ದಾವಣಗೆರೆ: ರಾಹುಲ್‌ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಹಿನ್ನೆಲೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅಧ್ಯಕ್ಷತೆಯಲ್ಲಿ ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಎಚ್.ಆಂಜನೇಯ ನೇತೃತ್ವದ ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲಾ ಸಮಿತಿ ರಚಿಸಲಾಗಿದೆ. ಶಾಸಕ ಎಸ್.ರಾಮಪ್ಪ, ಟಿ. ರಘುಮೂರ್ತಿ, ಎಂಎಲ್ಸಿ ಮೋಹನ್ ಕೊಂಡಜ್ಜಿ, ಮಾಜಿ ಸಚಿವ ಡಿ. ಸುಧಾಕರ್, ಬಿ.ಎನ್. ಚಂದ್ರಪ್ಪ, ಕೆ. ಶಿವಮೂರ್ತಿ, ಮಾಜಿ ಎಂಎಲ್ಸಿ ಜಲಜಾನಾಯ್ಕ, ರಘು ಆಚಾರ್ ಒಳಗೊಂಡಂತೆ ಒಟ್ಟು 38 ಜನ ಸಮಿತಿಯಲ್ಲಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಡಿ.ಬಸವರಾಜ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಯಾತ್ರೆಯ ಯಶಸ್ಸಿಗಾಗಿ ಪ್ರತಿ ಕ್ಷೇತ್ರದಿಂದ ತಲಾ 5 ಸಾವಿರ ಜನರನ್ನು ಕರೆತರುವಂತೆ ಸೂಚನೆ ನೀಡಿದ್ದಾರೆ. ಅಕ್ಟೋಬರ್ 12ರಂದು ಸಂಜೆ ತುಮಕೂರು ಜಿಲ್ಲೆ ತಾವರೆಕೆರೆ ಮೂಲಕ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಲುಪಲಿದೆ. ಮರುದಿನ ಅಲ್ಲಿನ ಬೈಪಾಸ್ ಮೂಲಕ ಯಾತ್ರೆ ಶುರುವಾಗಲಿದೆ. ಬಾಲೇನಹಳ್ಳಿ, ಸಾಣೇಕೆರೆ, ಸಿದ್ದಾಪುರ, ಚಳ್ಳಕೆರೆ, ಗಿರಿಯಮ್ಮನಹಳ್ಳಿ, ಹಿರೇಹಳ್ಳಿ, ಕೋನಸಾಗರ, ಮೊಳಕಾಲ್ಮೂರು, ರಾಂಪುರ ಮೂಲಕ ಅ.17ರಂದು ಆಂಧ್ರಪ್ರದೇಶಕ್ಕೆ ತೆರಳಲಿದೆ. ದಾವಣಗೆರೆ ಜಿಲ್ಲೆಯಲ್ಲಿ ಯಾತ್ರೆ ಇರುವಿದಿಲ್ಲ ಎಂದರು.
ಈ ಸಂದರ್ಭದಲ್ಲಿ ಎಸ್ಸಿ ವಿಭಾಗದ ಅಧ್ಯಕ್ಷ ಬಿ.ಎಚ್.ವೀರಭದ್ರಪ್ಪ, ಚಂದ್ರು ಡೋಲಿ, ಕೆ.ಎಂ.ಮಂಜುನಾಥ್, ಸುಭಾನ್‌ಖಾನ್, ಎಂ.ಎಸ್.ವೀರಭದ್ರಪ್ಪ, ಡಿ. ಶಿವಕುಮಾರ್, ಕೆ.ಪಿ.ಮಂಜುನಾಥ್ ಇದ್ದರು.



