ದಾವಣಗೆರೆ: ಜಿಲ್ಲಾ ತಂಬಾಕು ನಿಯಂತ್ರಣ ತನಿಖಾ ತಂಡದಿಂದ ಗಾಂಧಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿಕೊಂಡು ತಂಬಾಕು ದಾಳಿ ಕೈಗೊಳ್ಳಲಾಯಿತು.
ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳಮ್ಮು ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ನಡೆಸಿ, ಒಟ್ಟು 21 ಪ್ರಕರಣ ದಾಖಲಿಸಿ ರೂ.3000 ದಂಡ ವಿಧಿಸಲಾಗಿದೆ. ದಾಳಿಯ ವೇಳೆಯಲ್ಲಿ ಶೈಕ್ಷಣಿಕ ಸಂಸ್ಥೆಯ 100 ಗಜದ ಒಳಗೆ ತಂಬಾಕು ಉತ್ಪನ್ನಗಳ ಮಾರಾಟ ಮಾಡುವ ಅಂಗಡಿ ಮಾಲಿಕರಿಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೋಟಿಸ್ ನೀಡಿ, ನೋಟಿಸ್ ನೀಡಿದ 15 ದಿನದ ಒಳಗೆ ತಂಬಾಕು ಉತ್ಪನ್ನಗಳ ಮಾರಾಟ ನಿಲ್ಲಿಸಬೇಕು. ಒಂದು ವೇಳೆ ನಿಲ್ಲಿಸದೆ ಇದ್ದಲ್ಲಿ ಕಾನೂನು ಅನ್ವಯ ಕ್ರಮ ಕೈಗೊಳ್ಳಲಾಗುವುದೆಂದು ತನಿಖಾ ತಂಡ ಸೂಚಿಸಿದೆ.
ದಾಳಿಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಮೇಲ್ವಿಚಾರಣ ಅಧಿಕಾರಿ ಎಂ.ವಿ ಹೊರಕೇರಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೆಂಕಟಾಚಲ ಕುಮಾರ, ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿ ಉಮಾಪತಿ, ಜಿಲ್ಲಾ ಸಲಹೆಗಾರ ಸತೀಶ್ ಕಲಹಾಳ್, ಸಮಾಜ ಕಾರ್ಯಕರ್ತ ದೇವರಾಜ್ ಕೆ.ಪಿ, ಪರುಶುರಾಮ್ ನಾಯ್ಕ ಹಾಗೂ ಗಾಂಧಿ ನಗರ ಪೆÇಲೀಸ್ ಠಾಣೆಯ ಸಹಾಯಕ ಉಪ ಪೊಲೀಸ್ ನಿರೀಕ್ಷಕ ನಾಗರಾಜ್ ಭಾಗವಹಿಸಿದ್ದರು.



