Connect with us

Dvgsuddi Kannada | online news portal | Kannada news online

ದಾವಣಗೆರೆ: ಮಹಿಳೆಯರಿಗೆ 10 ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ

ದಾವಣಗೆರೆ

ದಾವಣಗೆರೆ: ಮಹಿಳೆಯರಿಗೆ 10 ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ

ದಾವಣಗೆರೆ: ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಉದ್ಯಮಶೀಲತಾಭಿವೃದ್ಧಿ ಕೆಂದ್ರ (ಸಿಡಾಕ್) ಧಾರವಾಡ, ಶಶಿ ಬ್ಯೂಟಿಪಾರ್ಲರ್ ಮತ್ತು ತರಬೇತಿ ಕೇಂದ್ರ ದಾವಣಗೆರೆ ಇವರ ಸಂಯುಕ್ತಾಶ್ರಯದಲ್ಲಿ ಗಿರಿಜನ ಉಪಯೋಜನೆಯಡಿ 10 ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಅಕ್ಟೋಬರ್ 19 ರಂದು ಬೆಳಿಗ್ಗೆ 11.30 ಗಂಟೆಗೆ ನಗರದ ಶಶಿ ಬ್ಯೂಟಿ ಪಾರ್ಲರ್ ಮತ್ತು ತರಬೇತಿ ಕೇಂದ್ರದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನು ಸಿಡಾಕ್ ಜಿಂಟಿ ನಿರ್ದೇಶಕರಾದ ಆರ್.ಪಿ ಪಾಟೀಲ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಲೀಡ್ ಬ್ಯಾಂಕ್‍ನ ಜಿಲ್ಲಾ ವಿಭಾಗೀಯ ಮಾರ್ಗದರ್ಶಿ ವ್ಯವಸ್ಥಾಪಕರಾದ ಜಿ.ಜಿ ದೊಡ್ಡಮನಿ ಭಾಗವಹಿಸುವರು. ಶಶಿ ಬ್ಯೂಟಿ ಪಾರ್ಲರ್ ಮತ್ತು ತರಬೇತಿ ಕೇಂದ್ರದ ಮಾಲೀಕರಾದ ಪದ್ಮಜರಾವ್ ಉಪಸ್ಥಿತರಿರುವರು. ಸಂಪನ್ಮೂಲ ವ್ಯಕ್ತಿಯಾಗಿ ಎಫ್.ವಿ.ಟಿ.ಆರ್.ಎಸ್ ಜಿಲ್ಲಾ ಉಸ್ತುವಾರಿ ಅಧಿಕಾರಿ ಕೃಷ್ಣ ಎಲ್ ಭಾಗವಹಿಸುವರು. ಸಿಡಾಕ್ ತರಬೇತುದಾರರಾದ ವಿನಯ ಜಿ.ಕೆ, ಬಸವರಾಜ ಜಿ.ಬಿ ಪಾಲ್ಗೊಳ್ಳುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top