Connect with us

Dvgsuddi Kannada | online news portal | Kannada news online

ಮುರಿದು ಬಿದ್ದ ಭದ್ರಾ ನಾಲೆ ತೊಟ್ಟಿಲು; ಕೂಡಲೇ ಸರಿ ಪಡಿಸದಿದ್ರೆ ದಾವಣಗೆರೆ ಭಾಗದ ಭತ್ತ ಬೆಳೆಗಾರರಿಗೆ ಸಂಕಷ್ಟ..!

ದಾವಣಗೆರೆ

ಮುರಿದು ಬಿದ್ದ ಭದ್ರಾ ನಾಲೆ ತೊಟ್ಟಿಲು; ಕೂಡಲೇ ಸರಿ ಪಡಿಸದಿದ್ರೆ ದಾವಣಗೆರೆ ಭಾಗದ ಭತ್ತ ಬೆಳೆಗಾರರಿಗೆ ಸಂಕಷ್ಟ..!

ದಾವಣಗೆರೆ: ಭಾರೀ ಮಳೆಗೆ ಭದ್ರಾ ಜಲಾಶಯದಿಂದ ದಾವಣಗೆರೆಗೆ ಭಾಗದ ರೈತರ ಜಮೀನುಗಳಿಗೆ ನೀರು ಪೂರೈಸುವ ನಾಲೆಯ  ತೊಟ್ಟಿಲು ನಲ್ಕುಂದ ಗ್ರಾಮದಲ್ಲಿ ಮುರಿದು ಬಿದ್ದಿದೆ. ಇದರಿಂದ ಅಪಾರ ಪ್ರಮಾಣ ನೀರು ನಲ್ಕುಂದ-ಶ್ಯಾಗಲೆ ಹಳ್ಳಕ್ಕೆ ಹರಿದು ಹೋಗುತ್ತಿದೆ. ಈ ತೊಟ್ಟಿಲು ಕೂಡಲೇ ಸರಿಪಡಿಸದಿದ್ರೆ ದಾವಣಗೆರೆ ಭಾಗದ ಭತ್ತ ಬೆಳೆಗಾರರಿಗೆ ಸಮಯಕ್ಕೆ ಸರಿಯಾಗಿ ನೀರಿಲ್ಲದಂತಾಗುವ ಆತಂಕ ಉಂಟಾಗಿದೆ.

ಬಾಡಾದಿಂದ ನಲ್ಕುಂದ ವರೆಗೆ 7 ಕಿಲೋಮೀಟರ್‌ ನಿರ್ಮಿಸಿರುವ ಈ ತೊಟ್ಟಿಲು ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಕುಸಿದು ಬಿದ್ದಿದೆ. ಇದರಿಂದ ಅಪಾರ ಪ್ರಮಾಣದ ನೀರು ಸೋರಿಕೆ ಆಗುತ್ತಿದೆ. ಈ ನೀರು ಹಳ್ಳಕ್ಕೆ ಹರಿಯುತ್ತಿದ್ದು, ಹಳ್ಳ ಉಕ್ಕಿ ಹರಿಯುತ್ತಿರುವುದರಿಂದ ಶ್ಯಾಗಲೆ ಸಂಪರ್ಕ ಕಡಿತಗೊಂಡಿದೆ. ಈ ಕಾಲುವೆಯಿಂದ ದಾವವಣಗೆರೆ ಭಾಗಕ್ಕೆ ಪೂರೈಕೆ ಆಗುವ ನೀರಿನಲ್ಲಿ ವ್ಯತ್ಯ ಉಂಟಾಗಿದ್ದು, ಮುರಿದು ಬಿದ್ದ ತೊಟ್ಟಿಲು ಕೂಡಲೇ ಸರಿಪಡಿಸದಿದ್ದರೆ ಈ ಬಾರಿಯ ಭತ್ತದ ಬೆಳೆಗೆ ಸಮಯಕ್ಕೆ ಸರಿಯಾಗಿ ನೀರು ಪೂರೈಕೆ ಆಗದಿರುವ ಸಂಕಷ್ಟ ರೈತರಲ್ಲಿ ಮೂಡಿದೆ. ನಾಳೆ ಕಾಡಾ ಅಧ್ಯಕ್ಷೆ ಪವಿತ್ರಾ ರಾಮಯ್ಯ ಅವರು ಸ್ಥಳಕ್ಕೆ ಭೇಟಿ ನೀಡಲಿದ್ದು, ತಕ್ಷಣ ಏನು ಕ್ರಮ ಕೈಗೊಳ್ಳುತ್ತಾರೋ ಕಾಯ್ದು ನೋಡಬೇಕಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top