Connect with us

Dvgsuddi Kannada | online news portal | Kannada news online

ದಾವಣಗೆರೆ: ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ವರ್ಷದಲ್ಲಿ ನಾಲ್ಕು ಅವಕಾಶ; ಗರುಡ ಆ್ಯಪ್‍ ಮೂಲಕ ಸ್ವಯಂ ತಿದ್ದುಪಡಿ ಮಾಡಿಕೊಳ್ಳಿ- ಜಿಲ್ಲಾಧಿಕಾರಿ

ದಾವಣಗೆರೆ

ದಾವಣಗೆರೆ: ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ವರ್ಷದಲ್ಲಿ ನಾಲ್ಕು ಅವಕಾಶ; ಗರುಡ ಆ್ಯಪ್‍ ಮೂಲಕ ಸ್ವಯಂ ತಿದ್ದುಪಡಿ ಮಾಡಿಕೊಳ್ಳಿ- ಜಿಲ್ಲಾಧಿಕಾರಿ

ದಾವಣಗೆರೆ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮತದಾರರ ಪಟ್ಟಿಗೆ ನೋಂದಾಯಿಸಲು ವರ್ಷದಲ್ಲಿ ನಾಲ್ಕು ಬಾರಿ ಅವಕಾಶವಿದ್ದು, ಜನವರಿ 01, ಆಗಸ್ಟ್ 01, ಜುಲೈ 01 ಹಾಗೂ ಅಕ್ಟೋಬರ್ 01 ರಂದು ಒಟ್ಟು ನಾಲ್ಕು ಬಾರಿ ಅವಕಾಶಗಳನ್ನು ನಿಗಧಿಪಡಿಸಲಾಗಿದೆ. ಹಾಗೂ ಗರುಡ ಆ್ಯಪ್ ಮೂಲಕ ಸಾರ್ವಜನಿಕರು ತಾವೇ ತಮ್ಮ ಮತದಾರರ ಗುರುತಿನ ಪತ್ರವನ್ನು ಸ್ವಯಂ ದೃಢಿಕರಣದೊಂದಿಗೆ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.

ಸೋಮವಾರ ಅಪರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮತದಾರರ ಪಟ್ಟಿಯಲ್ಲಿ ಮತದಾರರ ದೃಢೀಕರಣ, ಆಧಾರ್ ಜೋಡಣೆ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ ಕುರಿತಂತೆ ಏರ್ಪಡಿಸಲಾದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಪ್ರಜಾ ಪ್ರಾತಿನಿಧ್ಯ ಕಾಯ್ದೆ 1951ರ ಮತ್ತು ಮತದಾರರ ನೊಂದಣಿ ನಿಯಮಗಳು 1960 ರ ಪ್ರಕಾರ ಮತದಾರರ ನೋಂದಣಿಯ ನಮೂನೆಗಳಲ್ಲಿ ಪ್ರಸ್ತುತ ಬಹಳಷ್ಟು ಮಾರ್ಪಾಡುಗಳನ್ನು ಮಾಡಲಾಗಿದೆ. ಇದರಲ್ಲಿ ನಮೂನೆ 6-ಬಿ ಅನ್ನು ಹೊಸದಾಗಿ ಪರಿಚಯಿಸಲಾಗಿದ್ದು, ಮತದಾರರ ಪಟ್ಟಿಯಲ್ಲಿ ನಮೂದುಗಳನ್ನು ದೃಢೀಕರಿಸಲು ಸಂಬಂಧಪಟ್ಟ ಮತದಾರರಿಂದ ಆಧಾರ್ ಸಂಖ್ಯೆ ಪಡೆಯಲು ಈ ನಮೂನೆಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಆನ್‍ಲೈನ್ ಅಥವಾ ಆಫ್‍ಲೈನ್ ಮೂಲಕವೂ ಆಧಾರ್ ಜೋಡಣೆಗೆ ಅವಕಾಶ ಕಲ್ಪಿಸಲಾಗಿದ್ದು. ಆಫ್‍ಲೈನ್ ನಮೂನೆ 6-ಬಿ ಯನ್ನು ಸಂಬಂಧಪಟ್ಟ ಮತದಾರರ ನೋಂದಾಣಾಧಿಕಾರಿ, ತಹಶೀಲ್ದಾರರ ಕಚೇರಿ ಅಥವಾ ಬೂತ್ ಮಟ್ಟದ ಅಧಿಕಾರಿಗಳಿಂದ ಪಡೆದು ಸಲ್ಲಿಸಬಹುದು.

