ದಾವಣಗೆರೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಾವಣಗೆರೆ ಸೆ.26 ರಂದು ಸಂ.5.30ಕ್ಕೆ ಹರಿಹರ ತಾಲ್ಲೂಕಿನ ದೊಗ್ಗಳ್ಳಿಯಲ್ಲಿ ಜನಪರ ಉತ್ಸವ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಕಾರ್ಯಕ್ರಮವನ್ನು ನಗರಾಭಿವೃದ್ದಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ ಬಸವರಾಜ ಉದ್ಘಾಟಿಸುವರು. ಹರಿಹರ ಕ್ಷೇತ್ರದ ಶಾಸಕ ಎಸ್.ರಾಮಪ್ಪ ಅಧ್ಯಕ್ಷತೆ ವಹಿಸುವರು. ಸಂಸದರಾದ ಡಾ.ಜಿ.ಎಂ.ಸಿದ್ದೇಶ್ವರ ಗೌರವಾನ್ವಿತ ಉಪಸ್ಥಿತರಿರುವರು.ಮುಖ್ಯ ಅತಿಥಿಗಳಾಗಿ ಹನಗವಾಡಿ ಗ್ರಾ.ಪಂ ಅಧ್ಯಕ್ಷರಾದ ಲಕ್ಷ್ಮವ್ವ, ಉಪಾಧ್ಯಕ್ಷರಾದ ಎಸ್.ಎಂ ರೇವಣಸಿದ್ದೇಶ್, ಗ್ರಾ.ಪಂ ಸದಸ್ಯರಾದ ಡಿ.ಎಸ್ ಹನುಮಂತಪ್ಪ, ಪುಪ್ಪಾ ನಾಗರಾಜ್ ಪಾಲ್ಗೊಳ್ಳುವರೆಂದು ತಿಳಿಸಿದ್ದಾರೆ.



