Connect with us

Dvgsuddi Kannada | online news portal | Kannada news online

ದಾವಣಗೆರೆ: ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ; 1ರಿಂದ 19 ವರ್ಷದ ಎಲ್ಲ ಮಕ್ಕಳಿಗೆ ಜಂತು ನಿವಾರಣಾ ಮಾತ್ರೆ ವಿತರಿಸುವ ಗುರಿ

ದಾವಣಗೆರೆ

ದಾವಣಗೆರೆ: ರಾಷ್ಟ್ರೀಯ ಜಂತುಹುಳು ನಿವಾರಣಾ ದಿನ; 1ರಿಂದ 19 ವರ್ಷದ ಎಲ್ಲ ಮಕ್ಕಳಿಗೆ ಜಂತು ನಿವಾರಣಾ ಮಾತ್ರೆ ವಿತರಿಸುವ ಗುರಿ

ದಾವಣಗೆರೆ: ವಿಶ್ವ ಆರೋಗ್ಯ ಸಂಸ್ಥೆ ಅದರ ಲೆಕ್ಕಚಾರದ ಪ್ರಕಾರ ಭಾರತದಲ್ಲಿ ಒಂದನೇ ವಯಸ್ಸಿನಿಂದ 16ನೇ ವಯಸ್ಸಿನ ಮಕ್ಕಳಲ್ಲಿ 21.01 ಕೋಟಿ ಮಕ್ಕಳ ಕರುಳಿನಲ್ಲಿ ಪರಾವಲಂಬಿ ಹುಳುಗಳಿರುವ ಅಪಾಯದಲ್ಲಿದ್ದಾರೆ ಎಂದು ತಿಳಿಸಿದೆ. ಇದು ಈ ವಯಸ್ಸಿನ ಮಕ್ಕಳಲ್ಲಿ ಶೇ.68 ಆಗಿದೆ. ಈ ರೀತಿಯ ಪರಾವಲಂಬಿ ಹುಳುಗಳು ಅಶುಚಿತ್ವ ಹಾಗೂ ಆರೋಗ್ಯಕರವಲ್ಲದ ಸ್ಥಿತಿಗಳಿಂದ ಬರುತ್ತವೆ. ಜಂತುಹುಳುಗಳು ಮಕ್ಕಳ ಆರೋಗ್ಯವನ್ನು ಬಹಳವಾಗಿ ಹಾಳು ಮಾಡುತ್ತವೆ. ಇದರಿಂದಾಗಿ ಮಕ್ಕಳು ಓದಿನಲ್ಲಿ ಏಕಾಗ್ರತೆ ರಕ್ತಹೀನತೆ, ನೆನಪಿನ ಶಕ್ತಿ, ಶಾಲೆಯಲ್ಲಿ ಕಲಿಕೆಯ ಸಾಮಥ್ರ್ಯಗಳನ್ನು ಕುಗ್ಗಿಸುತ್ತವೆ.

ಮಕ್ಕಳ ದೇಹದ ಬೆಳವಣಿಗೆಯನ್ನು ಕುಂಠಿತಗೊಳಿಸುತ್ತದೆ. ಅಪೌಷ್ಟಿಕತೆ ಮತ್ತು ರಕ್ತಹೀನತೆಯನ್ನು ಭಾರತದಲ್ಲಿ ಬಹಳ ಚನ್ನಾಗಿ ದಾಖಲಿಸಲಾಗಿವೆ 06 ರಿಂದ 59 ತಿಂಗಳ ಮಕ್ಕಳಲ್ಲಿ ಬಹುತೇಕ 10 ರಲ್ಲಿ 07 ಮಕ್ಕಳು ರಕ್ತಹೀನತೆ ಹಾಗೂ ಸರಿ ಸುಮಾರು 43 ಮಕ್ಕಳು ಕಡಿಮೆ ತೂಕ ಹೊಂದಿರುತ್ತಾರೆ. 15 ರಿಂದ 19 ವರ್ಷದ ಮಕ್ಕಳಲ್ಲಿ ರಕ್ತ ಹೀನತೆಯು ಹೆಣ್ಣು ಮಕ್ಕಳಲ್ಲಿ ಶೇ 56 ರಷ್ಟು ಇರುತ್ತದೆ ಹೆಚ್ಚಿನ ಜಂತುಹುಳು ಭಾದೆ ಇರುವ ಮಕ್ಕಳಲ್ಲಿ ಹೆಚ್ಚಿನ ಸಮಯ ಖಾಯಿಲೆಯಿಂದ ಬಳಲುತ್ತಾರೆ. ಶಾಲಾ ಹಾಜರಾತಿ ಕುಸಿಯುತ್ತದೆ. ಇದರಿಂದಾಗಿ ಜೀವಮಾನದ ಜೀವಿತ ಗುಣಮಟ್ಟ ತುಂಬಾ ಇಳಿಯುತ್ತದೆ.

