ದಾವಣಗೆರೆ: ಆಗಸ್ಟ್ 13 ಮತ್ತು ಆ.14 ರಂದು ನಡೆದ ಕರ್ನಾಟಕ ರಾಜ್ಯ ಪವರ್ ಲಿಫ್ಟಿಂಗ್ ಅಸೋಸಿಯೇಷನ್ (ರಿ.) ಮತ್ತು ಶ್ರೀ ಸಾಹಿ ಫಿಟ್ನೆಸ್ ನಡೆಸಿದ ರಾಜ್ಯಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಮುಕ್ತಿ ವಿ. 48 ಕೆಜಿ ವಿಭಾಗದಲ್ಲಿ 195 ಕೆಜಿ ಎತ್ತುವುದರ ಮೂಲಕ ಚಿನ್ನದ ಪದಕವನ್ನು ಗಳಿಸಿದ್ದಾರೆ.
ಸೌಂದರ್ಯ ರಾಯ್ಕರ್ 64 ಕೆಜಿ ವಿಭಾಗದಲ್ಲಿ 170 ಕೆಜಿ ಎತ್ತುವುದರ ಮೂಲಕ ಚಿನ್ನದ ಪದಕವನ್ನು ಪಡೆದಿದ್ದಾರೆ. ಹಾಗೂ ಅನು ಬಂಡಗಾರ್ 48 ಕೆಜಿ ವಿಭಾಗದಲ್ಲಿ 125 ಕೆಜಿ ಎತ್ತಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಮತ್ತು ಅದಿತಿ.ಯು 58 ಕೆಜಿ ವಿಭಾಗದಲ್ಲಿ 125 ಕೆಜಿ ಎತ್ತಿ ಬೆಳ್ಳಿ ಪದಕವನ್ನು ಜಯಿಸಿದ್ದಾರೆ. ಮುಕ್ತಿ.ವಿ ಕರ್ನಾಟಕ ರಾಜ್ಯದ “strong women of karnata” ಎಂಬ ಬಿರುದನ್ನು ಗಳಿಸಿ ಕಾಲೇಜಿನ ಮತ್ತು ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಸೆಪ್ಟೆಂಬರ್ ನಲ್ಲಿ ಅಸ್ಸಾಂನಲ್ಲಿ ನಡೆಯುವ ರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಗೆ ಆಯ್ಕೆ ಆಗಿರುತ್ತಾರೆ. ಈ ಕ್ರೀಡಾಪಟುಗಳಿಗೆ ಕಾಲೇಜಿನ ಕ್ರೀಡಾ ಸಮಿತಿ ಸದಸ್ಯರುಗಳಾದ ಪೆÇ್ರ. ಭೀಮಣ್ಣ, ಪ್ರಾಂಶುಪಾಲರಾದ ಡಾ.ಅಂಜನಪ್ಪ ಎಸ್ ಆರ್, ಸುಣಗಾರ, ಗಿರೀಸ್ವಾಮಿ, ನಾರಾಯಣಸ್ವಾಮಿ, ಸದಾಶಿವ, ವೆಂಕಟೇಶ್‍ಬಾಬು, ಷಣ್ಮುಖ, ಜ್ಯೋತಿ, ವ್ಯವಸ್ಥಾಪಕರಾದ ಗೀತಾದೇವಿ, ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ರೇಖಾ ಎಂ ಆರ್ ಅಭಿನಂದಿಸಿದ್ದಾರೆ.



