ದಾವಣಗೆರೆ: ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮದ ವತಿಯಿಂದ ಭೂ ಒಡೆತನ ಯೋಜನೆಯಡಿ ಆಕ್ಷೇಪಣೆ ಸಲ್ಲಿಸಲು ತಿಳಿಸಲಾಗಿದೆ. ದಾವಣಗೆರೆ ತಾಲ್ಲೂಕು ಗುಡಾಳು ಸರ್ವೆ ನಂ 217/2 ರಲ್ಲಿ 2 ಎಕರೆ ಜಮೀನು, ಗುಮ್ಮನೂರು ಗ್ರಾಮದ ಸರ್ವೇ ನಂ 92/1 ರಲ್ಲಿ 6 ಎಕರೆ ಜಮೀನು, ಚನ್ನಗಿರಿ ತಾಲ್ಲೂಕಿನ ಹೊದಿಗೆರೆ ಗ್ರಾಮದ ಸರ್ವೆ ನಂ 30/1ರಲ್ಲಿ 3 ಎಕರೆ ಜಮೀನು, ಜಗಳೂರು ತಾಲ್ಲೂಕಿನ ಬಿಸ್ತುವಳ್ಳಿ ಗ್ರಾಮದ ಸರ್ವೆ ನಂ 17/1 ರಲ್ಲಿ 2 ಎಕರೆ ಜಮೀನು, ಭರಮಸಮುದ್ರ ಗ್ರಾಮದ ಸರ್ವೆ ನಂ 38/2 ರಲ್ಲಿ 5.36 ಎಕರೆ ಜಮೀನುಗಳನ್ನು ಖರೀದಿಸಲು ಪ್ರಸ್ತಾವನೆ ಸ್ವೀಕರಿಸಲಾಗಿದೆ.
ಜಮೀನಿಗೆ ಸಂಬಂಧಿಸಿದ ಏನಾದರೂ ಆಕ್ಷೇಪಣೆಗಳಿದ್ದಲ್ಲಿ ಪ್ರಕಟವಾದ 7 ದಿನಗಳ ಒಳಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ದಿ ನಿಗಮ, ಕುರುಬರ ಹಾಸ್ಟೆಲ್, ಹದಡಿ ರಸ್ತೆ ದಾವಣಗೆರೆ ಇವರಿಗೆ ಆಕ್ಷೇಪಣೆ ಸಲ್ಲಿಸಲು ಸೂಚಿಸಿದೆ. ಹಾಗೂ ಹೆಚ್ಚಿನ ಮಾಹಿತಿಗಾಗಿ ದೂ.ಸಂ: 08192-233309 ನ್ನು ಸಂಪರ್ಕಿಸಬಹುದೆಂದು ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆ ತಿಳಿಸಿದ್ದಾರೆ.