ಜಂತುಹುಳು ನಿವಾರಣಾ ಮಾತ್ರೆ (ಅಲಬೆಂಡೊಜೋಲ್) ಮಾತ್ರೆಯನ್ನು ಮಕ್ಕಳಿಗೆ ಸೇವಿಸಲು ಮಾಡುವ ಪ್ರಯತ್ನ ಅಭಿವೃದ್ದಿಯಲ್ಲಿ ಬಹಳ ಲಾಭಕರ ಏಕೆಂದರೆ ಇದು ವಿದ್ಯಾಭ್ಯಾಸ ಆರ್ಥಿಕತೆಯ ಫಲಿತಾಂಶದಲ್ಲಿ ಏರುಮುಖದ ಬೆಳವಣಿಗೆಯನ್ನು ನೀಡುತ್ತದೆ. ಸಾಮೂಹಿಕ ಜಂತುಹುಳು ನಿವಾರಣೆಯು ಮಕ್ಕಳ ವಿದ್ಯಾಭ್ಯಾಸ ಉದ್ಯೋಗದ ಅಯ್ಕೆ ಅವರ ಗಳಿಕೆ ಸಾಮಥ್ರ್ಯ ಅವರ ಧೀರ್ಘಕಾಲದ ಅರೋಗ್ಯಕ್ಕೆ ಸಾಮೂಹಿಕ ಜಂತುಹುಳು ನಿವಾರಣೆ ಮಕ್ಕಳ ಆರೋಗ್ಯ ಅವರ ವಿದ್ಯಾಭ್ಯಾಸ ಮತ್ತು ಉತ್ತಮ ಜೀವನ ಅರಸುವಿಕೆಗೆ ಸಹಾಯ ಮಾಡುತ್ತದೆ.
2009 ರಿಂದ ಭಾರತ ಸರ್ಕಾರವು ತನ್ನ ಎಲ್ಲಾ ರಾಜ್ಯಗಳಿಗೆ ಅವುಗಳ ಮಕ್ಕಳಿಗೆ ಸಾಮೂಹಿಕ ಜಂತುಹುಳು ನಿವಾರಣಾ ಕಾರ್ಯಕ್ರವನ್ನು ಹಮ್ಮಿಕೊಳ್ಳಲು ಶಿಫಾರಸ್ಸು ಮಾಡಿದೆ. 05 ವರ್ಷಗಳ ಕೆಳಗಿನ ಎಲ್ಲಾ ಮಕ್ಕಳಿಗೆ ವರ್ಷದಲ್ಲಿ ಎರಡು ಬಾರಿ ಜಂತುಹುಳು ನಿವಾರಣಾ (ಅಲಬೆಂಡೋಜೋಲ್) ಹಾಗೂ ಎ ಅನ್ನಾಂಗವನ್ನು ಸೇವಿಸಲು ಕ್ರಮ ತೆಗೆದುಕೊಳ್ಳಲು ಶಿಫಾರಸ್ಸು ಮಾಡಿದೆ. ಇದರ ಜೊತೆಗೆ ವಾರದ ಕಬ್ಬಿಣಾಂಶ ಮತ್ತು ಪೋಲಿಕ್ ಆಮ್ಲ ಮಾತ್ರೆಗಳ ಪೂರಕ ಕಾರ್ಯಕ್ರಮದ ಜೊತೆಗೆ ವರ್ಷದಲ್ಲಿ ಎರಡು ಬಾರಿ ಜಂತುಹುಳು ನಿವಾರಣಾ ಮಾತ್ರೆಯನ್ನು ನೀಡಲಾಗುತ್ತದೆ. (10-08-2022ರಂದು ಎನ್.ಡಿ.ಡಿ ದಿನ ಮತ್ತು 17-08-2022ರಂದು ಮಾಪ್‍ಅಪ್ ದಿನ)

