Connect with us

Dvgsuddi Kannada | online news portal | Kannada news online

ದಾವಣಗೆರೆ: ಮತದಾರ ಪಟ್ಟಿಗೆ ಸೇರ್ಪಡೆ, ತಿದ್ದುಪಡಿ, ವರ್ಗಾವಣೆಗೆ ಆನ್‍ಲೈನ್ ನಲ್ಲಿ ಅವಕಾಶ

voter id

ದಾವಣಗೆರೆ

ದಾವಣಗೆರೆ: ಮತದಾರ ಪಟ್ಟಿಗೆ ಸೇರ್ಪಡೆ, ತಿದ್ದುಪಡಿ, ವರ್ಗಾವಣೆಗೆ ಆನ್‍ಲೈನ್ ನಲ್ಲಿ ಅವಕಾಶ

ದಾವಣಗೆರೆ: ಜಿಲ್ಲೆಯಾದ್ಯಂತ ಎಲ್ಲ ಮತಗಟ್ಟೆಗಳಲ್ಲಿ ನವೆಂಬರ್ 9 ರಂದು ಕರಡು ಮತದಾರರ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಪ್ರಕಟಿಸಲಾಗಿದೆ. ದೋಷರಹಿತ ಮತದಾರರ ಪಟ್ಟಿ ತಯಾರಿಸಲು ಸಹಕರಿಸುವಂತೆ ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ ಪಿ.ಎನ್.ಲೋಕೇಶ ಅವರು ತಿಳಿಸಿದ್ದಾರೆ.

ಮತದಾರರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಿಂದ ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ.

ವಿಧಾನಸಭಾ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2023 ಅರ್ಹತಾ ದಿನಾಂಕ 01-01-2023ಕ್ಕೆ ಸಂಬಂಧಿಸಿದಂತೆ ದಿನಾಂಕ 09-11-2022ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಈ ಕರಡು ಮತದಾರರ ಪಟ್ಟಿಗಳಲ್ಲಿ ಸಾರ್ವಜನಿಕರು ತಮ್ಮ ಹೆಸರು ಪ್ರಕಟವಾದ ಬಗ್ಗೆ ಪರಿಶೀಲಿಸಿಕೊಳ್ಳಬೇಕು.

1 ಜನವರಿ 2023ಕ್ಕೆ 18 ವರ್ಷ ಪೂರ್ಣಗೊಳ್ಳುವವರು ಅರ್ಹತಾ ದಿನಾಂಕಕ್ಕೆ ಸಂಬಂಧಿಸಿದಂತೆ ಯುವಕರು-ಯುವತಿಯರು ಮತ್ತು ಸಾರ್ವಜನಿಕರು ಹೊಸದಾಗಿ ಹೆಸರು ಸೇರ್ಪಡೆಗಾಗಿ ನಮೂನೆ-6ರಲ್ಲಿ ಸಲ್ಲಿಸಬೇಕು. ದಿನಾಂಕ 09-11-2022 ರಿಂದ 08-12-2022ರ ವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಲು ಕಾಲಾವಕಾಶ ನೀಡಲಾಗಿದೆ.

ನವೆಂಬರ್ 12, 20, ಡಿ.3 ಹಾಗೂ 4 ರಂದು ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅವಧಿಯಲ್ಲಿ ಸ್ವೀಕರಿಸಿದ ಹಕ್ಕು ಮತ್ತು ಆಕ್ಷೇಪಣೆಯ ಅರ್ಜಿಗಳನ್ನು ನಿಯಮಾನುಸಾರ ಪರಿಶೀಲಿಸಿ ದಿನಾಂಕ 26-12-2022ರೊಳಗಾಗಿ ಕಾಲೋಚಿತಗೊಳಿಸಲಾಗುವುದು. ನಂತರ ಪುರವಣಿ ಪಟ್ಟಿಯನ್ನು ದಿನಾಂಕ 03-01-2023ರಂದು ತಯಾರಿಸಿ ಅಂತಿಮ ಮತದಾರರ ಪಟ್ಟಿಯನ್ನು ದಿನಾಂಕ 05-01-2023ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದ್ದಾರೆ.

