Connect with us

Dvgsuddi Kannada | online news portal | Kannada news online

BEL ನಲ್ಲಿ 23 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಪ್ರಮುಖ ಸುದ್ದಿ

BEL ನಲ್ಲಿ 23 ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಬೆಂಗಳೂರು: ಭಾರತ್​ ಎಲೆಕ್ಟ್ರಾನಿಕ್ಸ್​ ಲಿಮಿಟೆಡ್​ (ಬಿಇಎಲ್​) ಬೆಂಗಳೂರು ಕೇಂದ್ರದಲ್ಲಿ ಆರಂಭಿಸುತ್ತಿರುವ NAVAL Systems (S&CS) ಯೋಜನೆಗೆ 15 ಪ್ರಾಜೆಕ್ಟ್​ ಇಂಜಿನಿಯರ್​ಗಳನ್ನು ಹಾಗೂ 8 ಸೀನಿಯರ್​ ಅಸಿಸ್ಟೆಂಟ್​ ಇಂಜಿನಿಯರ್​ಗಳನ್ನು ಸೇರಿ ಒಟ್ಟು 23 ಹುದ್ದೆ ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಿದೆ.

ಪ್ರಾಜೆಕ್ಟ್​ ಇಂಜಿನಿಯರ್ಸ್​ – 15
ಸಾಮಾನ್ಯವರ್ಗ, ಒಬಿಸಿ ಅಭ್ಯರ್ಥಿಗಳು ಎಲೆಕ್ಟ್ರಾನಿಕ್ಸ್​/ ಎಲೆಕ್ಟ್ರಾನಿಕ್ಸ್​ ಅಂಡ್​ ಕಮ್ಯುನಿಕೇಷನ್​/ ಎಲೆಕ್ಟ್ರಾನಿಕ್ಸ್​ ಅಂಡ್ ಟೆಲಿ ಕಮ್ಯುನಿಕೇಷನ್​/ ಟೆಲಿಕಮ್ಯುನಿಕೇಷನ್​/ ಮೆಕಾನಿಕಲ್​ನಲ್ಲಿ ಪೂರ್ಣಾವಧಿಯ ಬಿಇ/ ಬಿ.ಟೆಕ್​/ ಬಿಎಸ್ಸಿ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಎಸ್ಸಿ, ಎಸ್ಟಿ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರೆ ಸಾಕು. ವ್ಯಾಸಂಗದ ಬಳಿಕ ಕನಿಷ್ಠ 2 ವರ್ಷ ವೃತ್ತಿ ಅನುಭವ ಹೊಂದಿರಬೇಕು.

ಅಭ್ಯರ್ಥಿಗಳು ಕನಿಷ್ಠ 2 ವರ್ಷದ ಒಪ್ಪಂದಕ್ಕೆ ಒಳಪಟ್ಟಿದ್ದು, ಅವರ ಕಾರ್ಯಕ್ಷಮತೆ ಆಧರಿಸಿ ಗರಿಷ್ಠ 4 ವರ್ಷಕ್ಕೆ ಅವಧಿ ವಿಸ್ತರಿಸಬಹುದಾಗಿದೆ. ಬೆಂಗಳೂರಲ್ಲಿ ಕೆಲಸ ಮಾಡಲು ಇಚ್ಛೆ ಉಳ್ಳವರು ಅರ್ಜಿ ಸಲ್ಲಿಸಬಹುದು.

ದಿನಾಂಕ 1-3-2022ಕ್ಕೆ ಗರಿಷ್ಠ 32 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ 3 ರಿಂದ 10 ವರ್ಷ ವಯೋ ಸಡಿಲಿಕೆ ಇದೆ. ಮೊದಲ ವರ್ಷ ಮಾಸಿಕ 40,000 ರೂ, 2ನೇ ವರ್ಷ 45,000 ರೂ., 3 ಮತ್ತು 4ನೇ ವರ್ಷಕ್ಕೆ ಕ್ರಮವಾಗಿ 50 ಹಾಗೂ 55 ಸಾವಿರ ರೂ. ವೇತನ ಇರುತ್ತದೆ. ಎಸ್ಸಿ, ಎಸ್ಟಿ, ಅಂಗವಿಕಲ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕ ಇದೆ.

ಸೀನಿಯರ್​ ಅಸಿಸ್ಟೆಂಟ್​ ಇಂಜಿನಿಯರ್​ – 8
ಬಿಇಎಲ್​ನ ಬೆಂಗಳೂರು ಘಟಕದಲ್ಲಿ ಕೆಲಸ ನಿರ್ವಹಿಸಲು ನೌಕಾಪಡೆಯ ಮಾಜಿ ಸೈನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಜೆಸಿಒ ರ‍್ಯಾಂಕಿಂಗ್​ ಆಧಾರದಲ್ಲಿ 5 ವರ್ಷದ ನಿರ್ದಿಷ್ಟ ಅವಧಿಗೆ 8 ಸೀನಿಯರ್​ ಅಸಿಸ್ಟೆಂಟ್​ ಇಂಜಿನಿಯರ್​ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ.

ಎಲೆಕ್ಟ್ರಾನಿಕ್ಸ್​/ ಎಲೆಕ್ಟ್ರಾನಿಕ್ಸ್​ ಅಂಡ್‌ ಕಮ್ಯುನಿಕೇಷನ್​/ ಎಲೆಕ್ಟ್ರಾನಿಕ್ಸ್​ ಆಂಡ್ ಟೆಲಿ ಕಮ್ಯುನಿಕೇಷನ್​/ ಟೆಲಿಕಮ್ಯುನಿಕೇಷನ್​/ ಕಮ್ಯುನಿಕೇಷನ್​ನಲ್ಲಿ ಡಿಪ್ಲೊಮಾ ಮಾಡಿದ್ದು, ವೃತ್ತಿ ಅನುಭವ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮಾಸಿಕ 30,000-1,20,000 ರೂ. ವೇತನ ಹಾಗೂ ಇತರ ಭತ್ಯೆ ನೀಡಲಾಗುವುದು. ಗರಿಷ್ಠ 50 ವರ್ಷ ವಯೋಮಿತಿ ಇದ್ದು, ಮೀಸಲಾತಿ ಅಭ್ಯರ್ಥಿಗಳಿಗೆ ವಯೋಸಡಿಲಿಕೆ ಇದೆ.

ಆಸಕ್ತ ಅಭ್ಯರ್ಥಿಗಳು Sr.DGM (HR), Naval Systems SBU, Bharat Electronics Ltd, Jalahalli post, Bangalore – 560 013 ವಿಳಾಸಕ್ಕೆ ಅರ್ಜಿ ಸಲ್ಲಿಸಲು ಸೂಚಿಸಬಹುದು. ಡರ್ಜಿ ಸಲ್ಲಿಸಲು ಕೊನೇ ದಿನ: 23.3.2022. ಮಾಹಿತಿಗೆ: http://www.bel-india.in ಭೇಟಿ ನೀಡಿ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top