Connect with us

Dvgsuddi Kannada | online news portal | Kannada news online

ದಾವಣಗೆರೆ: ಕಕ್ಕರಗೊಳ್ಳದಲ್ಲಿ ಮದ್ಯ ವರ್ಜನ ಶಿಬಿರ ಕಾರ್ಯಕ್ರಮ

ದಾವಣಗೆರೆ

ದಾವಣಗೆರೆ: ಕಕ್ಕರಗೊಳ್ಳದಲ್ಲಿ ಮದ್ಯ ವರ್ಜನ ಶಿಬಿರ ಕಾರ್ಯಕ್ರಮ

ದಾವಣಗೆರೆ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ಟ್ರಸ್ಟ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದಾವಣಗೆರೆ ಕರ್ನಾಟಕ ಮದ್ಯಪಾನ ಸಂಯಮ ಮಂಡಳಿ ಸಹಯೋಗದೊಂದಿಗೆ ಮಧ್ಯ ವರ್ಜನ ಶಿಬಿರವನ್ನು ಕಕ್ಕರಗೊಳ್ಳ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಆರೋಗ್ಯ ಇಲಾಖೆಯ ಮನೋವೈದ್ಯ ಡಾ. ಗಂಗಮ್ ಸಿದ್ಧಾರಡ್ಡಿ ಮಾತನಾಡಿ, ಭಾರತದಲ್ಲಿ ಮದ್ಯ ವ್ಯಸನಿ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಶೇಕಡ 10 ರಿಂದ 15 ರಷ್ಟು ಜನ ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ. ಪ್ರತಿಯೊಂದು ಸಮಸ್ಯೆಗೆ ಪರಿಹಾರವಿದ್ದು ಬೇರೊಬ್ಬರೊಂದಿಗೆ ಚರ್ಚಿಸಿ ಸಮಸ್ಯೆಯಿಂದ ಬರಬಹುದಾಗಿದೆ. ಮತ್ತು ಮದ್ಯ ವಸನಕ್ಕೆ ಚಿಕಿತ್ಸೆಗೆ ಸಂಬಂಧಿಸಿದಂತೆ ಮೊದಲನೇ ಹೆಜ್ಜೆ ಆಪ್ತ ಸಮಾಲೋಚನೆ ಮಾಡುವುದಾಗಿದೆ ಮತ್ತು ವ್ಯಸನಿಗೆ ಅಥವಾ ತನಗೆ ಸಮಸ್ಯೆ ಇದೆ ಎಂಬುದು ಅರ್ಥಮಾಡಿಕೊಳ್ಳುವುದಾಗಿದೆ.ಮದ್ಯವ್ಯಸನ ಕ್ಕೆ ಚಿಕಿತ್ಸೆ ಲಭ್ಯವಿದ್ದು ಕೂಡಲೇ ಮನೋವೈದ್ಯದ ತಂಡವನ್ನು ಸಂಪರ್ಕಿಸಬಹುದು. ಹಾಗೂ ಎಲ್ಲರೂ ಸೇರಿ ವ್ಯಸನ ಮುಕ್ತ ಸಮಾಜವನ್ನು ನಿರ್ಮಿಸೋಣ ಎಂದು ಕರೆ ನೀಡಿದರು.

ನಂತರ ಕಕ್ಕರಗೊಳ್ಳ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆಡಳಿತ ವೈದ್ಯಾಧಿಕಾರಿಗಳಾದ ಡಾ. ವೆಂಕಟೇಶ್ ರವರು ಮಾತನಾಡಿ ಜನಜಂಗುಳಿ ಇರುವ ಪ್ರದೇಶದಲ್ಲಿ ಸ್ವಚ್ಛತೆ ಇಲ್ಲದಿದ್ದಲ್ಲಿ ಸಾಂಕ್ರಾಮಿಕ ರೋಗಗಳು ಹರಡಬಹುದಾಗಿದೆ. ಹಾಗಾಗಿ ಎಲ್ಲರೂ ಕೂಡ ಸ್ವಚ್ಛತೆಯನ್ನು ಕಾಪಾಡಬೇಕೆಂದು ಕರೆ ನೀಡಿದರು. ಕೋವಿಡ್ ಮೂರನೇ ಲಸಿಕೆ ಕೂಡ ಲಭ್ಯವಿದ್ದು ಪ್ರತಿಯೊಬ್ಬರೂ ಕೂಡ ಹಾಕಿಸಿಕೊಳ್ಳಬೇಕಾಗಿ ತಿಳಿಸಿದರು.

ವಿಪರೀತ ಮಳೆ ಹಾಗೂ ವಾತಾವರಣದಲ್ಲಿ ಪರಿಣಾಮದಿಂದಾಗಿ ಪ್ರಮುಖ ಡೆಂಗಿ ಜ್ವರ, ಚಿಕನ್ ಗುನ್ಯಾ ಹಾಗೂ ವೈರಲ್ ಜ್ವರ ಕಾಣಿಸಿಕೊಳ್ಳುತ್ತಿದ್ದೂ. ಈ ರೋಗಗಳ ನಿಯಂತ್ರಣ ಕ್ರಮವಾಗಿ ಮನೆ ಮನೆ ನಮ್ಮ ಆಶಾ ಕಾರ್ಯಕರ್ತೆಯಾರು ಆರೋಗ್ಯ ಸಿಬ್ಬಂದಿಗಳು ಲಾರ್ವ್ ಸರ್ವೇಯನ್ನು ಹಮ್ಮಿಕೊಂಡಿದ್ದು. ಲಾರ್ವ್ ಕಂಡುಬಂದಲ್ಲಿ ಲಾರ್ವ ನಾಶಕ ದ್ರಾವಣವನ್ನು ಸಿಂಪಡಿಸುವುದು, ಸಾರ್ವಜನಿಕರಲ್ಲಿ ಮನವಿ ಮನೆ ಮುಂದೆ ಇರುವ ಘನತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡ್ಬೇಕಾಗಿ ವಿನಂತಿಸಿದರು.

ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆ ಮನಶಾಸ್ತ್ರಜ್ಞ ವಿಜಯ್ ಕುಮಾರ್, ಸೈಕಿಯಾಟ್ರಿಕ್ ಸೋಶಿಯಲ್ ವರ್ಕರ್ ಸಂತೋಷ ಕುಮಾರ್ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮುಖ್ಯಸ್ಥರು ಯೋಜನಾಧಿಕಾರಿಗಳು ಹಾಜರಿದ್ದರು

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top