ದಾವಣಗೆರೆ: ಜಿಲ್ಲೆಯ ಜಗಳೂರು ತಾಲ್ಲೂಕಿನ ಭರಮಸಮುದ್ರ ಗ್ರಾಮದ ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಭರಮಸಮಯದ್ರ ಗ್ರಾಮದ ಬಿ.ಅಜಯ್ (18 ), ಟಿ.ಕಾರ್ತಿಕ್ (19) ಸಾವನ್ಬಪ್ಪಿದ ಯುವಕರು. 2 ದಶಕಗಳಿಂದ ಬರಿದಾಗಿದ್ದ ಕೆರೆ ಈ ವರ್ಷ ಮಳೆ ನೀರುಗೆ ಭರ್ತಿಯಾಗಿತ್ತು. ಇಬ್ಬರೂ ಸ್ನೇಹಿತರೊಂದಿಗೆ ಈಜಲು ಕೆರೆಗೆ ತೆರಳಿದ್ದರು.
ಈಜಲು ಬಾರದ ಕಾರಣಕಾರ್ತಿಕ್ ಮುಳುಗುತ್ತಿದ್ದನ್ನು ಕಂಡ ಅಜಯ್ ರಕ್ಷಣೆಗೆ ಮುಂದಾಗಿದ್ದಾನೆ. ಆಗ, ಇಬ್ಬರೂ ಗುಂಡಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.