ್ಪಿಸುವ ಮೂಲಕ ಹರಕೆ ತೀರಿಸಿ ಎಂದರು.ಪ್ರಾಣಿಬಲಿ ನಿಷೇಧ ಕಾಯ್ದೆಯು ಅತ್ಯಂತ ಕಠಿಣವಾಗಿದ್ದು, ಯಾರಾದರು ಕಾನೂನು ಮೀರಿ ವರ್ತಿಸಿದರೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ, ಕೆಲ ಸಂದರ್ಭಗಳಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ, ಅಂತಹದಕ್ಕೆ ಯಾರೂ ಅವಕಾಶ ಮಾಡಿಕೊಡಬಾರದು ಇದರಿಂದ ದೇವಸ್ಥಾನದ ಆಡಳಿತ ಮಂಡಳಿಗೂ ತೊಂದರೆಯಾಗುತ್ತದೆ. ಜಿಲ್ಲಾಡಳಿತ ಹಾಗೂ ವಿವಿಧ ಇಲಾಖೆಗಳು ಜಾತ್ರಾ ಯಶಸ್ಸಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದೆಂದರು.

ಮಹಾನಗರ ಪಾಲಿಕೆ ಮೇಯರ್ ಜಯಮ್ಮ ಗೋಪಿನಾಯ್ಕ ಮಾತನಾಡಿ, ಜಾತ್ರೆಗಳು ಸುಗಮವಾಗಿ ನಡೆಯಲು ಪಾಲಿಕೆ ವತಿಯಿಂದ ಎಲ್ಲಾ ನೆರವು ನೀಡಲಾಗುವುದು. ಎಲ್ಲರೂ ಪರಸ್ಪರ ಸಹಕರಿಸಿ ಜಾತ್ರೆಗಳು ಅದ್ದೂರಿಯಾಗಿ ನಡೆಯುವಂತೆ ನೋಡಿಕೊಳ್ಳೋಣವೆಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಮಾತನಾಡಿ ಎರಡೂ ಜಾತ್ರಾ ಮಹೋತ್ಸವಗಳು ಯಶಸ್ವಿಯಾಗಿ ಜರುಗಲಿ, ಟ್ರಾಪಿಕ್ ಸಮಸ್ಯೆಯಾಗದಂತೆ ಹಾಗೂ ಪಾರ್ಕಿಂಗ್ ಸಂಭಂಧಿಸಿದಂತೆ ಎಲ್ಲಾ ತಯಾರಿ ಮಾಡಿಕೊಳ್ಳಲಾಗುವುದು. ಎಲ್ಲಾ ಕಡೆ ಮಾರ್ಗ ಫಲಕಗಳನ್ನು ಹಾಕಲಾಗುವುದು, ಸಾಕಷ್ಟು ಕಸದ ರಾಶಿ ಬೀಳುವುದರಿಂದ ದೇವಸ್ಥಾನದ ಆಡಳಿತ ಮಂಡಳಿಯವರು ಎಲ್ಲಾ ಕಡೆ ಕಸದ ಬುಟ್ಟಿಗಳನ್ನಿಡಲಿ, ರಸ್ತೆಗಳು ಕಿರಿದಾಗಿದ್ದು ವ್ಯಾಪಾರಿಗಳು ಹೆಚ್ಚು ರಸ್ಥೆ ಮೇಲೆ ಅಂಗಡಿಗಳನ್ನು ಇಡುವುದನ್ನು ತಡೆಯಬೇಕು ಹಾಗೂ 280 ಸಿಸಿಟಿವಿ ಕ್ಯಾಮರಾಗಳನ್ನು ಹಾಕಲಾಗುವುದು ಮತ್ತು ಡ್ರೋಣ್ ಕ್ಯಾಮರಾಗಳು ಕಣ್ಗಾವಲುಇರಲಿವೆ, ದೇವಸ್ಥಾನದ ವತಿಯಿಂದ ಹೆಚ್ಚು ಸ್ವಯಂ ಸೇವಕರನ್ನು ನೀಡಿ ಹಾಗು ಅವರಿಗೆ ಐ.ಡಿ ಕಾರ್ಡ್‍ಗಳನ್ನು ನೀಡಿ ಎಂದರು.