ಮತದಾರರ ಪಟ್ಟಿಗೆ ಸ್ವಯಂ ಆಧಾರ್ ಜೋಡಣೆಗೆ ಅವಕಾಶ ಕಲ್ಪಿಸಿದ್ದು, ಮತದಾರರು ತಮ್ಮ ಗುರುತಿನ ಚೀಟಿಯೊಂದಿಗೆ ಆಧಾರ್ ಜೋಡಣೆ ಮಾಡಿಕೊಳ್ಳಬಹುದು. ಅಲ್ಲದೇ ಇತರೆ 11 ದಾಖಲೆಗಳನ್ನು ಸಲ್ಲಿಸಿ ಮತದಾರರ ಪಟ್ಟಿಯಲ್ಲಿ ಹೆಸರು ದೃಢೀಕರಿಸಿಕೊಳ್ಳಬಹುದು.
ಇತರೆ ದಾಖಲೆಗಳು : ಮನ್ರೇಗಾ (ಎಂಜಿಎನ್‍ಆರ್‍ಇಜಿಎ) ಉದ್ಯೋಗ ಕಾರ್ಡ್, ಬ್ಯಾಂಕ್/ಅಂಚೆ ಕಚೇರಿಯಿಂದ ನೀಡಲಾದ ಭಾವಚಿತ್ರವಿರುವ ಪಾಸ್ ಪುಸ್ತಕಗಳು, ಕಾರ್ಮಿಕ ಮಂತ್ರಾಲಯದ ಯೋಜನೆಯ ಅಡಿಯಲ್ಲಿ ನೀಡಲಾದ ಆರೋಗ್ಯ ವಿಮೆ ಸ್ಮಾರ್ಟ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾನ್ ಕಾರ್ಡ್, ಎನ್‍ಆರ್‍ಪಿ ಅಡಿಯಲ್ಲಿ ಆರ್‍ಜಿಐ ಮೂಲಕ ನೀಡಲಾದ ಸ್ಮಾರ್ಟ್‍ಕಾರ್ಡ್, ಇಂಡಿಯನ್ ಪಾಸ್ ಪೋರ್ಟ್, ಭಾವಚಿತ್ರವಿರುವ ಪಿಂಚಣಿ ದಾಖಲೆ, ಕೇಂದ್ರ/ ರಾಜ್ಯ ಸರ್ಕಾರ/ ಸಾರ್ವಜನಿಕ ವಲಯದ ಉದ್ದಿಮೆಗಳು/ ಸಾರ್ವಜನಿಕ ನಿಯಮಿತ ಕಂಪನಿಗಳಿಂದ ಉದ್ಯೋಗಿಗಳಿಗೆ ನೀಡಲಾದ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿ, ಸಂಸತ್ ಸದಸ್ಯರು/ ವಿಧಾನಸಭಾ ಸದಸ್ಯರು/ ವಿಧಾನಪರಿಷತ್ ಸದಸ್ಯರುಗಳಿಗೆ ನೀಡಲಾದ ಅಧಿಕೃತ ಗುರುತಿನ ಚೀಟಿ, ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಮಂತ್ರಾಲಯದ ಮೂಲಕ ನೀಡಲಾದ ವಿಶಿಷ್ಟ ಗುರುತಿನ ಚೀಟಿ(ಯುಡಿಐಡಿ).

