ದಾವಣಗೆರೆ: ಕೆಲವು ತಿಂಗಳಿಂದ ಸ್ಥಗಿತವಾಗಿದ್ದ ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿನ ಜನಸ್ಪಂದನ ಕಾರ್ಯಕ್ರಮ ಮತ್ತೆ ಆರಂಭಗೊಂಡಿದೆ. ಇನ್ಮುಂದೆ ಫೆ. 18 ರಿಂದ ಪ್ರತಿ ಗುರುವಾರ ಬೆಳಿಗ್ಗೆ 10 ಗಂಟೆಗೆ ಜನಸ್ಪಂದನ ಸಭೆ ನಡೆಯಲಿದೆ. ಈವೇಳೆ ಜಿಲ್ಲಾಧಿಕಾರಿಗಳು ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸುವರು. ಸಾರ್ವಜನಿಕರು ತಮ್ಮ ಅಹವಾಲುಗಳೊಂದಿಗೆ ಹಾಜರಾಗಿ ಜನಸ್ಪಂದನ ಸಭೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ತಿಳಿಸಿದ್ದಾರೆ.