ಮತದಾರ ಪಟ್ಟಿಗೆ ಸೇರ್ಪಡೆ, ತಿದ್ದುಪಡಿ, ವರ್ಗಾವಣೆ ಇತರೆ ಸೌಲಭ್ಯಕ್ಕೆ ಆನ್‍ಲೈನ್ (www.nvsp.in) Voter helpline app ಮೂಲಕ ಹಾಗೂ
ceo.karnataka.gov.in ನಲ್ಲಿ ಅನ್ ಲೈನ್ ನಲ್ಲಿ ಅರ್ಜಿಸಬಹುದು. ವಿದೇಶಗಳಲ್ಲಿ ಉದ್ಯೋಗ, ಶಿಕ್ಷಣ ನಿಮಿತ್ತ ನೆಲೆಸಿರುವ ಭಾರತೀಯ ಪ್ರಜೆಗಳಿಗೆ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ನಮೂನೆ-6ಎರಲ್ಲಿ ಅರ್ಜಿಯನ್ನು ಅಗತ್ಯ ದಾಖಲೆಯೊಂದಿಗೆ ಸಂಬಂಧಿಸಿದ ಮತದಾರರ ನೋಂದಾಧಿಕಾರಿಗಳಿಗೆ ಅಂಚೆ ಅಥವಾ ಆನ್‍ಲೈನ್ ಮೂಲಕ ಸಲ್ಲಿಸಿ ಹೆಸರು ನೋಂದಾಯಿಸಿಕೊಳ್ಳಬಹುದು.
ರಾಜಕೀಯ ಪಕ್ಷಗಳು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ರೀತಿಯಲ್ಲಿ ಪಾಲ್ಗೊಂಡು ಮತದಾರರ ನೋಂದಣಿ ಹೆಚ್ಚಿಸುವ ನಿಟ್ಟಿನಲ್ಲಿ ಹಾಗೂ ದೋಷರಹಿತ ಮತದಾರರ ಪಟ್ಟಿ ತಯಾರಿಸಲು ಸಹಕರಿಸುವಂತೆ ಕೋರಿದ್ಧಾರೆ.

ಮತಗಟ್ಟೆ ವಿವರ:
103-ಜಗಳೂರು ಕ್ಷೇತ್ರದಲ್ಲಿ 262, 105-ಹರಿಹರ ಕ್ಷೇತ್ರದಲ್ಲಿ 228, 106-ದಾವಣಗೆರೆ ಉತ್ತರ ಕ್ಷೇತ್ರದಲ್ಲಿ 242, 107-ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 212, 108-ಮಾಯಕೊಂಡ ಕ್ಷೇತ್ರದಲ್ಲಿ 240, 109 ಚನ್ನಗಿರಿ ಕ್ಷೇತ್ರದಲ್ಲಿ 254 ಹಾಗೂ 110-ಹೊನ್ನಾಳಿ ಕ್ಷೇತ್ರದಲ್ಲಿ 245 ಮತಗಟ್ಟೆ ಸೇರಿ 1,683 ಮತಗಟ್ಟೆಗಳಿದ್ದು, 1,683 ಮತಗಟ್ಟೆ ಅಧಿಕಾರಿಗಳು ಹಾಗೂ 166 ಮೇಲ್ವಿಚಾಕರನ್ನು ನೇಮಕ ಮಾಡಲಾಗಿದೆ.
ಅಧಿಕಾರಿಗಳ ನೇಮಕ: ಮತದಾರರ ನೋಂದಣಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಾಣಿಕಗಳನ್ನು ನೇಮಕ ಮಾಡಲಾಗಿದ್ದು, ಜಗಳೂರು ಹಾಗೂ ಹರಿಹರ ಕ್ಷೇತ್ರಕ್ಕೆ ಮತದಾರರ ನೋಂದಣಾಧಿಕಾರಿಯಾಗಿ ದಾವಣಗೆರೆ ಉಪವಿಭಾಗಾಧಿಕಾರಿ, ಸಹಾಯಕ ಮತದಾರರ ನೋಂದಣಾಧಿಕಾರಿಗಳಾಗಿ ಜಗಳೂರು ತಹಶೀಲ್ದಾರ(08196-227242) ಹಾಗೂ ಹರಿಹರ ಕ್ಷೇತ್ರಕ್ಕೆ ಹರಿಹರ ತಹಶೀಲ್ದಾರ(08192-242777) ಅವರನ್ನು ನೇಮಕ ಮಾಡಲಾಗಿದೆ.