ಆನ್‍ಲೈನ್ ಮೂಲಕವೂ ಅವಕಾಶವಿದ್ದು, ಮತದಾರರು ಆಧಾರ್ ಸಂಖ್ಯೆಯನ್ನು ಎನ್‍ವಿಎಸ್‍ಪಿ ನ್ಯಾಷನಲ್ ವೋಟರ್ಸ ಸರ್ವಿಸ್, “ವಿಹೆಚ್‍ಎ ವೋಟರ್ ಹೆಲ್ಪ್‍ಲೈನ್ ಆ್ಯಪ್ ಹಾಗೂ ಗರುಡ ಆ್ಯಪ್”ಗಳ ಮೂಲಕ ಅಥವಾ ವೋಟರ್ ಪೋರ್ಟಲ್ ಮುಖಾಂತರ ಮೊಬೈಲ್ ಮೂಲಕವೇ ಸ್ವಯಂ ದೃಢೀಕರಣದೊಂದಿಗೆ ಸಲ್ಲಿಸಬಹುದು.

ಮತದಾರರು ಸ್ವಯಂ ದೃಢೀಕರಣ ಬಯಸದಿದ್ದರೆ ಅಥವಾ ಆನ್‍ಲೈನ್ ಸ್ವಯಂ ದೃಢೀಕರಣ ವಿಫಲವಾದಲ್ಲಿ, ಮತದಾರರು ದೃಢೀಕರಣವಿಲ್ಲದೆ ಆಫ್‍ಲೈನ್‍ನಲ್ಲೆ ಅಗತ್ಯ ಲಗತ್ತುಗಳೊಂದಿಗೆ ನಮೂನೆ 6-ಬಿ ನಲ್ಲಿ ಸಲ್ಲಿಸಬಹುದಾಗಿದೆ. ಈ ಕುರಿತಂತೆ ಜಿಲ್ಲೆಯಲ್ಲಿ ಬೂತ್ ಮಟ್ಟದಲ್ಲಿ, ಗ್ರಾಮ, ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿಯೂ ವ್ಯಾಪಕ ಪ್ರಚಾರ ನೀಡಲಾಗುವುದು.
ಎಲ್ಲಾ ಸಾರ್ವಜನಿಕರು ತಮ್ಮ ಬಿಎಲ್‍ಎ ರೊಂದಿಗೆ, ಬೂತ್ ಮಟ್ಟದಲ್ಲಿ ವ್ಯಾಪಕ ಪ್ರಚಾರ ಕೈಗೊಂಡು, ಈ ಪ್ರಕ್ರಿಯೆಯ ಯಶಸ್ವಿಗೆ ಸಹಕಾರ ನೀಡಬೇಕು. ಅರ್ಹ ಮತದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ನೊಂದಣಿ ಮಾಡುವ ಮತ್ತು ಅನರ್ಹ ಮತದಾರರನ್ನು ತೆಗೆದುಹಾಕುವ ಹಾಗೂ ಮತದಾರರಿಂದ ಸ್ವಯಂ ಪ್ರೇರಿತ ಆಧಾರ್ ಸಂಗ್ರಹಣೆ ಕಾರ್ಯದಲ್ಲಿ ಸಹಕರಿಸುವುದರೊಂದಿಗೆ ಭಾರತ ಚುನಾವಣಾ ಆಯೋಗದ ಶುದ್ಧ, ನಿಖರ ಮತ್ತು ದೋಷಮುಕ್ತ ಮತದಾರರ ಪಟ್ಟಿಗಳನ್ನು ತಯಾರಿಸುವ ಕಾರ್ಯವನ್ನು ಜಿಲ್ಲೆಯಲ್ಲಿ ಯಶಸ್ವಿಗೊಳಿಸಲು ಸಹಕರಿಸಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ಸದ್ಯ 1692 ಮತಗಟ್ಟೆಗಳಿದ್ದು ಪುರುಷರು 7,04,685 ಮಹಿಳೆಯರು 6,98,986 ಇತರೆ 122 ಸೇರಿದಂತೆ ಒಟ್ಟು 14,04,280 ಲಕ್ಷ ಮತದಾರರಿದ್ದಾರೆ. ಆಧಾರ್ ಸಂಖ್ಯೆ ನೀಡಿ ಮತದಾರರ ಪಟ್ಟಿ ದೃಢೀಕರಣ ಪ್ರಕ್ರಿಯೆ ಆಗಸ್ಟ್ 04 ರಿಂದ ಜಾರಿಗೆ ಬರಲಿದ್ದು, ಇದು ನಿರಂತರವಾಗಿ ಜಾರಿಯಲ್ಲಿರುತ್ತದೆ. ಮತದಾರರ ಪಟ್ಟಿಗೆ ಅರ್ಹರು ತಮ್ಮ ಹೆಸರು ಸೇರ್ಪಡೆಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ನಮೂನೆ 07 ರಲ್ಲಿ ಹೆಸರು ತೆಗೆದುಹಾಕಲು ಅವಕಾಶ ಕಲ್ಪಿಸಲಾಗಿದೆ. ನಮೂನೆ 08 ರಲ್ಲಿ ಮತದಾರರ ನಿವಾಸ ಬದಲಾವಣೆ, ವಿವಿಧ ತಿದ್ದುಪಡಿಗಳು, ಮತದಾರರ ಗುರುತಿನ ಚೀಟಿ ಬದಲಾವಣೆ ಹಾಗೂ ವಿಕಲಚೇತನ ವ್ಯಕ್ತಿ ಗುರುತಿಸುವುದಕ್ಕಾಗಿ ಬಳಸಲಾಗುವುದು.

