ದಾವಣಗೆರೆ: ಜಿಲ್ಲಾ ಅಮೆಚೂರ್ ಕಬ್ಬಡ್ಡಿ ಸಂಸ್ಥೆ(ರಿ) ಶ್ರೀ ಮೈಲಾರಲಿಂಗೇಶ್ವರ ಕ್ರೀಡಾ ಸಮಿತಿ (ರಿ), ನ್ಯೂ ಇಂಡಿಯಾ ಪ್ರೆಂಡ್ಸ್ ಗ್ರೂಪ್ ವತಿಯಿಂದ ಪ್ರಥಮ ಬಾರಿಗೆ ಪುರುಷರ ಅಂತರ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾವಳಿಯನ್ನು ಜ. 16 ಮತ್ತು 17 ರಂದು ಬೆಳಗ್ಗೆ 9 ಗಂಟೆಗೆ ಹೆಚ್.ಕೆ.ಆರ್ ನಗರದಲ್ಲಿ ಆಯೋಜಿಸಲಾಗಿದೆ. ತಂಡಗಳು ಸರಿಯಾದ ಸಮಯಕ್ಕೆ ಬಂದು ನೊಂದಾಯಿಸಿ ಕೊಳ್ಳಲು ಕಡ್ಡಾಯವಾಗಿರುತ್ತದೆ. ಪ್ರಥಮ ಬಹುಮಾನ:15000, ದ್ವಿತೀಯ ಬಹುಮಾನ 10000, ತೃತೀಯ ಬಹುಮಾನ:5000 ಹಾಗೂ ಚತುರ್ಥ ಬಹುಮಾನ:5000 ಮತ್ತು ಉತ್ತಮ ದಾಳಿಗಾರ, ಉತ್ತಮಹಿಡಿತಗಾರ, ಸರ್ವೊತ್ತಮ ಆಟಗಾರರಿಗೆ ಆಕರ್ಷಕ ಟ್ರೋಫಿ ಇರುತ್ತದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ರುದ್ರೇಶ್: 9632825045 ಹಾಗೂ ಮಂಜುನಾಥ:7892662171 ಇವರನ್ನು ಸಂಪರ್ಕಿಸಬಹುದು.



