ದಾವಣಗೆರೆ: ಏಳು ತಿಂಗಳ ಅವಧಿಯ ಕೆಲಸ ತೃಪ್ತಿ ತಂದಿದೆ: ಧೂಡಾ ನಿಕಟಪೂರ್ವ ಅಧ್ಯಕ್ಷ ದೇವರಮನೆ ಶಿವಕುಮಾರ್

Dvgsuddi
By
Dvgsuddi
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ....
2 Min Read

ದಾವಣಗೆರೆ:  ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ (ಧೂಡಾ)  ಅಧ್ಯಕ್ಷನಾಗಿ ಏಳು ತಿಂಗಳು ಅವಧಿಯ ಕೆಲಸ ತೃಪ್ತಿ ತಂದಿದೆ. ಈ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾಗಿವೆ ಎಂದು ಧೂಡಾ ನಿಕಟಪೂರ್ವ ಅಧ್ಯಕ್ಷ  ದೇವರಮನೆ ಶಿವಕುಮಾರ್ ಹೇಳಿದರು.

ಧೂಡಾ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು,  ಅಧಿಕಾರ ವಹಿಸಿಕೊಂಡ ನಂತರ  ನಗರದ ಅನೇಕ ಬಡಾವಣೆಯಗಳಲ್ಲಿ ಅಭಿವೃದ್ಧಿ ಕೆಲಸಗಳಾಗಿವೆ.  ‌ರಿಂಗ್ ರೋಡ್, ಹೊಂಡದ ಸರ್ಕಲ್, ಶಿವಾಜಿ ಸರ್ಕಲ್ , ಡಿಸಿಎಂ ಟೌನ್ ಶಿಪ್ ಅಭಿವೃದ್ಧಿ, ನಿಜಲಿಂಗಪ್ಪ ಬಡಾವಣೆ, ದೇವರಾಜ್ ಅರಸು ಬಡಾವಣೆ ಸೇರಿದಂತೆ  ಸಾಕಷ್ಟು ಕಡೆ ಅಭಿವೃದ್ಧಿ ಕಾರ್ಯಗಳಾಗಿವೆ ಎಂದರು.

4 ಕೋಟಿಯ ಟೆಂಡರ್: ಧೂಡಾಕ್ಕೆ ಆದಾಯ ತರಲು ನಗರದ ಆರ್ ಟಿಒ ಕಚೇರಿ ಎದುರು ಕಮರ್ಷಿಯಲ್ ಕಾಂಪ್ಲೆಕ್ಸ್ ನಿರ್ಮಾಣ ಮಾಡಲು 4 ಕೋಟಿ ರೂಪಾಯಿಗೆ  ಟೆಂಡರ್ ಕರೆಯಲಾಗಿದೆ. ಈ ಕಾಮಗಾರಿಗೆ ಶೀಘ್ರವೇ ಅನುಮೋದನೆ ಸಿಗಲಿದೆ. ದೂಡಾ ಕಚೇರಿ ಡಿಜಿಟಲ್ ಕರಣಕ್ಕೆ 2 ಕೋಟಿ ಟೆಂಡರ್ ಕರೆಯಲಾಗಿದ್ದು, ಜಿಲ್ಲಾಧಿಕಾರಿ ಒಪ್ಪಿಗೆ ನೀಡಿದ ನಂತರ ಕೆಲಸ ನಡೆಯಲಿದೆ ಎಂದು ತಿಳಿಸಿದರು.

  • ಬಾತಿಕೆರೆಯಲ್ಲಿ ವಂಡರ್ ಲಾ ಮಾದರಿಯಲ್ಲಿ ಅಮ್ಯೂಸ್ ಮೆಂಟ್ ಪಾರ್ಕ್ ಮಾದರಿ ಪಾರ್ಕ್ ನಿರ್ಮಾಣಕ್ಕ 4 ಕೋಟಿ  ಯೋಜನೆ ಸಿದ್ಧ
  • ಕುಂದುವಾಡದಲ್ಲಿ ಹೊಸ ಲೇಔಟ್ ಗೆ  53 ಎಕರೆ ಜಮೀನು ಖರೀದಿಸಲು ಜಿಲ್ಲಾಧಿಕಾರಿ ಆದ್ಯಕ್ಷತೆಯಲ್ಲಿ ಸಭೆ ನಡೆಸಿ ದರ ನಿಗಧಿ
  • ನಗರದ ನಿಜಲಿಂಗಪ್ಪ ಬಡಾವಣೆ,ಜೆ.ಹೆಚ್ ಪಟೇಲ್ ಬಡಾವಣೆ ಮಾದರಿಯಲ್ಲಿ ಹೊಸ ಬಡಾವಣೆ ನಿರ್ಮಾಣ
  • 10  ವರ್ಷದಿಂದ ನೆನೆಗುದಿಗೆ ಬಿದ್ದಿದ್ದ  ಸಿಡಿಪಿ ಯೋಜನೆಯನ್ನು ತ್ವರಿತವಾಗಿ ಚಾಲನೆ
  • ಧೂಡಾದಿಂದ ವಿವಿಧ ‌ಸಮಾಜಗಳಿಗೆ ಹಾಗೂ ಸಂಘಸಂಸ್ಥೆಗಳಿಗೆ 16 ಸಿಎ ನಿವೇಶನ ಹಂಚಿಕೆ

ಹೀಗೆ ನನ್ನ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಪ್ರಗತಿಯಲ್ಲಿವೆ. ಸಂಸದರು, ಶಾಸಕರ, ಧೂಡಾ ಆಯುಕ್ತರು ಹಾಗೂ ಸಿಬ್ಬಂದಿಗ ಸಹಕಾರದಿಂದ ಅಭಿವೃದ್ಧಿ ಕಾರ್ಯ ಮಾಡಿದ್ದೇನೆ ಎಂದರು ತಿಳಿಸಿದರು.  ಈ ಸಂದರ್ಭದಲ್ಲಿ ಲಕ್ಷ್ಮಣ್, ಬಾತಿ ಚಂದ್ರಶೇಖರ್, ಮಾಲತೇಶ್ ಘಾಟ್ಗೆ, ಗೌರಮ್ಮವಿ ಪಾಟೀಲ್, ಶಿವನಗೌಡ ಟಿ ಪಾಟೀಲ್, ಟಿಂಕರ್ ಮಂಜಣ್ಣ, ಜಯಪ್ರಕಾಶ್ ಇದ್ದರು.

ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ (ಧೂಡಾ) ನೂತನ ಅಧ್ಯಕ್ಷರಾಗಿ ಬಿಜೆಪಿ ಶಿಕ್ಷಕ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕ ಹಾಗೂ ಶ್ರೀ ಸೋಮೇಶ್ವರ ವಿದ್ಯಾಲಯದ ಗೌರವ ಕಾರ್ಯದರ್ಶಿ ಕೆ.ಎಂ.ಸುರೇಶ್ ಅವರು ನೇಮಕಗೊಂಡಿದ್ದಾರೆ.

 

Share This Article
Follow:
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Leave a Comment

Leave a Reply

Your email address will not be published. Required fields are marked *