ಮುಖಂಡರಾದ ಚನ್ನಬಸಪ್ಪ ಗೌಡ್ರು ಮಾತನಾಡಿ ಜಾತ್ರೆಗೆ ಜಿಲ್ಲಾಡಳಿತ ಸಂಪೂರ್ಣವಾಗಿ ಸಹಕಾರ ನೀಡಿದ್ದು, ಕೊರೋನಾ ಮಾರ್ಗಸೂಚಿಗಳಂತೆ ಜಾತ್ರೆ ಆಚರಿಸೋಣ, ಹೊರ ಜಿಲ್ಲೆ, ರಾಜ್ಯಗಳಿಂದ ಭಕ್ತರು ಆಗಮಿಸಲಿದ್ದು ಅವರಿಗೆ ಎಲ್ಲಾ ವ್ಯವಸ್ಥಗಳನ್ನು ಮಾಡಿಕೊಡಬೇಕೆಂದರು, ಮಹಾನಗರ ಪಾಲಿಕೆ ಕಟ್ಟಡಗಳಿಗೆ ಸುಣ್ಣ ಬಣ್ಣ, ಉತ್ತಮ ರಸ್ಥೆ, ನೀರಿನ ವ್ಯವಸ್ಥೆ ಮಾಡಲಿ ಎಂದರು.

ಮುಖಂಡರಾದ ಶ್ರೀನಿವಾಸ್ ದಾಸ ಕರಿಯಪ್ಪ ಮಾತನಾಡಿ ಜಿಲ್ಲಾಡಳಿತದ ಆದೇಶದಂತೆ ಜಾತ್ರೆ ಮಾಡಲು ನಮ್ಮ ಸಮ್ಮತಿ ಇದೆ, ಜಾತ್ರೆ ಯಶಸ್ಸಿನಲ್ಲಿ ಪಾಲಿಕೆಯ ಪಾತ್ರ ಬಹಳಷ್ಟಿದೆ ಎಂದರು.
ಮುಖಂದರಾದ ಸಾದಿಕ್ ಪೈಲ್ವಾನ್ ಮಾತನಾಡಿ ದಾವಣಗೆರೆಯಲ್ಲಿ ಯಾವುದೇ ಹಬ್ಬ ಜಾತ್ರೆಗಳು ಸೌಹಾರ್ದತೆಯಿಂದ ನಡೆಯುತ್ತವೆ,ನಮ್ಮಸಂಪೂರ್ಣ ಸಹಕಾರ ಇರಲಿದೆ ಎಂದರು.

ದೂಢಾ ಮಾಜಿ ಅಧ್ಯಕ್ಷ, ಯಶವಂತ ರಾವ್ ಜಾಧವ್ ಮಾತನಾಡಿ,ಎಲ್ಲಾ ಕೋಮಿನವರೂ ಅತ್ಯಂತ ಅನ್ಯೋನ್ಯವಾಗಿ ಜಾತ್ರೆ ಆಚರಿಸುತ್ತೇವೆ, ಆದರೂ ಎಲ್ಲಾ ಕೋಮಿನಲ್ಲೂ ಕಿಡಿಗೇಡಿಗಳಿರುತ್ತಾರೆ ಅಂತಹವರಿಗೆ ಎಚ್ಚರಿಕೆ ನೀಡಿ ಎಂದರು.
ಮುಖಂಡರಾದ ಸೈಯದ್ ಚಾರ್ಲಿ ಮಾತನಾಡಿ ಎಲ್ಲಾ ಧರ್ಮದ ಹಬ್ಬಗಳೂ ಸೌಹಾರ್ದತೆಯಿಂದ ನಡೆಯಲಿ ಎಂದರು
ದೂಡ ಮಾಜಿ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್ ಮಾತನಾಡಿ,ಕುರಿ ಕಾಳಗವನ್ನು ನಿಗದಿತ ದೇವರಾಜ ಅರಸು ಬಡಾವಣೆಯಲ್ಲಿಯೇ ನಡೆಸಲು ಅವಕಾಶ ನೀಡಿ ಎಂದರು.

ಮುಖಂಡರುಗಳಾದ, ಅವರಗೆರೆ ಉಮೇಶ್, ಹೆಚ್. ಮಲ್ಲೇಶ್, ಅಮಾನಲ್ಲಾ ಖಾನ್, ಹೆಗ್ಗೆರೆ ರಂಗಪ್ಪ ಮಾತನಾಡಿದರು.
ಸಭೆಯಲ್ಲಿ ಉಪ ಮೇಯರ್ ಗಾಯತ್ರಿ ಬಾಯಿ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಡಿಹೆಚ್‍ಒ ನಾಗರಾಜು, ಡಾ. ಚಂದ್ರಶೇಖರ್ ಸುಂಕದ್, ಪೊಲೀಸ್ ಅಧಿಕಾರಿಗಳು ವಿವಿಧ ಸಮಾಜದ ಮುಖಂಡರು ಹಾಜರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top