ದಾವಣಗೆರೆ: ಕಳಪೆ, ವೈಜ್ಞಾನಿಕ, ಭ್ರಷ್ಟಾಚಾರ ಆರೋಪ ಇದ್ದರೂ ಸಹ ಮತ್ತದೇ ವ್ಯಕ್ತಿಗೆ ಮುಂಬಡ್ತಿ ನೀಡಿ ಅದೇ ಸ್ಥಳದಲ್ಲಿ ಮುಂದುವರಿಸಿರುವುದು ಮಾತ್ರ ರಾಜ್ಯ ಸರ್ಕಾರ ಭ್ರಷ್ಟಾಚಾರಕ್ಕೆ ನೀಡುತ್ತಿರುವ ಪ್ರೋತ್ಸಾಹ ಎಂದು ಸಾರ್ವಜನಿಕರು ಪ್ರಶ್ನಿಸುವಂತಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಕೆ.ಎಲ್.ಹರೀಶ್ ಬಸಾಪುರ ಕಿಡಿಕಾರಿದ್ದಾರೆ.
ಜಿಲ್ಲಾ ಉಸ್ತುವಾರಿ ಮಾಜಿ ಸಚಿವ ಎಸ್.ಎಸ್ ಮಲ್ಲಿಕಾರ್ಜುನ್, ಹಿಂದಿನ ಮಹಾನಗರ ಪಾಲಿಕೆ ಆಡಳಿತ ಪಕ್ಷ ಹಾಗೂ ಅಧಿಕಾರಿಗಳ ಪ್ರಯತ್ನದ ಫಲವಾಗಿ ದಾವಣಗೆರೆ ನಗರ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಲು ಸಾಧ್ಯವಾಯಿತು.ಸ್ಮಾರ್ಟ್ ಸಿಟಿ ಯೋಜನೆಗೆ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ನೂರಾರು ಕೋಟಿ ಅನುದಾನವನ್ನು ಬಿಡುಗಡೆಗೊಳಿಸಿದ್ದು, ಆದರೆ ನಮ್ಮ ಸ್ಮಾರ್ಟ್ ಸಿಟಿ ಎಂ.ಡಿ ಹಾಗೂ ಇತರೆ ಅಧಿಕಾರಿಗಳು ಈ ಅನುದಾನವನ್ನು ಮನಸೋ ಇಚ್ಛೆ ದುಂದು ವೆಚ್ಚ ಮಾಡಿ ಹಣ ಖಾಲಿ ಮಾಡುತ್ತಿದೆ ಎಂಬುದಕ್ಕೆ ಈಗ ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳೆ ಸಾಕ್ಷಿ ಎಂದಿದ್ದಾರೆ.
ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಹಣ ತುಂಬಿ ತುಳುಕುತ್ತಿದ್ದು ಅದನ್ನು ಬಳಸುತ್ತಿರುವ ರೀತಿ ನೋಡಿದರೆ ಇಲ್ಲಿಯವರೆಗೂ ಯಾವುವು ಶಾಶ್ವತ ಯೋಜನೆಗಳ ರೀತಿ ಕಾಣುತ್ತಿಲ್ಲ, ಏಕೆಂದರೆ ಬೈಸಿಕಲ್ ಸ್ಟ್ಯಾಂಡ್ ನಿರ್ಮಿಸಿ ನಗರದ ವಿವಿಧ ಕಡೆ ಬೈಸಿಕಲ್ ವ್ಯವಸ್ಥೆ ಮಾಡಲಾಯಿತು, ಅದನ್ನು ವ್ಯವಸ್ಥಿತ ರೀತಿ ಮಾಡದೆ ಬೈಸಿಕಲ್ಗಳು ಬಿಸಿಲು,ಮಳೆಯಲ್ಲಿ ನೆನೆದಂತೆ ಬಂತು ವಿನಹ ಸಾರ್ವಜನಿಕರ ಅನುಕೂಲಕ್ಕೆ ನೆರವಾಗಲಿಲ್ಲ.ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಬಸ್ ಸ್ಟಾಪ್ ಗಳನ್ನು ನಿರ್ಮಿಸಲಾಗುತ್ತಿದ್ದು,ಬಸ್ ಸ್ಟಾಪ್ ಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಒಂದೊಂದು ರಸ್ತೆಗೆ ಎರಡು,ಮೂರು ಬಸ್ ಸ್ಟಾಪ್ ಗಳನ್ನು ನಿರ್ಮಿಸಿದ್ದಾರೆ, ವಿನಹ ಗುಣಮಟ್ಟ ಮತ್ತು ಬಳಕೆಯ ಬಗ್ಗೆ ಗಮನವಿಲ್ಲ, ಬಸ್ ಸ್ಟಾಪ್ ಗಳು ಪ್ರಚಾರಕ್ಕೆ ಮಾತ್ರ ಸೀಮಿತವಾಗಿದೆ ಅನ್ನಿಸದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದ ಐದಾರು ಕಡೆ ವೈಫೈ ಸೌಲಭ್ಯ ಕಲ್ಪಿಸುವ ಯೋಜನೆ ಜಾರಿಗೆ ತರಲಾಯಿತು, ಆ ವೈಫೈ ಇಂದ ಅನುಕೂಲ ಪಡೆದ ಫಲಾನುಭವಿಗಳು ಯಾರು ಎಂಬುದನ್ನು ಹಾಗೂ ಈಗ ಆ ವೈ ಫೈ ಯೋಜನೆ ಜಾರಿಯಲ್ಲಿದೆಯೇ ಎಂಬುದಕ್ಕೆ ಸ್ಮಾರ್ಟ್ ಸಿಟಿ ಎಂಡಿ ರವೀಂದ್ರ ಮಲ್ಲಾಪುರ್ ರವರೆ ಉತ್ತರ ನೀಡಬೇಕಾಗಿದೆ.ಕುಂದವಾಡ ಕೆರೆ ಅಭಿವೃದ್ಧಿ ಎಂದು ಪ್ರಾರಂಭಿಸಿದ ಸ್ಮಾರ್ಟ್ ಸಿಟಿ ಯೋಜನೆ ಅಧಿಕಾರಿಗಳು ಅತ್ತ ಕಡೆ ಹೋಗುವುದನ್ನೇ ಮರೆತಂತಿದೆ.
ಟ್ರಾಫಿಕ್ ಸಿಗ್ನಲ್ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದು, ತೀರಾ ಕಳಪೆ ಮಟ್ಟದ ಕ್ಯಾಮೆರಾಗಳು ಇವು, ಕಮಿಷನ್ ಆಸೆಗಾಗಿ ಇಂಥ ಕ್ಯಾಮೆರಾ ಮೊದಲ ಹಂತದಲ್ಲಿ ಅಳವಡಿಸಿದ್ದು, ಎರಡನೇ ಹಂತದಲ್ಲೂ ಸಹ ಇದೆ ತರಹದ ಕ್ಯಾಮರಗಳನ್ನು ಖರೀದಿಸಲು ಹೊರಟಿದ್ದ ಸ್ಮಾರ್ಟ್ ಸಿಟಿ ಅಧಿಕಾರಿಗಳ ಯೋಜನೆಗೆ ಪೊಲೀಸ್ ವರಿಷ್ಠಾಧಿಕಾರಿಗಳು ಬ್ರೇಕ್ ಹಾಕಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಗಳ ಬಗ್ಗೆ ಹೇಳುವುದೇ ಬೇಡ, ತರಾತುರಿಯಲ್ಲಿ ರಸ್ತೆ, ಫೇವರ್ ಹಾಕುತ್ತಿರುವುದನ್ನು ನೋಡಿದರೆ ಅತಿ ಬೇಗ ಬಿಲ್ ಆಗುವ ಯೋಜನೆಯೆಂದರೆ ಇವೆ ಎನಿಸುತ್ತದೆ.ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಹೊಸದಾಗಿ ಯಾವುದೇ ಯೋಜನೆಯನ್ನು ಪ್ರಾರಂಭಿಸುವಾಗ ಸಾರ್ವಜನಿಕರ ಸಹಭಾಗಿತ್ವ ದೊಂದಿಗೆ ಮಾಡಬೇಕು ಎಂದು ಆದೇಶವಿದ್ದರೂ ಅದನ್ನು ಗಾಳಿಗೆ ತೂರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಅನುಭವದ ಕೊರತೆಯಿಂದ ಸಾರ್ವಜನಿಕ ಹಣವನ್ನು ಮನಸೋಇಚ್ಛೆ ಫೋಲು ಮಾಡಲಾಗುತ್ತಿದೆ ಎಂದಿದ್ದಾರೆ.