ಕಾರ್ಯಕ್ರಮದ ಅನುಸಾರವಾಗಿ ದಿನಾಂಕ10-08-2022ರಂದು ಎನ್.ಡಿ.ಡಿ ದಿನ ಮತ್ತು ದಿನಾಂಕ:17-08-2022ರಂದು ಮಾಪ್‍ಅಪ್ ದಿನ ಜಿಲ್ಲಾ ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಶಾಶ್ವತ ಅನುದಾನ ರಹಿತ ಶಾಲೆಯ ಎಲ್ಲಾ ಮಕ್ಕಳಿಗೆ ಜಂತುಹುಳು ನಿವಾರಣಾ ಮಾತ್ರೆಯನ್ನು ಒಂದನೇ ವಯಸ್ಸಿನ ಎಲಾ ಮಕ್ಕಳಿಗೆ ಸಾಮೂಹಿಕವಾಗಿ ಸೇವಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ದಾವಣಗೆರೆ ಜಿಲ್ಲೆಯ 1558 ಸಂಖ್ಯೆಯ ಸರ್ಕಾರಿ ಶಾಲೆಗಳು ಮತ್ತು ಅನುದಾನಿತ ಶಾಲೆಗಳು, 442 ಅನುದಾನ ರಹಿತ ಶಾಲೆಗಳು,
27 ವಸತಿ ಶಾಲೆಗಳು, 1723 ಸಂಖ್ಯೆಯ ಅಂಗನವಾಡಿಗಳಲ್ಲಿ ಮತ್ತು ಪಿ.ಯು.ಕಾಲೇಜಿನಲ್ಲಿ ಸರ್ಕಾರಿ ಮತ್ತು ಅನುದಾನಿತ ಸೇರಿ 136 ದಿನಾಂಕ10-08-2022ರಂದು ಎನ್.ಡಿ.ಡಿ ದಿನ ಮತ್ತು ದಿನಾಂಕ:17-08-2022ರಂದು ಮಾಪ್‍ಅಪ್ ದಿನವಾಗಿ 1 ರಿಂದ 19 ನೇ ವಯಸ್ಸಿನ ಎಲ್ಲಾ ಮಕ್ಕಳಿಗೆ ಸಾಮೂಹಿಕ ಜಂತುಹುಳು ನಿವಾರಣಾ ಮಾತ್ರೆಯನ್ನು ಸೇವಿಸಲು ಕ್ರಮ ತೆಗೆದುಕೊಳ್ಳಲಾಗಿದೆ.

ಜಿಲ್ಲೆಯ ಎಲ್ಲಾ ಶಾಲೆಯ ನೋಡಲ್ ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಆರೋಗ್ಯ ಇಲಾಖೆಯ ಸಿಬ್ಬಂದಿಗಳೂ, ಆಶಾಗಳಿಗೆ ತರಬೇತಿಯನ್ನು ನೀಡಲಾಗಿದೆ ಎಲ್ಲಾ ಶಾಲೆಯ ಶಾಲೆಗಳು ಅಂಗನವಾಡಿಗಳಿಗೆ ಜಂತುಹುಳು ನಿವಾರಣಾ ಮಾತ್ರೆಗಳನ್ನು ವಿತರಿಸಲಾಗಿದೆ ಈ ದಿವಸದಂದು 573751 ವಿದ್ಯಾರ್ಥಿಗಳಿಗೆ ಹಾಗೂ (1-19 ವಯಸ್ಸಿನ) ಜಂತುಹುಳು ನಿವಾರಣಾ ಮಾತ್ರೆಯನ್ನು ಸೇವಿಸಲು ಗುರಿಹೊಂದಲಾಗಿದೆ. ಈ ಕಾರ್ಯಕ್ರವನ್ನು ಶೇ100 ರಷ್ಟು ಯಶಸ್ವಿಗೊಳಿಸಲು ಹಾಗೂ ನಮ್ಮ ಜಿಲ್ಲೆಯ ಎಲ್ಲಾ ಮಕ್ಕಳ ಆರೋಗ್ಯದ ಹಿತದೃಷ್ಠಿಯಿಂದ ನಾವುಗಳೆಲ್ಲರೂ ಭಾಗಿಯಾಗೋಣ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top