ಚುನಾವಣಾ ಕ್ಷೇತ್ರದೊಳಗೆ ಒಂದು ಭಾಗ ಸಂಖ್ಯೆಯಿಂದ ಮತ್ತೋಂದು ಭಾಗಸಂಖ್ಯೆಗೆ ವರ್ಗಾವಣೆ ಹೊಂದಲು ಹಾಗೂ ಒಂದು ಕ್ಷೇತ್ರದಿಂದ ಮತ್ತೋಂದು ಕ್ಷೇತ್ರಕ್ಕೆ ಬದಲಾವಣೆ ಹೊಂದಲು ಅವಕಾಶ ಕಲ್ಪಿಸಲಾಗಿದೆ. ಮತಗಟ್ಟೆಗಳ ರ್ಯಾಷಲೈಜೇಷನ್ ಅಥವಾ ಮರು ವ್ಯವಸ್ಥೆ ಕಾರ್ಯ ಆಗಸ್ಟ್ 04 ರಿಂದ ಅಕ್ಟೋಬರ್ 24 ರವರೆಗೆ ನಡೆಯಲಿದ್ದು, ಮತದಾರರ ಕರಡು ಪಟ್ಟಿ ನವೆಂಬರ್ 09 ರಂದು ಪ್ರಕಟವಾಗಲಿದೆ. ಆಗಸ್ಟ್ 08 ರವರೆಗೆ ಅರ್ಜಿಗಳನ್ನು ಸಲ್ಲಿಸಲು ಅವಕಾಶವಿರುತ್ತದೆ. ಹಕ್ಕು ಮತ್ತು ಆಕ್ಷೇಪಣೆಗಳ ಅರ್ಜಿಗಳನ್ನು ಡಿಸೆಂಬರ್ 26 ರ ಒಳಗೆ ವಿಲೇವಾರಿ ಮಾಡಲಾಗುವುದು, ಮತದಾರರ ಅಂತಿಮ ಪಟ್ಟಿ 2023 ರ ಜನವರಿ 05 ಕ್ಕೆ ಪ್ರಕಟಗೊಳ್ಳಲಿದೆ ಎಂದು ಹೇಳಿದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top