ದಾವಣಗೆರೆ: ಕಾರ್ಮಿಕರ ಭವಿಷ್ಯನಿಧಿ ಸಂಸ್ಥೆ ಕಛೇರಿಯು ಡಿಜಿಟಲ್ ಲೈಫ್ ಪ್ರಮಾಣ ಪತ್ರ ಸ್ವೀಕರಿಸುವ ತಂತ್ರಜ್ಞಾನ ಅಳವಡಿಸಲಾಗಿದೆ. ಲೈಫ್ ಪ್ರಮಾಣ ಪತ್ರ ಅಗತ್ಯವಿರುವ ಪಿಂಚಣಿದಾರರು ಮನೆಯಲ್ಲಿಯೇ ಕುಳಿತು ತಮ್ಮ ಆಂಡ್ರಾಯ್ಡ್ ಮೊಬೈಲ್ ಫೋನ್ನಿಂದ ಡಿಜಿಟಲ್ ಲೈಫ್ ಸರ್ಟಿಫಿಕೇಟನ್ನು ಫೇಸ್ ಅಥೆಂಟಿಕೇಶನ್ ಟೆಕ್ನಾಲಜಿ (ಎಫ್.ಎ.ಟಿ) ಮೂಲಕ ಸಲ್ಲಿಸಬಹುದಾಗಿದೆ.
ಈ ತಂತ್ರಜ್ಞಾನವು, ಹೆಬ್ಬೆಟ್ಟಿನ ಗುರುತು ಮತ್ತು ಅಕ್ಷಿಪಟಲದ ಮೂಲಕ ಡಿ.ಎಲ್.ಸಿ ಸಲ್ಲಿಸಲು ಸಾಧ್ಯವಾಗದೇ ಇರುವಂತಹ, ಆರೋಗ್ಯ ಸಮಸ್ಯೆಯಿಂದ ಹಾಸಿಗೆ ಹಿಡಿದಿರುವಂತಹ ಮತ್ತು ವಿದೇಶದಲ್ಲಿ ನೆಲೆಸಿರುವಂತಹ ಪಿಂಚಣಿದಾರರಿಗೆ ಅನುಕೂಲವಾಗಲಿದೆ.
ಕ್ಲೈಂಟ್ ಇನ್ಸ್ಟಲೇಷನ್ ಮತ್ತು ಅಂಡ್ರಾಯ್ಡ್ ಫೇಸ್ ಅಪ್ಲಿಕೇಷನ್ಗಾಗಿ ಆಸಕ್ತರು http://jeevanpramaan.gov.in/package/download ಮಾಡಿಕೊಂಡು ಪ್ರಮಾಣಪತ್ರ ಪಡೆಯಲು ಪ್ರಕಟಣೆ ತಿಳಿಸಿದೆ.



