ದಾವಣಗೆರೆ: ಅಪಘಾತ ಪರಿಹಾರ ನೀಡದ ಹಿನ್ನೆಲೆ ನ್ಯಾಯಾಲಯದ ಆದೇಶದ ಮೇರೆಗೆ ಎರಡು ಸರ್ಕಾರಿ ಬಸ್ಗಳನ್ನ ಜಪ್ತಿ ಮಾಡಲಾಗಿದೆ.
ದಾವಣಗೆರೆ ಬಸ್ ನಿಲ್ದಾಣದಲ್ಲಿ 2 ಕೆಎಸ್ಆರ್ಟಿಸಿ ಬಸ್ಗಳನ್ನು ಇಂದು ಜಪ್ತಿ ಮಾಡಲಾಗಿದೆ. 2009ರ ಆಗಸ್ಟ್ 8ರಂದು ಕೆಎಸ್ಆರ್ಟಿಸಿ ಬಸ್ ಅಪಘಾತವಾಗಿತ್ತು. ಸುದೀಪ್ ಎಂಬುವವರು ಅಪಘಾತದಲ್ಲಿ ಕಾಲು ಕಳೆದುಕೊಂಡಿದ್ದರು. ಕಾಲು ಕಳೆದುಕೊಂಡಿದ್ದ ಸುದೀಪ್ಗೆ ಪರಿಹಾರ ನೀಡುವಂತೆ ದಾವಣಗೆರೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿತ್ತು. ಆದರೆ ಪರಿಹಾರ ನೀಡದ ಹಿನ್ನೆಲೆ ಬಸ್ಗಳನ್ನು ಇದೀಗ ಜಪ್ತಿ ಮಾಡಲಾಗಿದೆ.
ಬೆಂಗಳೂರಿನಿಂದ ದಾವಣಗೆರೆಗೆ ಬರುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ವಿಚಾರಣೆ ಮಾಡಿದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಬೆಳಗಾವಿ ಡಿಪೋದಿಂದ 41,11,200 ರೂ. ಪರಿಹಾರಕ್ಕೆ ಸೂಚನೆ ನೀಡುವಂತೆ ಸೂಚಿಸಿತ್ತು. ಇಲ್ಲಿವರೆಗೂ ಕಾಲು ಕಳೆದುಕೊಂಡ ವ್ಯಕ್ತಿಗೆ ಪರಿಹಾರ ನೀಡದ ಹಿನ್ನೆಲೆ ಬೆಳಗಾವಿ ಡಿಪೋಗೆ ಸೇರಿದ ಎರಡು ಬಸ್ಗಳನ್ನ ಜಪ್ತಿ ಮಾಡಿದ್ದಾರೆ.



