ದಾವಣಗೆರೆ: ದಾವಣಗೆರೆ ಹರಿಹರ ನಗರಾಭಿವೃದ್ಧಿ ಪಾಧಿಕಾರ( ದೂಡಾ) ವ್ಯಾಪ್ತಿಯ ಉದ್ಯಾನ, ಕೆರೆಗಳ ಅಭಿವೃದ್ಧಿಪಡಿಸಬೇಕು. ಗಾಂಧಿನಗರ, ಭಾಷಾನಗರ ಸೇರಿ ಎಲ್ಲೆಲ್ಲಿ ಮಳೆ ನೀರು ನಿಂತು ತೊಂದರೆ ಆಗುವುದೆಯೋ, ಅಲ್ಲಲ್ಲಿ ವ್ಯವಸ್ಥಿತ ಕಾಮಗಾರಿ ಮಾಡಿ ನಗರ ಅಭಿವೃದ್ಧಿ ಒತ್ತು ನೀಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್ ಮಲ್ಲಿಕಾರ್ಜನ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ದೂಡಾ ಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿ, ಕುಂದವಾಡ ಕೆರೆಯಲ್ಲಿ ಕಳಪೆ ಕಾಮಗಾರಿ ನಡೆದಿದೆ. ಇದೇ ರೀತಿ ಬಾತಿ ಕೆರೆ ಕಾಮಗಾರಿ ಮಾಡದೇ, ಕೆರೆಯನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಿ ಪ್ರವಾಸಿ ತಾಣವನ್ನಾಗಿ ಮಾಡಿ.
ಎಸ್.ಎಸ್.ಎಂ ನಗರದಲ್ಲಿನ ಕ್ರೀಡಾಂಗಣದಲ್ಲಿ ಕ್ರೀಡಾಪಟುಗಳಿಗೆ ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿ ಮಾಡಿ. ಗಾಂಧಿನಗರ ಸಾರ್ವಜನಿಕರ ರುದ್ರಭೂಮಿ ಅವ್ಯವಸ್ಥೆಯಿಂದ ಕೂಡಿದೆ ಎಂದು ಸದಸ್ಯರು ದೂರಿದರು. ಆಗ ಸಚಿವರು, ಅಧಿಕಾರಗಳಿಗೆ ಮಳೆ ನೀರು ನಿಲ್ಲದಂತೆ ನೀಡಿಕೊಳ್ಳುವಂತೆ ಸೂಚಿಸದರು.ಸಭೆಯ ನಂತರ ಸಚಿವರು, ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ. ಗಂಗಾಧರ ಸ್ವಾಮಿ, ಎಂ.ಎಲ್.ಸಿ ಅಬ್ದುಲ್ ಜಬ್ಬಾರ್, ದೂಡಾ ಅಧ್ಯಕ್ಷ ದಿನೇಶ್.ಕೆ.ಶೆಟ್ಟಿ, ದೂಡಾ ಆಯುಕ್ತರ ಹುಲ್ಲುಮನಿ ತಿಪ್ಪಣ್ಣ, ಪಾಲಿಕೆ ಆಯುಕ್ತ ರೇಣುಕಾ, ಹರಿಹರ ನಗರಸಭೆ ಆಯುಕ್ತ ಸುಬ್ರಹ್ಮಣ್ಯ ಶೆಟ್ಟಿ, ಅಧಿಕಾರಿಗಳು ಹಾಗೂ ದೂಡಾ ಸದಸ್ಯರು ಇದ್ದರು.



