Connect with us

Dvgsuddi Kannada | online news portal | Kannada news online

ನಾಳೆ ಜಿಲ್ಲಾ ಉಸ್ತುವಾರಿ ಸಚಿವ ದಾವಣಗೆರೆಗೆ ಆಗಮನ

ದಾವಣಗೆರೆ

ನಾಳೆ ಜಿಲ್ಲಾ ಉಸ್ತುವಾರಿ ಸಚಿವ ದಾವಣಗೆರೆಗೆ ಆಗಮನ

ದಾವಣಗೆರೆ: ನಗರಾಭಿವೃದ್ದಿ ಹಾಗೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ ಅವರು ದಾವಣಗೆರೆ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.

ಜುಲೈ.13 ರಂದು ಸಾಗರ ಮತ್ತು ನ್ಯಾಮತಿ ರಸ್ತೆಯ ಮೂಲಕ ಮಧ್ಯಾಹ್ನ 1 ಗಂಟೆಗೆ ಹೊನ್ನಾಳಿ ತಲುಪುವರು. ನಂತರ ಹೊನ್ನಾಳಿಯ ಶ್ರೀಮಾರಿಕಾಂಭ ದೇವಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಹಾಗೂ ಮಧ್ಯಾಹ್ನ 3.30ಕ್ಕೆ ದಾವಣಗೆರೆ ಪ್ರವಾಸಿ ಮಂದಿರಕ್ಕೆ ಆಗಮಿಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಹಾಗೂ ಸಾರ್ವಜನಿಕರ ಭೇಟಿ ಮಾಡುವರು.

ಸಂಜೆ 6 ಗಂಟೆಗೆ ಜಯದೇವ ವೃತ್ತದಲ್ಲಿ ನಡೆಯುವ ಜಗದ್ಗುರು ಶ್ರೀಜಯದೇವ ಮುರುಘರಾಜೆಂದ್ರ ಮಹಾಸ್ವಾಮಿಗಳವರ 65ನೇ ಸ್ಮರಣೋತ್ಸವ ಹಾಗೂ ಶರಣ ಸಂಸ್ಕೃತಿ ಉತ್ಸವ-ಅಥಣಿ ಶಿವಯೋಗಿಗಳವರ ಲಿಂಗಕ್ಯ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸುವರು. ರಾತ್ರಿ 07 ಗಂಟೆಗೆ ರಸ್ತೆ ಮೂಲಕ ಹಿರಿಯೂರುಗೆ ಪ್ರಯಾಣ ಬೆಳೆಸುವರೆಂದು ಅವರ ಅಪ್ತ ಕಾರ್ಯದರ್ಶಿ ಸಿ ನಾಗರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top