ದಾವಣಗೆರೆ; ಕುಂದವಾಡ ಕೆರೆಯ ಪ್ರವೇಶ ದ್ವಾರದ ಬಳಿ ಸ್ಥಾಪಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆ ಇಲ್ಲದೆ ತುಕ್ಕು ಹಿಡಿಯುತ್ತಿದೆ.
ಶುದ್ಧ ಕುಡಿಯುವ ನೀರಿನ ಘಟಕವಿಲ್ಲದ ಬಾಲಾಜಿ ನಗರ ಅಥವಾ ಬಸವೇಶ್ವರ ನಗರ ಅಥವಾ ರಿಂಗ್ ರಸ್ತೆ ಬಳಿ ಸ್ಥಾಪಿಸಿದ್ದರೆ ಸುಥತಮುತ್ತಲಿನ ನಿವಾಸಿಗಳಿಗೆ ಅನುಕೂಲವಾಗುತ್ತಿತ್ತು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಕುಂದವಾಡ ಕೆರೆ ಪ್ರವೇಶ ದ್ವಾರದ ಬಳಿ ಸ್ಥಾಪಿಸಿರುವ ನೀರಿನ ಘಟಕ ಸೂಕ್ತವಾಗಿ ನಿರ್ವಹಣೆ ಇಲ್ಲದೇ ಹಾಳಾಗುತ್ತಿದೆ. ಹೀಗಾಗಿ ಸಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳ ಪರೀಶಿಲನೆ ಮಾಡಿ, ಸ್ಥಳಾಂತರ ಮಾಡಿ ಜನರಿಗೆ ಉಪಯೋಗವಾಗುವಂತೆ ಕ್ರಮ ವಹಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಎಂ ಜಿ ಶ್ರೀಕಾಂತ್ ಆಗ್ರಹಿಸಿದ್ದಾರೆ.



