ದಾವಣಗೆರೆ: ಜಿಲ್ಲೆಯ ಹರಿಹರ ತಾಲ್ಲೂಕಿನ ಮಲೇಬೆನ್ನೂರು ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಒಬ್ಬ ಬಾಲಕಿ ಹಾಗೂ ಇಬ್ಬರು ಯುವಕರಿಗೆ ಕಚ್ಚಿವೆ. ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 6ನೇ ಬಡಾವಣೆಯಲ್ಲಿ ನಾಯಿಯೊಂದು ಮೂವರಿಗೆ ಕಚ್ಚಿದೆ.
ಹುಚ್ಚು ನಾಯಿ ಬಂದಿದೆ ಎಂದು ಸುದ್ದಿ ಹರಡಿತ್ತು. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಆತಂಕದ ವಾತಾವರಣ ಉಂಟಾಗಿತ್ತು.ಬೀದಿ ನಾಯಿಗಳನ್ನು ಕೂಡಲೇ ಸೆರೆಹಿಡಿಯಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.