ದಾವಣಗೆರೆ: ಸಂವಿಧಾನ ದಿನವನ್ನು ನ. 26 ರಂದು ಬೆಳಿಗ್ಗೆ 11 ಗಂಟೆಗೆ ಅರ್ಥಪೂರ್ಣವಾಗಿ ಆಚರಿಸುವಂತೆ ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್ ತಿಳಿಸಿದ್ದಾರೆ.
ಈ ಇಂಡಿಯಾ ದಿ ಮದರ್ ಆಫ್ ಡೆಮಾಕ್ರಟಿಸ್ (ಭಾರತ ಪ್ರಜಾಪ್ರಭುತ್ವದ ತಾಯಿ ) ಎಂಬ ವಿಷಯದ ವಾಕ್ಯದೊಂದಿಗೆ ಆಚರಿಸಲು ತಿಳಿಸಲಾಗಿದೆ. ಈ ಸಂದರ್ಭದಲ್ಲಿ ಎಲ್ಲರಿಗೂ ನಮ್ಮ ಸಂವಿಧಾನ ಮೌಲ್ಯಗಳನ್ನು ಬಿತ್ತರಿಸುವುದು. ಈ ರಾಷ್ಟ್ರೀಯ ಆಚರಣೆಯಲ್ಲಿ ಹೆಚ್ಚಿನ ಜನರು ಭಾಗವಹಿಸಬೇಕು. ಸಾಮೂಹಿಕವಾಗಿ ಓದುವುದರ ಮೂಲಕ ಮತ್ತು ಸಂವಿಧಾನ ಮೌಲ್ಯಗಳನ್ನು/ಮೂಲ ಆಶಯಗಳ ಬಗ್ಗೆ ಚರ್ಚೆ/ರಸ ಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



