Connect with us

Dvgsuddi Kannada | online news portal | Kannada news online

ದಾವಣಗೆರೆ: ಜಿಲ್ಲಾ ಮಟ್ಟದ ಯುವ ಉತ್ಸವ

ದಾವಣಗೆರೆ

ದಾವಣಗೆರೆ: ಜಿಲ್ಲಾ ಮಟ್ಟದ ಯುವ ಉತ್ಸವ

ದಾವಣಗೆರೆ: ಭಾರತ ಸರ್ಕಾರದ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ದಾವಣಗೆರೆ ನೆಹರು ಯುವ ಕೇಂದ್ರದಿಂದ ಜಿಲ್ಲಾ ಮಟ್ಟದ ಯುವ ಉತ್ಸವ-2022-23 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪೇಂಟಿಂಗ್ ಸ್ಪರ್ಧೆ, ಕವನ ಬರವಣಿಗೆ ಸ್ಪರ್ಧೆ, ಮೊಬೈಲ್ ಫೋಟೋಗ್ರಾಫಿ ಸ್ಪರ್ಧೆ, ಸಾಂಸ್ಕೃತಿಕ ಜಾನಪದ ಮತ್ತು ಸಾಂಪ್ರದಾಯಕ ನೃತ್ಯ ಸ್ಪರ್ಧೆ, ಭಾಷಣ ಸ್ಪರ್ಧೆ, ಯುವ ಸಂವಾದ ಈ ಎಲ್ಲಾ ಸ್ಪರ್ಧೆಗಳಲ್ಲಿ ಯಾವುದಾರೂ ಒಂದರಲ್ಲಿ ಮಾತ್ರ 15 ರಿಂದ 29 ರ ವಯಸ್ಸಿನ ವಯೋಮಾದವರು ಭಾಗವಹಿಸಬಹುದು.

ಪೇಂಟಿಂಗ್ ಸ್ಪರ್ಧೆ ಮತ್ತು ಮೊಬೈಲ್ ಫೋಟೋಗ್ರಾಫಿ ಸ್ಪರ್ಧೆ ಹಾಗೂ ಕವನಗಳ ಬರವಣಿಗೆ ಈ ಮೂರು ಸ್ಪರ್ಧೆಯಲ್ಲಿ ಪೇಂಟಿಂಗ್‍ದಲ್ಲಿ 3 ಜನ, ಮೊಬೈಲ್ ಫೆÇೀಟೋಗ್ರಾಫಿಯಲ್ಲಿ 3 ಜನ, ಕವನಗಳ ಬರವಣಿಗೆ 3 ಜನ, ವಿಜೇತರನ್ನ ಆಯ್ಕೆ ಮಾಡಲಾಗುತ್ತದೆ. ವಿಜೇತರಾದವರಿಗೆ ಮೊದಲನೇ ಬಹುಮಾನ ರೂ.1000. ಎರಡನೇ ಬಹುಮಾನ ರೂ. 750. ಮೂರನೇ ಬಹುಮಾನ ರೂ.500. ಇದರಲ್ಲಿ 1 ಮತ್ತು 2 ವಿಜೇತರಾದವರು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಸಾಂಸ್ಕೃತಿಕ ಜಾನಪದ ಮತ್ತು ಸಾಂಪ್ರದಾಯಕ ಗುಂಪು ನೃತ್ಯ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಮೊದಲನೇ ಬಹುಮಾನ ರೂ.5000. ಎರಡನೇ ಬಹುಮಾನ 2000 ರೂ. ಮೂರನೇ ಬಹುಮಾನ 1000 ರೂ. ಇದ್ದು, 1ನೇ ಬಹುಮಾನ ವಿಜೇತರು ರಾಜ್ಯ ಮಟ್ಟಕ್ಕೆ ಆಯ್ಕೆ ಮಾಡಲಾಗುತ್ತದೆ. ಭಾಷಣ ಸ್ಪರ್ಧೆಯಲ್ಲಿ ವಿಜೇತರಾದವರಿಗೆ |ನೇ ಬಹುಮಾನ ರೂ.5000/- 2ನೇ ಬಹುಮಾನ ರೂ.2000/-, 3ನೇ ಬಹುಮಾನ ರೂ.1000/- ಇದ್ದು, ಮೊದಲನೇ ಬಹುಮಾನ ವಿಜೇತರು ರಾಜ್ಯ ಮಟ್ಟದ ಸ್ಪರ್ಧೆಗೆ ಭಾಗವಹಿಸುತ್ತಾರೆ.

ಕಳೆದ ನಾಲ್ಕು ವರ್ಷಗಳಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದವರು ಅರ್ಹರಲ್ಲ. ಸ್ಪರ್ಧೆಯಲ್ಲಿ 3 ಜನರಿಗೆ ಪ್ರತಿಯೊಬ್ಬರಿಗೂ ತಲಾ ರೂ.1500/- ಬಹುಮಾನವಾಗಿ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ನೊಂದಣಿ ಮಾಡಲು ನೆಹರು ಯುವ ಕೇಂದ್ರ ಕಾರ್ಯಾಲಯ, ಜಿಲ್ಲಾಧಿಕಾರಿಗಳ ಕಾರ್ಯಾಲಯ ರೂಂ ನಂ.12, ದಾವಣಗೆರೆ ಹಾಗೂಮೊ.ಸಂ: 9901863789ಯನ್ನು ಸಂಪರ್ಕಿಸಬಹುದು ಎಂದು ದಾವಣಗೆ ನರಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top