ದಾವಣಗೆರೆ ಉತ್ತರ ಹಾಗೂ ದಕ್ಷಿಣ ಕ್ಷೇತ್ರಕ್ಕೆ ಮತದಾರರ ನೋಂದಣಾಧಿಕಾರಿಯಾಗಿ ದಾವಣಗೆರೆ ಮಹಾನಗರ ಪಾಲಿಕೆ ಉಪ ಆಯುಕ್ತರನ್ನು ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಯಾಗಿ ದಾವಣಗೆರೆ ಉತ್ತರಕ್ಕೆ ಮಹಾನಗರ ಪಾಲಿಕೆ ಕಂದಾಯ ಅಧಿಕಾರಿ(08192-236566) ಮತ್ತು ದಕ್ಷಿಣ ಕ್ಷೇತ್ರಕ್ಕೆ ಮಹಾನಗರಪಾಲಿಕೆ ಪರಿಷತ್ ಕಾರ್ಯದರ್ಶಿ (08192-236566) ಅವರನ್ನು ನೇಮಕ ಮಾಡಲಾಗಿದೆ.
ಮಾಯಕೊಂಡ, ಚನ್ನಗಿರಿ ಹಾಗೂ ಹೊನ್ನಾಳಿ ಕ್ಷೇತ್ರಕ್ಕೆ ಮತದಾರರ ನೋಂದಣಾಧಿಕಾರಿಯಾಗಿ ದಾವಣಗೆರೆ ಉಪವಿಭಾಗಾಧಿಕಾರಿ ಹಾಗೂ ಸಹಾಯಕ ಮತದಾರರ ನೋಂದಣಾಧಿಕಾರಿಯಾಗಿ ಮಾಯಕೊಂಡಕ್ಕೆ ದಾವಣಗೆರೆ ತಹಶೀಲ್ದಾರ(08192-235344) ಚನ್ನಗಿರಿಗೆ ಚನ್ನಗಿರಿ ತಹಶೀಲ್ದಾರ(08189-228025) ಹಾಗೂ ಹೊನ್ನಾಳಿಗೆ ಹೊನ್ನಾಳಿ ತಹಶೀಲ್ದಾರ (08188-251025) ಅವರನ್ನು ನೇಮಕ ಮಾಡಲಾಗಿದೆ.
ಮತದಾರರ ವಿವರ: ಜಿಲ್ಲೆಯಲ್ಲಿ 6,97,358 ಪುರುಷ, 9,90,960 ಮಹಿಳಾ ಹಾಗೂ 116 ಇತರರು ಸೇರಿ 13,88,434 ಮತದಾರರಿದ್ದಾರೆ.

103-ಜಗಳೂರು ಕ್ಷೇತ್ರದಲ್ಲಿ 95,413 ಪುರುಷ, 92,706 ಮಹಿಳಾ ಹಾಗೂ 9 ಇತರರು ಸೇರಿ 1,88,128 ಮತದಾರರು, 105-ಹರಿಹರ ಕ್ಷೇತ್ರದಲ್ಲಿ 99,963 ಪುರುಷ, 99,663 ಮಹಿಳಾ ಹಾಗೂ 16ಇತರರು ಸೇರಿ 1,99,642 ಮತದಾರರು, 228, 106-ದಾವಣಗೆರೆ ಉತ್ತರ ಕ್ಷೇತ್ರದಲ್ಲ್ಲಿ 1,14,100 ಪುರುಷ, 1,15,496 ಮಹಿಳಾ ಹಾಗೂ 38 ಇತರರು ಸೇರಿ 2,29,634 ಮತದಾರರು, 107-ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ 99,105 ಪುರುಷ, 99,628 ಮಹಿಳಾ ಹಾಗೂ 34 ಇತರರು ಸೇರಿ 1,98,767 ಮತದಾರರು, 108-ಮಾಯಕೊಂಡ ಕ್ಷೇತ್ರದಲ್ಲ್ಲಿ 93,605 ಪುರುಷ, 91,337 ಮಹಿಳಾ ಹಾಗೂ 7 ಇತರರು ಸೇರಿ 1,84,949 ಮತದಾರರು, 109 ಚನ್ನಗಿರಿ ಕ್ಷೇತ್ರದಲ್ಲಿ 98,033 ಪುರುಷ, 96202 ಮಹಿಳಾ ಹಾಗೂ 10 ಇತರರು ಸೇರಿ 1,94,245 ಮತದಾರರು ಹಾಗೂ 110-ಹೊನ್ನಾಳಿ ಕ್ಷೇತ್ರದಲ್ಲಿ 97,139 ಪುರುಷ, 95,928 ಮಹಿಳಾ ಹಾಗೂ ಇಬ್ಬರು ಇತರರು ಸೇರಿ 1,93,069 ಮತದಾರಿದ್ದಾರೆ.
ಜಿಲ್ಲೆಯ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆ, ತಿದ್ದುಪಡಿ ಹಾಗೂ ತೆಗೆದುಹಾಕುವ ಬಗ್ಗೆ ಯಾವುದೇ ಮಾಹಿತಿಗಾಗಿ ಸಹಾಯವಾಣಿ ಸಂಖ್ಯೆ 19502 ಅಥವಾ 08192-272953 ಸಂಪರ್ಕಿಸಬಹುದು.

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top