ದಾವಣಗೆರೆ: ಸಮರ್ಥನಂ ಅಂಗವಿಕಲರ ಸಂಸ್ಥೆ ಧಾರವಾಡ ಇವರು ವಿಕಲಚೇತನರಿಗೆ ಉದ್ಯೋಗ ಮೇಳವನ್ನು ಬೆಂಗಳೂರಿನ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದ ಬಳಿಯ ತೋಟದಪ್ಪನ ಛತ್ರದ ಪಕ್ಕದಲ್ಲಿರುವ ಬೆಲ್ ಹೋಟೆಲ್ ಹಾಗೂ ಕನ್ವೆನ್‍ಷನ್ ಸೆಂಟರ್‍ನಲ್ಲಿ ಡಿ.11 ರಂದು ಬೆಳಿಗ್ಗೆ 9.30 ಗಂಟೆಗೆ ಆಯೋಜಿಸಲಾಗಿದೆ.
ಈ ಉದ್ಯೋಗ ಮೇಳಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿಕಲಚೇತನರು ಭಾಗವಹಿಸಲು ಜಿಲ್ಲೆಯ ಎಲ್ಲ ಎಂ.ಆರ್.ಡಬ್ಲ್ಯೂ, ವಿ. ಆರ್.ಡಬ್ಲ್ಯೂ, ಹಾಗೂ ಯು.ಆರ್.ಡಬ್ಲ್ಯೂ ಕಾರ್ಯಕರ್ತರು ವ್ಯಾಪಕ ಪ್ರಚಾರ ನೀಡಿ ಸಹಕರಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಮರ್ಥನಂ ಸಂಸ್ಥೆಯ ವೀರಭದ್ರ ಪಾಟೀಲ್ ಮೊ.ಸಂ: 6364867795 ವೆಬ್‍ಸೈಟ್ placements@samarthanam.org ಸುಭಾಷ್ ಮೊ.ಸಂ: 9449864693 ವೆಬ್‍ಸೈಟ್ centerhead_bangalore@smarthnam.org ಇವರನ್ನು ಸಂಪರ್ಕಿಸಬಹುದೆಂದು ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಅಧಿಕಾರಿ ಡಾ.ಕೆ.ಕೆ. ಪ್ರಕಾಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



