Connect with us

Dvgsuddi Kannada | online news portal | Kannada news online

ದಾವಣಗೆರೆ: ದೇವರಾಜ ಅರಸು ಜಯಂತಿ; ಮೂರು ದಿನ ಕುಲಕಸುಬುಗಳ ವಸ್ತು ಪ್ರದರ್ಶನ-ಡಿಸಿ

ದಾವಣಗೆರೆ

ದಾವಣಗೆರೆ: ದೇವರಾಜ ಅರಸು ಜಯಂತಿ; ಮೂರು ದಿನ ಕುಲಕಸುಬುಗಳ ವಸ್ತು ಪ್ರದರ್ಶನ-ಡಿಸಿ

ದಾವಣಗೆರೆ: ಹಿಂದುಳಿದ ವರ್ಗಗಳ ನೇತಾರ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ರವರ 107 ನೇ ಜಯಂತಿ ಯನ್ನು ಸರ್ಕಾರದ ನಿರ್ದೇಶನದಂತೆ ‘ಕಾಯಕ ಸಮುದಾಯಗಳ ಕುಲಕಸುಬುಗಳ ವಸ್ತು ಪ್ರದರ್ಶನ’ ಏರ್ಪಡಿಸುವ ಮೂಲಕ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಹೇಳಿದರು.

ಇತ್ತೀಚೆಗೆ ಜಿಲ್ಲಾಡಳಿತ ಭವನದಲ್ಲಿ ನಡೆದ ದೇವರಾಜ ಅರಸು ಜಯಂತಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಆಗಸ್ಟ್ 21, 22 ಹಾಗೂ 23 ರಂದು 3 ದಿನಗಳ ಕಾಲ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗುವುದು. ಆಗಸ್ಟ್ 21 ರಂದು ದೇವರಾಜ ಅರಸು ಬಡಾವಣೆಯಲ್ಲಿ ಇರುವ ಶ್ರೀಯುತರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ವಿವಿಧ ಕಲಾತಂಡಗಳ ಮೆರವಣಿಗೆಯೊಂದಿಗೆ ವಿವಿಧ ಸಮಾಜದ ಕುಲಕಸುಬುಗಳ ವೇಷ ಭೂಷಣಗಳ ಕಲಾವಿದರು ಹೆಜ್ಜೆ ಹಾಕಲಿದ್ದಾರೆ.

ನಂತರ ಮೆರವಣಿಗೆ ಮಹಾನಗರ ಪಾಲಿಕೆ ಆವರಣ ತಲುಪಿ ವೇದಿಕೆ ಕಾರ್ಯಕ್ರಮ ಆರಂಭವಾಗಲಿದೆ ಗಣ್ಯರ ಉಪಸ್ಥಿತಿಯೊಂದಿಗೆ ಶ್ರೀಯುತರು ನಾಡಿಗೆ ನೀಡಿರುವ ಕೊಡುಗೆಗಳ ಬಗೆಗೆ ಉಪನ್ಯಾಸ ಇರಲಿದೆ ಎಂದರು.ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ್ ಮಾಹಿತಿ ನೀಡಿ ಈ ಮೂರೂ ದಿನ ವಿವಿಧ ಕಾರ್ಯಕ್ರಮಗಳು ಇದ್ದು ವೇದಿಕೆ ಆವರಣದಲ್ಲಿ ವಿವಿಧ ಹಿಂದುಳಿದ ವರ್ಗಗಳ ಕುಲಕಸುಬುಗಳ ಮಳಿಗೆಗಳು ಇರಲಿವೆ, ಸ್ಥಳೀಯ ಕಲಾವಿದರುಗಳಿಗೆ ಅವಕಾಶವಿದ್ದು, ಕೋಲಾಟ, ಹಗಲು ವೇಷ, ಡೂಳ್ಳು ಕುಣಿತ, ನಾದಸ್ವರ ಮುಂತಾದ ಕಾರ್ಯಕ್ರಮಗಳು ಇರಲಿವೆ. ಹಾಗೂ ಶಾಲಾ ಮಕ್ಕಳಿಗೆ ಯೋಗ ಸ್ಪರ್ಧೆ ಆಯೋಜಿಸುವುದು ಮತ್ತು ಶಾಲಾ ಮಕ್ಕಳಿಗೆ ಗಿಡ ನೆಡುವ ಕಾರ್ಯಕ್ರಮ ಇರಲಿವೆ ಎಂದರು.

ಸಭೆಯಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಎ.ನಾಗರಾಜ್, ಜಿ.ಪಂ.ಅಧಿಕಾರಿ ಸೌಮ್ಯ, ಸಮಾಜ ಕಲ್ಯಾಣಾಧಿಕಾರಿ ರೇಶ್ಮಾ ಕೌಸರ್, ವಿವಿಧ ಸಮುದಾಯಗಳ , ಸಂಘ ಸಂಸ್ಥೆಗಳ ಮುಖಂಡರು ಭಾಗವಹಿಸಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top